ಸ್ವಾತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ ಸೈ ರಾ ನರಸಿಂಹ ರೆಡ್ಡಿ ಸಿನಿಮಾ ಶೂಟಿಂಗ್ ಮತ್ತೆ ಆರಂಭವಾಗಿದೆ. ಕೆಲವು ದಿನಗಳ ಹಿಂದೆ ಹೈದರಾಬಾದ್ನಲ್ಲಿ ಹಾಕಿದ್ದ ಬೃಹತ್ ಸೆಟ್ ಬೆಂಕಿಗೆ ಆಹುತಿಯಾಗಿ ಚಿತ್ರತಂಡಕ್ಕೆ ಭಾರಿ ನಷ್ಟವಾಗಿತ್ತು.
ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ರಾಮ್ಚರಣ್ ತೇಜ ನಿರ್ಮಿಸುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ನಯನತಾರ ಸೇರಿದಂತೆ ದೊಡ್ಡ ನಟ-ನಟಿಯರ ದಂಡೇ ಸಿನಿಮಾದಲ್ಲಿದೆ. ಸುದೀಪ್ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರಂತೆ.
ಇನ್ನು ಸ್ವೀಟಿ ಅನುಷ್ಕಾ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರಂತೆ. ಅನುಷ್ಕಾ ಕೇಳಿದಷ್ಟು ಹಣ ನೀಡಲು ನಿರ್ಮಾಪಕ ರಾಮ್ಚರಣ್ ಕೂಡ ಓಕೆ ಎಂದಿದ್ದಾರೆ.
19 ನೇ ಶತಮಾನದ ಕಥೆಗೆ ಸಂಬಂಧಿಸಿದ ಚಿತ್ರ ಇದಾಗಿದ್ದು ಪ್ರೇಕ್ಷಕರಂತೂ ಚಿತ್ರವನ್ನು ತೆರೆ ಮೇಲೆ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಎಷ್ಟೋ ಮಂದಿ ಟೀಸರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಕೊನಿಡೇಲ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಲಿದೆ.