ETV Bharat / sitara

ಒದ್ದೆ ಕಣ್ಣಲ್ಲಿ ಮಗಳನ್ನು ಹುಡುಕುತ್ತಾ ಹೊರಟ ಅನಂತ್​​​ನಾಗ್​​! - ಕವಲುದಾರಿ ಸಿನಿಮಾ

ಪಿಆರ್​ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ 'ಕವಲುದಾರಿ' ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗಿದೆ. 'ಇದೇ ದಿನ... ಆ ನೆನ್ನೆ ನಾಳೆ' ಈ ಹಾಡಿನಲ್ಲಿ ಅನಂತ್​ನಾಗ್ ಕಳೆದುಕೊಂಡ ಮಗಳನ್ನು ಹುಡುಕುವ ಎಮೋಶನಲ್ ದೃಶ್ಯಗಳನ್ನು ನೋಡಬಹುದು.

'ಕವಲುದಾರಿ' ಚಿತ್ರದ ದೃಶ್ಯ
author img

By

Published : Mar 12, 2019, 9:08 PM IST

ಅನಂತ್​ನಾಗ್ ಅವರು ಎಂತಹ ಅದ್ಭುತವಾದ ನಟ ಎಂಬುದು 80ರ ದಶಕದಲ್ಲೇ ಪ್ರೂವ್ ಆಗಿದೆ. ಆದರೆ ಇತ್ತೀಚಿನ ಅವರ ಸಿನಿಮಾಗಳನ್ನು ನೋಡಿ ಥಿಯೇಟರ್​​​ನಿಂದ ಹೊರಬಂದವರಿಗೆ ಅವರ ಮನೋಜ್ಞ ಅಭಿನಯವೇ ಕಾಡುವಂತಾಗಿದೆ.

  • " class="align-text-top noRightClick twitterSection" data="">

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾದಲ್ಲಿ ಜ್ಞಾಪಕ ಶಕ್ತಿಯನ್ನು ಕಳೆದುಕೊಂಡ ತಂದೆ ಪಾತ್ರದಲ್ಲಿ ಅನಂತ್​​​ನಾಗ್ ಎಲ್ಲರಿಗೂ ಇಷ್ಟವಾಗಿದ್ದರು. ಇದೀಗ 'ಕವಲುದಾರಿ' ಸಿನಿಮಾದಲ್ಲಿ ಅನಂತ್ ನಾಗ್ ಮಗಳನ್ನು ಕಳೆದುಕೊಂಡ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್ ರಾಜ್​​ಕುಮಾರ್ ಅವರ ಪಿಆರ್​ಕೆ ಬ್ಯಾನರ್​ ಅಡಿ ತಯಾರಾದ 'ಕವಲುದಾರಿ' ಸಿನಿಮಾದ 'ನಿಗೂಢ ನಿಗೂಢ ಪ್ರಯಾಣ' ಹಾಡು ಕೇಳುಗರನ್ನು ಮತ್ತೊಮ್ಮೆ ಕೇಳುವ ಹಾಗೆ ಮಾಡುತ್ತಿರುವ ಬೆನ್ನಲ್ಲೇ ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ.

'ಇದೇ ದಿನ... ಆ ನೆನ್ನೆ ನಾಳೆ' ಎಂಬ ಪದಗಳಿಂದ‌‌‌ ಶುರುವಾಗುವ ಎಮೋಷನಲ್​​ ಹಾಡಿನಲ್ಲಿ ಅನಂತ್​​​​​​​​​​​ನಾಗ್ ಕಣ್ಣೀರು ಹಾಕುತ್ತಾ ಮಗಳನ್ನು ಹುಡುಕುತ್ತಾ ಸಾಗುವುದನ್ನು ನೋಡಬಹುದು. ಧನಂಜಯ್ ಈ ಹಾಡಿನ ಸಾಹಿತ್ಯ ಬರೆದಿದ್ದು, ಸಿದ್ದಾಂತ್​​​​​​​​​​​​​​​​​​​​​ ಸುಂದರ್ ಈ ಎಮೋಶನಲ್​​​​​ ಗೀತೆಯನ್ನು ಹಾಡಿದ್ದಾರೆ. ಚರಣ್ ರಾಜ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ಮಾಪಕ‌ ಹೇಮಂತ್ ರಾವ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Intro:Body:

Anant Nag

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.