ETV Bharat / sitara

ಬರ್ತಿದೆ ಯುವರತ್ನನ​​ ಜೀವನ-ಸಾಧನೆ ಕುರಿತಾದ ಕಿರುಚಿತ್ರ! - ಪುನೀತ್​ರಾಜ್​ಕುಮಾರ್​​ ಹುಟ್ಟುಹಬ್ಬ

'ನಟಸಾರ್ವಭೌಮ'ನ ಅಭಿಮಾನಿ ಗಣ ಪುನೀತ್​ ಹುಟ್ಟು ಹಬ್ಬಕ್ಕೆ ಕಿರುಚಿತ್ರವನ್ನು ಉಡುಗೊರೆಯಾಗಿ ನೀಡುತ್ತಿದೆ. ಆ ಚಿತ್ರಕ್ಕೆ 'ಅಜಾತಶತ್ರು' ಎಂದು ಟೈಟಲ್​ ಇಡಲಾಗಿದ್ದು, ತೇಜಸ್​​ ರಂಗನಾಥ್​ ಆ್ಯಕ್ಷನ್​ ಕಟ್ ಹೇಳುತ್ತಿದ್ದಾರೆ.

ajatashatru short film for puneetg birthday
ಬರ್ತಿದೆ ಪುನೀತ್​ ರಾಜ್​ಕುಮಾರ್​​ ಜೀವನ-ಸಾಧನೆ ಕುರಿತಾದ ಕಿರುಚಿತ್ರ!
author img

By

Published : Jan 24, 2020, 5:00 PM IST

ತನ್ನ ನೆಚ್ಚಿನ ನಟನ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಏನಾದ್ರು ವಿಶೇಷತೆ ಮೆರೆಯಬೇಕೆಂದು ಹಂಬಲಿಸುತ್ತಾರೆ. ಇತ್ತೀಚೆಗೆ ನಟ ಯಶ್​ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು 5000 ಕೆಜಿ ಕೇಕ್​ ಕಟ್​ ಮಾಡಿ ಗಿನ್ನೆಸ್​​ ದಾಖಲೆ ಬರೆದಿದ್ದಾರೆ. ಇದೀಗ ಪುನೀತ್​ ರಾಜ್​ ಕುಮಾರ್​ ಹುಟ್ಟು ಹಬ್ಬಕ್ಕೂ ಅಪ್ಪು ಅಭಿಮಾನಿಗಳು ವಿಶೇಷ ಗಿಫ್ಟ್​ ನೀಡಲು ಸಿದ್ಧತೆ ನಡೆಸಿದ್ದಾರೆ.

'ನಟಸಾರ್ವಭೌಮ'ನ ಅಭಿಮಾನಿ ಗಣ ಪುನೀತ್​ ಹುಟ್ಟು ಹಬ್ಬಕ್ಕೆ ಕಿರುಚಿತ್ರವನ್ನು ಉಡುಗೊರೆಯಾಗಿ ನೀಡುತ್ತಿದೆ. ಆ ಚಿತ್ರಕ್ಕೆ 'ಅಜಾತಶತ್ರು' ಎಂದು ಟೈಟಲ್​ ಇಡಲಾಗಿದೆ. ಈ ಕಿರು ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ ಜೀವನ ಮತ್ತು ಸಾಧನೆಗಳ ಬಗ್ಗೆ ತೋರಿಲಾಗುತ್ತದೆಯಂತೆ. ಈಗಾಗಲೇ ಅಜಾತಶತ್ರುವಿನ ಪೋಸ್ಟರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರಿಂದ ಮೆಚ್ಚುಗೆ ಗಳಿಸುತ್ತಿದೆ.

  • 'ಅಜಾತಶತ್ರು'❤️
    ಕನ್ನಡಿಗರ ಸ್ವಾಭಿಮಾನದ ಸಂಕೇತ ಪವರ್ ಸ್ಟಾರ್ 'ಪುನೀತ್ ರಾಜಕುಮಾರ್'ರವರ ಹುಟ್ಟು ಹಬ್ಬದ ಸಂಭ್ರಮ ಹೆಚ್ಚಿಸಲು #Raajarathnotsava ಮತ್ತು #Sarvotthama ನಿರ್ಮಿಸಿದ ತಂಡದಿಂದ ಪ್ರೀತಿಯಿಂದ ಮತ್ತೊಂದು ಪುಟ್ಟ ಉಡುಗೊರೆ❤️#Ajatashatru #PowerStar @PuneethRajkumar #Appu pic.twitter.com/7CcnxbaDfX

    — Puneeth Rajkumar FC (@PuneethOfficial) January 23, 2020 " class="align-text-top noRightClick twitterSection" data=" ">

ಈ ಕಿರು ಚಿತ್ರಕ್ಕೆ ತೇಜಸ್​​ ರಂಗನಾಥ್​ ಆ್ಯಕ್ಷನ್​ ಕಟ್​ ಹೇಳಿದ್ದು, ಅಪ್ಪು ಹುಟ್ಟಿದ ದಿನವಾದ ಮಾರ್ಚ್​​ 17ಕ್ಕೆ ಈ ಸಿನಿಮಾವನ್ನು ರಿಲೀಸ್​ ಮಾಡಲಾಗುತ್ತದೆ. ಈ ಬಗ್ಗೆ ಪುನೀತ್​ ರಾಜ್​ ಕುಮಾರ್​ ಅಭಿಮಾನಿಗಳ ಟ್ವಿಟ್ಟರ್​ ಖಾತೆಯಲ್ಲಿ ಬರೆಯಲಾಗಿದ್ದು, 'ಅಜಾತಶತ್ರು'
ಕನ್ನಡಿಗರ ಸ್ವಾಭಿಮಾನದ ಸಂಕೇತ. ಪವರ್ ಸ್ಟಾರ್ 'ಪುನೀತ್ ರಾಜಕುಮಾರ್'ರವರ ಹುಟ್ಟು ಹಬ್ಬದ ಸಂಭ್ರಮ ಹೆಚ್ಚಿಸಲು ಪುಟ್ಟ ಉಡುಗೊರೆ ಎಂದು ಹಾಕಲಾಗಿದೆ.

ಇದೇ ಪೋಸ್ಟರ್​ಅನ್ನು ಪುನೀತ್​ ಅಳಿಯ ಧೀರೇನ್ ರಾಮ್‌ಕುಮಾರ್ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. "ಎಲ್ಲರಿಗು ನಮಸ್ಕಾರ, ಅಜಾತಶತ್ರು ಕಿರುಚಿತ್ರಕ್ಕೆ ಹಾಗು ಚಿತ್ರ ತಂಡಕ್ಕೆ ಒಳ್ಳೆ ಯಶಸ್ಸು ಸಿಗಲಿ" ಎಂದು ಬರೆದುಕೊಂಡಿದ್ದಾರೆ.

Intro:Body:

ent

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.