ಫ್ಯಾಶನ್ ಉದ್ಯಮದಲ್ಲಿನ ಪರಿಣತರನ್ನೊಳಗೊಂಡ ವಿಶೇಷ ತೀರ್ಪುಗಾರರ ಮಂಡಳಿಯು ಇಂದು ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್ನಲ್ಲಿ ಉತ್ತಮ ಮಾಡೆಲ್ಗಳನ್ನು ಆಯ್ಕೆ ಮಾಡಿತು. ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ಮಾಡೆಲಿಂಗ್ ಏಜೆನ್ಸಿಗಳಲ್ಲಿ ಒಂದಾಗಿರುವ ಐಎಂಜಿ ಮಾಡೆಲ್ಸ್ ಸಂಸ್ಥೆಯು ಈ ಪ್ರತಿಭಾನ್ವಿತ ಮಾಡೆಲ್‍ಗಳ ಅನ್ವೇಷಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿತು. ಈ ಸಂಸ್ಥೆ ದೇಶದ ಪ್ರಮುಖ ಮೂರು ನಗರಗಳಾದ ಬೆಂಗಳೂರು, ಜೈಪುರ ಮತ್ತು ಗುವಾಹತಿಯಲ್ಲಿ ಆಡಿಶನ್ ನಡೆಸುತ್ತಿದೆ. ಈ ಮೂರೂ ನಗರಗಳಲ್ಲಿನ ವಿಜೇತರಿಗೆ ಅಂತಾರಾಷ್ಟ್ರೀಯ ರ್ಯಾಂಪ್ ಮೇಲೆ ಹೆಜ್ಜೆ ಹಾಕುವ ಮತ್ತು ಐಎಂಜಿ ಯೂರೋಪ್‍ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ.
ಒಬ್ಬರು ಅದೃಷ್ಟಶಾಲಿ ವಿಜೇತರಿಗೆ ಲ್ಯಾಕ್ಮೆಯ ಡಿಜಿಟಲ್ ಕಂಟೆಂಟ್‍ನಲ್ಲಿ ಕಾಣಿಸಿಕೊಳ್ಳುವ ಅವಕಾಶವೂ ದೊರೆಯಲಿದೆ. ಐಎಂಜಿ ಮಾಡೆಲ್‍ಗಳಾದ ಕ್ಯಾಲಂ ಬುಚನ್ ಮತ್ತು ಲೂಯಿಸ್ ಡೊಮಿಂಗೋ, ದಕ್ಷಿಣ ಭಾರತದ ಹೆಸರಾಂತ ನಟಿ ಐಂದ್ರಿತಾ ರೇ, ಖ್ಯಾತ ಫ್ಯಾಶನ್ ಡಿಸೈನರ್ ನಿಖಿಲ್ ಥಂಪಿ, ಫ್ಯಾಶನ್ ಕೊರಿಯೋಗ್ರಾಫರ್ ಮತ್ತು ಶೋ ಡೈರೆಕ್ಟರ್ ವಹ್ಬಿಜ್ ಮೆಹ್ತಾ, ಲ್ಯಾಕ್ಮೆಯ ಇನೋವೇಶನ್ಸ್ ಮುಖ್ಯಸ್ಥ ಅಶ್ವಥ್ ಸ್ವಾಮಿನಾಥನ್ ಮತ್ತು ಐಎಂಜಿ ರಿಲಾಯನ್ಸ್ ಡಿಸೈನರ್ ಮುಖ್ಯಸ್ಥೆ ನಿಖಿತಾ ಪೂಂಜಾ ಅವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ನಟಿ ಐಂದ್ರಿತಾ ರೇ ಮಾತನಾಡಿ, ಲ್ಯಾಕ್ಮೆ ಫ್ಯಾಶನ್ ವೀಕ್‍ನ ಬೆಂಗಳೂರು ಮಾಡೆಲ್ ಆಡಿಶನ್‍ಗಳಲ್ಲಿ ತೀರ್ಪುಗಾರರ ಮಂಡಳಿಯಲ್ಲಿ ನಾನು ಭಾಗಿಯಾಗಿರುವುದಕ್ಕೆ ಸಂತೋಷವೆನಿಸಿದೆ. ಇಲ್ಲಿ ಗೆಲುವು ಸಾಧಿಸಿರುವ ಹುಡುಗಿಯರು ತಮ್ಮದೇ ಆದ ಮಾರ್ಗದಲ್ಲಿ ತೀರ್ಪುಗಾರರ ಗಮನವನ್ನು ಸೆಳೆದಿದ್ದಾರೆ ಎಂದು ಹೇಳುವ ಮೂಲಕ ಗೆಲುವು ಸಾಧಿಸಿರುವ ಮತ್ತು ಇತರೆ ಆಕಾಂಕ್ಷಿ ಮಾಡೆಲ್‍ಗಳಿಗೆ ಶುಭಾಶಯ ಹೇಳಿದರು. ಮುಂಬೈನ ಸೆಂಟ್ ರೆಗಿಸ್‍ನಲ್ಲಿ ಆಗಸ್ಟ್ 21 ರಿಂದ 25 ರವರೆಗೆ ಲ್ಯಾಕ್ಮೆ ಫ್ಯಾಶನ್ ವೀಕ್ ವಿಂಟರ್/ಫೆಸ್ಟಿವ್ 2019 ನಡೆಯಲಿದೆ.