ಬೆತ್ತಲೆ ದೃಶ್ಯಗಳ ಶೂಟಿಂಗ್ ಬಗ್ಗೆ ತುಟ್ಟಿ ಬಿಚ್ಚಿರುವ ಅವರು, ಈ ಸೀನ್ ಮಾಡುವಂತೆ ಕೇಳಿಕೊಂಡಾಗ ಮೊದಲು ಶಾಖ್ ಆಗಿದ್ದೆ. ನಂತರ ಶೂಟಿಂಗ್ ಸ್ಥಳದಲ್ಲಿ ಕೇವಲ 15 ಜನರು ಮಾತ್ರ ಇರುವುದಾಗಿ ಚಿತ್ರತಂಡ ಭರವಸೆ ನೀಡ್ತು. ಆಗ ಸ್ವಲ್ಪ ಧೈರ್ಯ ಬಂತು. ನಂತರ ಮಹಾಭಾರತದಲ್ಲಿ ದ್ರೌಪದಿ ಕಾಯಲು 5 ಜನ ಗಂಡಂದಿರಿದ್ದರು. ಈ ಶೂಟಿಂಗ್ ಸೆಟ್ಲ್ಲಿ ನನ್ನ ರಕ್ಷಣೆಗೆ 15 ಜನ ಗಂಡಂದಿರಿದ್ದಾರೆ ಎಂದು ಅಲ್ಲಿದ್ದ ನನ್ನ ತಂಡಕ್ಕೆ ಹೇಳಿದ್ದೆ. ಇದರಿಂದ ಯಾವುದೇ ಭಯವಿಲ್ಲದೇ ಚಿತ್ರೀಕರಣದಲ್ಲಿ ಪಾಲ್ಗೊಂಡೆ ಎಂದಿದ್ದಾರೆ.
ಇನ್ನು ಒಂದು ವೇಳೆ ಈ ಸಿನಿಮಾ ಫ್ಲ್ಯಾಪ್ ಆದ್ರೆ? ಅನ್ನೋ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದು ಸಿನಿಮಾ ತನ್ನದೇಯಾದ ಗಟ್ಟಿತನ ಹೊಂದಿರುತ್ತೆ. ಅದು ಬಿಳುತ್ತೋ ಏಳುತ್ತೋ ಯಾರು ಬಲ್ಲರು? ಎಂದಿದ್ದಾರೆ. ಮುಂದುವರಿದು ಮಾತನಾಡಿರುವ ಅವರು, 40 ಸ್ಕ್ರಿಪ್ಟ್ಗಳನ್ನು ಕೇಳಿದ ನಂತರ ಈ ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.
ಇನ್ನು ಕನ್ನಡ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿರುವ ಅಮಲಾ ಪೌಲ್, ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇವರು ನಟಿಸಿರುವ ಆದೈ ಚಿತ್ರದ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಚಿತ್ರದ ಕೆಲ ಸೀನ್ಗಳಲ್ಲಿ ಅಮಲಾ ವಿವಸ್ತ್ರಳಾಗಿ ಕಾಣಿಸಿಕೊಂಡಿದ್ದರು. ಅವರ ಈ ಬೋಲ್ಡ್ ನಟನೆ ಸಿನಿ ದಿಗ್ಗಜರಿಂದ ಮೆಚ್ಚುಗೆ ಪಡೆದುಕೊಂಡಿದೆ.