ಅಮಿತಾಬ್ ಬಚ್ಚನ್ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಜೊತೆ ನಟಿಸಿದ್ದಾರೆ. ಆದ್ರೆ, ಮಗಳ ಜೊತೆ ನಟಿಸಿರಲಿಲ್ಲ. ಇದೀಗ ಬಿಗ್ ಬಿ ತಮ್ಮ ಮಗಳ ಜೊತೆಯಲ್ಲೂ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.
ಬಿಗ್ ಬಿ ತಮ್ಮ ಮಗಳು ಶ್ವೇತಾ ಬಚ್ಚನ್ ಜೊತೆ ಇದೀಗ ನಟಿಸಲು ಮುಂದಾಗಿದ್ದಾರೆ. ಹಾಗಾದ್ರೆ, ಅಪ್ಪ-ಮಗಳು ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಕಥೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡುತ್ತದೆ. ಆದ್ರೆ, ವಿಷ್ಯ ಏನಂದ್ರೆ ಶ್ವೇತಾ ಮತ್ತು ಅಮಿತಾಬ್ ಬಚ್ಚನ್ ಸಿನಿಮಾದಲ್ಲಿ ನಟಿಸುತ್ತಿಲ್ಲ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಜಾಹೀರಾತೊಂದರಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆ ಅಮಿತಾಬ್ ಧರ್ಮಪತ್ನಿ ಜಯಾ ಬಚ್ಚನ್ ಕೂಡ ನಟಿಸುತ್ತಿದ್ದಾರೆ. ಆದ್ರೆ, ಆ ಜಾಹೀರಾತಿನ ಬ್ರಾಂಡ್ ಯಾವುದು ಎಂದು ಇನ್ನೂ ತಿಳಿದಿಲ್ಲ.
ಈ ಬಗ್ಗೆ ಮಾಹಿತಿ ನೀಡಿರುವ ಅಮಿತಾಬ್ ತಮ್ಮ ಟ್ವಿಟರ್ನಲ್ಲಿ ಫೋಟೋ ಒಂದನ್ನು ಹಾಕಿ ಕುಟುಂಬದ ಜೊತೆ ಕೆಲಸ ಎಂದು ಬರೆದುಕೊಂಡಿದ್ದಾರೆ.
-
T 3732 - .... family at work .. pic.twitter.com/cAEOVH4umG
— Amitabh Bachchan (@SrBachchan) November 24, 2020 " class="align-text-top noRightClick twitterSection" data="
">T 3732 - .... family at work .. pic.twitter.com/cAEOVH4umG
— Amitabh Bachchan (@SrBachchan) November 24, 2020T 3732 - .... family at work .. pic.twitter.com/cAEOVH4umG
— Amitabh Bachchan (@SrBachchan) November 24, 2020