ETV Bharat / sitara

ದೇವರ ನಾಡಿನ ಸುಂದರ ಪ್ರಕೃತಿ ನಡುವೆ ಪತಿಯೊಂದಿಗೆ ಎಂಜಾಯ್ ಮಾಡುತ್ತಿರುವ ಅನು - Big Boss Former Contestant

ಮಾಜಿ ಬಿಗ್​​ ಬಾಸ್​​ ಸ್ಪರ್ಧಿ ಅಯ್ಯಪ್ಪ ಹಾಗೂ ಕಿರುತೆರೆ ನಟಿ ಅನು ಪೂವಮ್ಮ ತಮ್ಮ ಕೆಲಸಗಳಿಂದ ಬಿಡುವು ಪಡೆದು ಕೇರಳದ ವಯನಾಡಿಗೆ ತೆರಳಿದ್ದು ಅಲ್ಲಿನ ಸುಂದರ ತಾಣಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಫೋಟೋಗಳನ್ನು ಈ ಜೋಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Anu Poovamma and Ayyappa
ಕ್ರಿಕೆಟಿಗ ಅಯ್ಯಪ್ಪ ದಂಪತಿ
author img

By

Published : Jan 27, 2021, 10:20 AM IST

ಸೆಲಬ್ರಿಟಿ ದಂಪತಿ ಅನು ಪೂವಮ್ಮ ಹಾಗೂ ಕ್ರಿಕೆಟಿಗ ಎನ್.ಸಿ. ಅಯ್ಯಪ್ಪ ಸದ್ಯ ಹಾಲಿಡೇ ಮೂಡ್​​​​​​​​​​​​​​​​​​​​​​ನಲ್ಲಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಬಿಡುವು ಮಾಡಿಕೊಂಡಿರುವ ಈ ಜೋಡಿ ಈಗ ಕೇರಳದ ವಯನಾಡಿಗೆ ತೆರಳಿ ಅಲ್ಲಿನ ಸುಂದರ ಪ್ರಕೃತಿ ನಡುವೆ ಕಾಲ ಕಳೆಯುತ್ತಿದೆ. ಈ ಜೋಡಿ ಇತ್ತೀಚೆಗೆ ತಮ್ಮ 2ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತ್ತು.

Anu Poovamma and Ayyappa
ಕೇರಳದ ವಯನಾಡಿನಲ್ಲಿ ಕ್ರಿಕೆಟಿಗ ಅಯ್ಯಪ್ಪ ದಂಪತಿ

ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ಹಣ ಸಹಾಯ ಮಾಡಿದ ಸಿನಿ ಕಲಾವಿದರು

ವಯನಾಡಿನಲ್ಲಿ ಪ್ರಕೃತಿ ನಡುವೆ ಕಾಲ ಕಳೆದಿರುವುದು ಮಾತ್ರವಲ್ಲದೆ, ಸಾಹಸ ಕ್ರೀಡೆಗಳಲ್ಲಿ ಕೂಡಾ ಅವರು ಪಾಲ್ಗೊಂಡಿದ್ದಾರೆ. ಕಿರುತೆರೆ ನಟಿ ಅನು ಹಾಗೂ ಕ್ರಿಕೆಟರ್, ಬಿಗ್ ಬಾಸ್ ಮಾಜಿ ಸ್ಪರ್ಧಿ ಅಯ್ಯಪ್ಪ 2018 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅನು ಹಾಗೂ ಅಯ್ಯಪ್ಪ ಇವರಿಬ್ಬರೂ ಕನ್ನಡ ಪ್ರೇಕ್ಷಕರಿಗೆ ಅಪರಿಚಿತರೇನಲ್ಲ. ಕರ್ವ, ಕಥಾಚಿತ್ರ, ಲೈಫ್ ಸೂಪರ್ ಸಿನಿಮಾಗಳಲ್ಲಿ ನಟಿಸಿರುವ ಅನು, ಮುದ್ದುಲಕ್ಷ್ಮಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ನಂದಿನಿ ಧಾರಾವಾಹಿಯಲ್ಲಿ ಕೂಡಾ ನಟಿಸಿರುವ ಅನು ಪೂವಮ್ಮ ಅದರಲ್ಲಿ ದೇವಸೇನಾ ಪಾತ್ರ ನಿರ್ವಹಿಸಿದ್ದರು. ಸದ್ಯಕ್ಕೆ ಅನು ಸದ್ಯ ಬಣ್ಣದ ಲೋಕದಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಇನ್ನು ಕ್ರಿಕೆಟರ್ ಆಗಿರುವ ಅಯ್ಯಪ್ಪ ಬಿಗ್ ಬಾಸ್ ನಲ್ಲಿಯೂ ಭಾಗವಹಿಸುವ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದರು.

Anu Poovamma and Ayyappa
ಅಯ್ಯಪ್ಪ, ಅನು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.