ETV Bharat / sitara

'ಡೆಡ್ಲಿ' ಆದಿ ಹುಟ್ಟುಹಬ್ಬಕ್ಕೆ 'ಮುಂದುವರೆದ ಅಧ್ಯಾಯ' ಟೀಸರ್ ರಿಲೀಸ್​​ - undefined

ಆದಿತ್ಯ ನಟನೆಯ 'ಮುಂದುವರೆದ ಅಧ್ಯಾಯ' ಸಿನಿಮಾ ಟೀಸರ್ ನಾಳೆ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ. ಆದಿತ್ಯ ಆತ್ಮೀಯ ಗೆಳೆಯ, ನಟ ದರ್ಶನ್ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ಆದಿತ್ಯ
author img

By

Published : May 3, 2019, 3:22 PM IST

ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರ ಆದಿತ್ಯ ಅಭಿನಯದ ಯಾವುದೇ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿಲ್ಲ. ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ 'ಚಕ್ರವರ್ತಿ' ಸಿನಿಮಾದಲ್ಲಿ ಅವರು ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದರು.

2017ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಆದಿತ್ಯ ಗೆಸ್ಟ್​​ ರೋಲ್​​ನಲ್ಲಿ ನಟಿಸಿದ್ದರು. ಇದೀಗ ಅವರು 'ಮುಂದುವರೆದ ಅಧ್ಯಾಯ' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಮೇ 4 ರಂದು ಅಂದರೆ ನಾಳೆ ಆದಿತ್ಯ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಟೀಸರ್​​​ ಬಿಡುಗಡೆಯಾಗಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಚಿತ್ರದ ಟೀಸರ್ ಬಿಡುಗಡೆ ಮಾಡಲಿದ್ದಾರೆ.

munduvareda adhyaya
'ಮುಂದುವರೆದ ಅಧ್ಯಾಯ'

ಕಣಜ ಎಂಟರ್​​ಪ್ರೈಸಸ್ ಬ್ಯಾನರ್ ಅಡಿ ತಯಾರಾಗುತ್ತಿರುವ ಸಿನಿಮಾವನ್ನು ಬಾಲು ಚಂದ್ರಶೇಖರ್ ನಿರ್ದೇಶಿಸುತ್ತಿದ್ದಾರೆ. ಜಾನಿ-ನಿತಿನ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಥ್ರಿಲ್ಲರ್ ಕಥಾವಸ್ತು ಜೊತೆಗೆ ಸಮಾಜಕ್ಕೆ ಹತ್ತಿರವಾಗುವ ವಿಚಾರ ಇರುವ ಈ ಚಿತ್ರದ ನಾಯಕಿಯಾಗಿ ಆಶಿಕ ಸೋಮಶೇಖರ್ ನಟಿಸುತ್ತಿದ್ದಾರೆ. ಅಜಯ್​​​​​​​​​​​ರಾಜ್, ಸಂದೀಪ್ ಕುಮಾರ್, ಭಾಸ್ಕರ್ ವಿನೋದ್, ಚಂದನ, ರಾಮ ರಾವ್, ಚಿರನ್, ಸೋಮಣ್ಣ, ಶೋಭನ್, ವಿನಯ್ ಕೃಷ್ಣ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಆದಿತ್ಯ ಜನುಮನ ದಿನಕ್ಕೆ ಮುಂದುವರೆದ ಅಧ್ಯಾಯ ಟೀಸರ್

ಕನ್ನಡ ಚಿತ್ರ ರಂಗದ ಮತ್ತೊಬ್ಬ 6 ಅಡಿ ನಟ ಆದಿತ್ಯ ಚಕ್ರವರ್ತಿ ದರ್ಶನ್ ಅಭಿನಯದಲ್ಲಿ ಒಂದು ಪಾತ್ರ ಮಾಡಿದ ನಂತರ ವಾಪಸ್ಸು ತೆರೆಗೆ ಬರುತ್ತಿದ್ದಾರೆ. ಅದು 2017 ರಲ್ಲಿ ಬಿಡುಗಡೆ ಆಗಿತ್ತು. ಕೆಲವು ಸಿನಿಮಗಳು ಆದಿತ್ಯ ಅವರ ವೃತ್ತಿಯಲ್ಲಿ ಮೇಲಕ್ಕೆ ಏಳಲಿಲ್ಲ. ಆದಿತ್ಯ ಅವರ 40ನೇ ಹುಟ್ಟುಹಬ್ಬ ಮೇ 4ಕ್ಕೆ ಅವರ ನೆಚ್ಚಿನ ಸ್ನೇಹಿತ ಛಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದುವರೆದ ಅಧ್ಯಾಯ ಚಿತ್ರದ ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ.

ಈಗ ಅವರು ಮಿಸ್ಸಿಂಗ್ ಲಿಂಕ್ – ಒಂದು ರೀತಿಯಲ್ಲಿ ಚಿತ್ರರಂಗದಿಂದ ಅವರು ರಾಸ್ಕಲ್ ಚಿತ್ರದ ನಂತರ ಮಿಸ್ ಆದವರು ಮತ್ತೆ ಹಿಂತಿರುಗುತ್ತಿದ್ದಾರೆ.

ಮುಂದುವರೆದ ಅಧ್ಯಾಯ, ಮಿಸ್ಸಿಂಗ್ ಲಿಂಕ್ (ಕಂಟಿನ್ಯುಡ್ ಚಾಪ್ಟರ್) ಕಣಜ ಎಂಟೆರ್ಪ್ರೈಸಸ್ ಸಿನಿಮಾ. ಬಾಲು ಚಂದ್ರಶೇಖರ್ ಕೃತಿ ಹಾಗೂ ನಿರ್ದೇಶನ. ದಿಲೀಪ್ ಚಕ್ರವರ್ತಿ ಛಾಯಾಗ್ರಹಣ, ಜಾನಿ-ನಿತಿನ್ ಸಂಗೀತ, ಶ್ರೀಕಾಂತ್ ಸಂಕಲನ, ವಿನೋದ್ ಸಾಹಸ ಮಾಡಿದ್ದಾರೆ.

ಥ್ರಿಲ್ಲರ್ ಕಥಾ ವಸ್ತು ಜೊತೆಗೆ ಸಮಾಜಕ್ಕೆ ಹತ್ತಿರವಾಗುವ ವಿಚಾರ ಇರುವ ಈ ಚಿತ್ರದ ನಾಯಕಿ ಆಶಿಕ ಸೋಮಶೇಖರ್, ಅಜಯ್ ರಾಜ್, ಸಂದೀಪ್ ಕುಮಾರ್, ಭಾಸ್ಕರ್ ವಿನೋದ್, ಚಂದನ, ರಾಮ ರಾವ್, ಚಿರನ್, ಸೋಮಣ್ಣ, ಶೋಭಾನ್, ವಿನಯ್ ಕೃಷ್ಣ, ರಾಜೇಂದ್ರ ನೀಹಾಲ್, ಪಿಲ್ಲ ರೆಡ್ಡಿ, ಶ್ರೀಧರ್ ಹಾಗೂ ಇತರರು ತಾರಗಣದಲ್ಲಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.