ETV Bharat / sitara

ಬಹುನಿರೀಕ್ಷಿತ ಅಕ್ಷಯ್​​ ಕುಮಾರ್​ 'ಪೃಥ್ವಿರಾಜ್' ಸಿನಿಮಾ ಟೀಸರ್​ ಬಿಡುಗಡೆ - ನಟಿ ಮಾನುಷಿ ಚಿಲ್ಲರ್

ಭಾರತದ ಶ್ರೇಷ್ಠ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ಜೀವನ ಕಥೆ ಆಧಾರಿತ ಚಿತ್ರ ಪೃಥ್ವಿರಾಜ್ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾದಲ್ಲಿ ಆ್ಯಕ್ಷನ್​ ಕಿಂಗ್​ ಅಕ್ಷಯ್ ಕುಮಾರ್ ಡೈಲಾಂಗ್​ ಪಂಚ್​​, ಅದ್ದೂರಿ ಮೇಕಿಂಗ್​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

akshay-kumar-manushi-chillar-starrer-prithviraj-teaser-out
ಪೃಥ್ವಿರಾಜ್ ಸಿನಿಮಾ ಟೀಸರ್​
author img

By

Published : Nov 16, 2021, 10:03 AM IST

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 'ಸೂರ್ಯವಂಶಿ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೆ, ಅಕ್ಕಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೃಥ್ವಿರಾಜ್' ಟೀಸರ್ ಬಿಡುಗಡೆಯಾಗಿದ್ದು, (Prithviraj teaser out) ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಕ್ರಿಯೇಟ್​​​ ಮಾಡುತ್ತಿದೆ.

  • " class="align-text-top noRightClick twitterSection" data="">

ಭಾರತದ ಶ್ರೇಷ್ಠ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ (akshay kumar prithviraj) ಅವರ ಜೀವನ ಕಥೆ ಚಿತ್ರವೇ 'ಪೃಥ್ವಿರಾಜ್'. ಚಿತ್ರದಲ್ಲಿ ಆ್ಯಕ್ಷನ್​ ಕಿಂಗ್​, ಪೃಥ್ವಿರಾಜ್​​​ ಚೌಹಾಣ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈ ಚಿತ್ರದ ಮೂಲಕ ನಟಿ ಮಾನುಷಿ ಚಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದಲ್ಲದೇ, ಸಂಜಯ್ ದತ್, ಸೋನು ಸೂದ್ ಮತ್ತು ಅಶುತೋಷ್ ರಾಣಾ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದ್ದು, ಅದ್ದೂರಿ ನಿರ್ಮಾಣಕ್ಕೆ ಕೈಗನ್ನಡಿಯಾಗಿದೆ. ಎನರ್ಜಿಟಿಕ್ ಡೈಲಾಗ್ಸ್​​​ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಪೃಥ್ವಿರಾಜ್​​ ಮುಂದಿನ ವರ್ಷ ಜನವರಿ 21, ರಂದು ತೆರೆ ಕಾಣಲಿದೆ. ಅಲ್ಲದೇ, ಪೃಥ್ವಿರಾಜ್ ಜೊತೆಗೆ ಅಕ್ಷಯ್​ ಬಚ್ಚನ್ ಪಾಂಡೆ, ಅತರಂಗಿ ರೇ, ರಾಮ್ ಸೇತು, ರಕ್ಷಾ ಬಂಧನ, ಮಿಷನ್ ಸಿಂಡ್ರೆಲಾ ಮತ್ತು ಓ ಮೈ ಗಾಡ್ ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.