ಅದಿತಿ ಪ್ರಭುದೇವ, ಶಾನೆ ಟಾಪಾಗವ್ಳೆ ಹಾಡಿನ ಮೂಲಕ ಪಡ್ಡೆ ಹುಡುಗರ ಹಾಟ್ ಫೇವರೇಟ್ ಆದ ನಟಿ . ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಈ ಹುಡುಗಿ ಲಾಕ್ ಡೌನ್ ಆದಾಗಿನಿಂದ ಸೈಲೆಂಟ್ ಆಗಿದ್ರು. ಆದ್ರೆ ಈಗ ಅದಿತಿ ಭಾರೀ ಸದ್ದು ಮಾಡುತ್ತಿದ್ದಾರೆ.
'ಬ್ರಹ್ಮಚಾರಿ' ಮಡದಿಯ ಮೈ ಮೇಲೆ 50-90 ದಶಕದ ಮಹಾನಟಿಯರು ಬಂದಿದ್ದಾರೆ. ಇದೇನಪ್ಪಾ ಅಂತ ಶಾಕ್ ಆಗಬೇಡಿ. ಅದಿತಿ ಪ್ರಭುದೇವ ಲಾಕ್ ಡೌನ್ ನಂತರ ಬ್ಲ್ಯಾಕ್ ಆ್ಯಂಡ್ ವೈಟ್ ಕಾಂಬಿನೇಷನ್ನಲ್ಲಿ ಸೀರೆಯುಟ್ಟು ಸ್ಪೆಷಲ್ ಫೋಟೋಶೂಟ್ ಮಾಡಿಸಿದ್ದಾರೆ. ಅದಿತಿ ಉಟ್ಟಿರುವ ಸೀರೆಯಲ್ಲಿ ಕನ್ನಡ ಚಿತ್ರರಂಗದ ಮಹಾನಟಿಯರ ಫೇಸ್ ಪ್ರಿಂಟ್ ಇರುವುದು ಈ ಪೋಟೋಶೂಟ್ ವಿಶೇಷ.
50 ರ ದಶಕದಿಂದ 90 ರ ದಶಕದವರೆಗಿನ ಸುಮಾರು 20ಕ್ಕೂ ಹೆಚ್ಚು ಮಹಾನಟಿಯರ ಭಾವಚಿತ್ರಗಳು ಈ ಸೀರೆಯಲ್ಲಿವೆ. ಅಲ್ಲದೆ ಆ ಸೀರೆಗೆ ಮ್ಯಾಚ್ ಆಗುವಂತೆ ಬ್ಲೌಸ್ ಕೂಡಾ ರೆಡಿ ಮಾಡಿದ್ದಾರೆ ಡಿಸೈನರ್ ಲಕ್ಷ್ಮಿಕೃಷ್ಣ. ಇದೀಗ ಸ್ಯಾಂಡಲ್ವುಡ್ನಲ್ಲೂ ಬಾಲಿವುಡ್ನಂತೆ ಪರ್ಸನಲ್ ಫೋಟೋಶೂಟ್ ಟ್ರೆಂಡ್ ಆಗಿದೆ.
ಸೆಲಬ್ರಿಟಿಗಳು ತಮ್ಮ ಲುಕ್ ಬದಲಿಸಿದಾಗ ಹೊಸ ಲುಕ್ನಲ್ಲಿ ಫೋಟೋಶೂಟ್ ಮಾಡಿಸ್ತಾರೆ. ವಸ್ತ್ರ ವಿನ್ಯಾಸಕಾರರು ಹೊಸ ಹೊಸ ಡಿಸೈನ್ ತಯಾರಿಸಿದಾಗಲೂ ಈ ರೀತಿ ಫೋಟೋಶೂಟ್ ಕಾಮನ್ ಆಗಿದೆ. ಅದೇ ರೀತಿ ಅದಿತಿ ಹಾಗೂ ಲಕ್ಷ್ಮಿಕೃಷ್ಣ ಕಾಂಬಿನೇಶನ್ ಫೋಟೋಶೂಟ್ ಝುಲಕ್ ಇಲ್ಲಿದೆ ನೋಡಿ.