ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್ ಕಟ್ ಹೇಳುತ್ತಿರುವ ಶಿವಪ್ಪ ಸಿನಿಮಾ ಇದೀಗ ಸ್ಯಾಂಡಲ್ವುಡ್ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಚಿತ್ರಕ್ಕೆ ಶಿವಪ್ಪ ಎಂಬ ಟೈಟಲ್ ಫಿಕ್ಸ್ ಆದಾಗಿನಿಂದ ಈ ಚಿತ್ರವು ಶಿವರಾಜ್ ಕುಮಾರ್ ಅವರನ್ನು ಕೇಂದ್ರೀಕರಿಸಿ ನಿರ್ಮಾಣವಾಗುತ್ತಿದೆ ಎಂಬ ಮಾತುಗಳೂ ಕೇಳಿ ಬಂದಿದ್ದವು. ಇದೆಲ್ಲದರ ನಡುವೆ ಸಿನಿಮಾದಲ್ಲಿ ಶಿವಣ್ಣನಿಗೆ ಜೋಡಿ ಯಾರಾಗ್ತಾರೆ ಎಂಬ ಕುತೂಹಲವೂ ಅಭಿಮಾನಿಗಳಲ್ಲಿ ಮೂಡಿದ್ದು, ಆ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
![Anjali will be the heroine in Shivappa Cinema](https://etvbharatimages.akamaized.net/etvbharat/prod-images/9604394_thumb2.png)
ಹೌದು ಡಾಲಿ ಧನಂಜಯ್, ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಒಟ್ಟಿಗೆ ನಟಿಸುತ್ತಿರುವ ಶಿವಪ್ಪ ಚಿತ್ರದಲ್ಲಿ ಅಂಜಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು, ತೆಲುಗು ಸಿನಿಮಾಗಳಲ್ಲಿ ಮಿಂಚಿದ್ದ ನಟಿ, ಪುನೀತ್ ರಾಜ್ಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ಪುನೀತ್ಗೆ ಜೋಡಿಯಾಗಿ ನಟಿಸಿದ್ದರು. ಇದೀಗ ಅಪ್ಪು ಸೋದರನ ಚಿತ್ರದಲ್ಲಿಯೂ ಅಂಜಲಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ.
![Anjali will be the heroine in Shivappa Cinema](https://etvbharatimages.akamaized.net/etvbharat/prod-images/9604394_thumb3.png)
ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ನಟಿಸಿರುವ ಅಂಜಲಿ ಈ ಸಿನಿಮಾದಲ್ಲಿ ಶಿವರಾಜ್ಕುಮಾರ್ಗೆ ಜೋಡಿಯಾಗಲಿದ್ದಾರೆ. ತೆಲುಗಿನ 'ಸೀತಮ್ಮ ವಾಕಿಟ್ಲೋ ಸಿರಿ ಮಲ್ಲೆಚೆಟ್ಟು', ತಮಿಳಿನ 'ಸಿಂಧಬಾದ್' ಹಾಗೂ 'ಸಿಂಗಂ 2' ಚಿತ್ರ ಸೇರದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
![Anjali will be the heroine in Shivappa Cinema](https://etvbharatimages.akamaized.net/etvbharat/prod-images/9604394_thumb.png)
ಕನ್ನಡದಲ್ಲಿ ಈ ಹಿಂದೆಯೇ ತೆರೆ ಕಂಡಿದ್ದ ರತ್ನಜ ನಿರ್ದೇಶನ 'ಹೊಂಗನಸು' ಸಿನಿಮಾದಲ್ಲಿಯೂ ಅಂಜಲಿ ನಟಿಸಿದ್ದರು. ಇದೀಗ ಶಿವರಾಜ್ ಕುಮಾರ್ ಜೊತೆ ಪರದೆ ಹಂಚಿಕೊಳ್ಳುತ್ತಿದ್ದು, ಅಂಜಲಿ ಕನ್ನಡದಲ್ಲಿ ನಟಿಸುತ್ತಿರುವ ಮೂರನೇ ಚಿತ್ರ ಶಿವಪ್ಪ.