ಮುಂಬೈ: ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂತಾಪ ಸೂಚಿಸಿದ್ದು, ಇವರಿಬ್ಬರ ಮಧ್ಯೆ ಇದ್ದ ಬಾಂಧವ್ಯವನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ.
ಖೇರ್ ಅವರು ಇನ್ಸ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಸುಶಾಂತ್ ಜೊತೆಗಿನ ಒಡನಾಟದ ಕುರಿತು ತಿಳಿಸಿದ್ದಾರೆ. ಎಂ.ಎಸ್. ಧೋನಿ ಸಿನಿಮಾದ ಸಂದರ್ಭದಲ್ಲಿ ಅನುಪಮ್ ಖೇರ್-ಸುಶಾಂತ್ ತಂದೆ ಮಗನ ಪಾತ್ರ ಮಾಡಿದ್ದರು. ಅಲ್ಲಿನ ತಮ್ಮ ಒಡನಾಟವನ್ನು ಮೆಲುಕು ಹಾಕುತ್ತಾ ಭಾವುಕರಾಗಿದ್ದಾರೆ.
- " class="align-text-top noRightClick twitterSection" data="
">
ಚಿತ್ರೀಕರಣದ ಸಂದರ್ಭದಲ್ಲಿ ಸುಶಾಂತ್ ಅವರು ಸಕಾರಾತ್ಮಕತೆ ಮತ್ತು ಆಶಾದಾಯಕ ಹುಮ್ಮಸ್ಸು ಹೊಂದಿದ್ದರು. ಇನ್ನಷ್ಟು ಏನಾದರು ಸಾಧಿಸಬೇಕು ಎಂಬ ಛಲ ಹೊಂದಿದ್ದರು ಎಂದು ಖೇರ್ ತಿಳಿಸಿದ್ದಾರೆ. 5 ನಿಮಿಷದ ವಿಡಿಯೋದಲ್ಲಿ ಪ್ರೀತಿ, ಸಕಾರಾತ್ಮಕತೆ ಮತ್ತು ಸಹಾನುಭೂತಿಯನ್ನು ಹಂಚಲು ಖೇರ್ ವಿನಂತಿಸಿದ್ದಾರೆ.