ETV Bharat / sitara

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನ ಮಾಡಲಾಗದಿದ್ದರೂ ಸರಿ, ಕೆಡಕನ್ನು ಬಯಸಬೇಡಿ: ಅದಿತಿ ಪ್ರಭುದೇವ - ಅದಿತಿ ಪ್ರಭುದೇವ

ಪಶು ವೈದ್ಯೆ ಮೇಲೆ ರಾಕ್ಷಸಿ ಕೃತ್ಯವೆಸಗಿದ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿ ಸಾಯಿಸಿದರು ಎಂಬ ಸುದ್ದಿ ಕೇಳುತ್ತಿದ್ದಂತೆ ನನಗೆ ತುಂಬಾ ಖುಷಿಯಾಯಿತು. ಅಂದು ನನಗೆ ಕರೆ ಮಾಡಿದವರಿಗೆಲ್ಲ ಕಂಗ್ರಾಜುಲೇಷನ್ಸ್​​ ಹೇಳಿದೆ ಎಂದು ನಟಿ ಅದಿತಿ ಪ್ರಭುದೇವ ಖುಷಿಯಿಂದಲೇ ತಿಳಿಸಿದ್ರು.

Adhithi
ಅದಿತಿ ಪ್ರಭುದೇವ
author img

By

Published : Dec 8, 2019, 4:59 PM IST

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನು ಮಾಡಲಿಕ್ಕೆ ಆಗದಿದ್ರೂ ಪರವಾಗಿಲ್ಲ. ಆದ್ರೆ ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಸಪೋರ್ಟ್ ಮಾಡಿ. ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡೋಣವೆಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ.

ಬ್ರಹ್ಮಚಾರಿ ಸಕ್ಸಸ್​​ ಮೀಟ್​​ನಲ್ಲಿ ಮಾತನಾಡಿದ ನಟಿ, ಇತ್ತೀಚೆಗಷ್ಟೇ ತೆಲಂಗಾಣದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳಿಗೆ ಹೈದರಾಬಾದ್ ಪೊಲೀಸರು ಎನ್​​ಕೌಂಟರ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ. ಪಶು ವೈದ್ಯೆ ಮೇಲಿನ ಅತ್ಯಾಚಾರ ವಿಚಾರ ತುಂಬಾ ನೋವನ್ನುಂಟುಮಾಡಿತ್ತು. ಆ ಘಟನೆ ನಡೆದ ಮಾರನೇ ದಿನ ನನಗೆ ನೈಟ್ ಶೂಟಿಂಗ್ ಇತ್ತು. ಎಂದೂ ನನ್ನ ಜೊತೆ ಶೂಟಿಂಗ್​ಗೆ ಬಾರದ ನನ್ನ ತಂದೆ ಅಂದು ಪುಟ್ಟ ನಾನು ಬರ್ತೀನಿ ಎಂದಾಗ ಎಂಥಾ ಪರಿಸ್ಥಿತಿ ಬಂತು ಎಂದು ಯೋಚಿಸಿದೆ ಎಂದು ಅದಿತಿ ತಿಳಿಸಿದ್ರು.

ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನ ಮಾಡಲಾಗದಿದ್ದರೂ ಕೆಡಕನ್ನು ಬಯಸಬೇಡಿ : ಅದಿತಿ ಪ್ರಭುದೇವ

ಜೀವಂತವಾಗಿರುವಾಗಲೇ ಸುಡುತ್ತಾರೆ ಎಂದರೆ ಆ ವ್ಯಕ್ತಿಗಳಿಗೆ ಎಂತಾ ವಿಕೃತ ಮನಸ್ಸಿರಬಹುದು. ಇಂತಹ ಘಟನೆಗಳು ನಡೆದಾಗ ಹೆಣ್ಣು ಮಕ್ಕಳ ಅಪ್ಪ-ಅಮ್ಮಂದಿರಿಗೆ ತುಂಬಾ ಆತಂಕ ಕಾಡುತ್ತೆ. ನಮಗೂ ಭಯ ಆಗುತ್ತೆ ಎಂದು ಅದಿತಿ ಭಾವುಕರಾದ್ರು.

ಇನ್ನು ಆ ಅತ್ಯಾಚಾರಿಗಳನ್ನು ಎನ್​ಕೌಂಟರ್​ ಮಾಡಿ ಸಾಯಿಸಿದರು ಎಂಬ ಸುದ್ದಿ ಕೇಳುತ್ತಿದ್ದಂತೆ ನನಗೆ ತುಂಬಾ ಖುಷಿಯಾಯಿತು. ಅಂದು ನನಗೆ ಕರೆ ಮಾಡಿದವರಿಗೆಲ್ಲ ಕಂಗ್ರಾಜುಲೇಷನ್ಸ್​​ ಹೇಳಿದೆ ಎಂದು ನಟಿ ಖುಷಿಯಿಂದಲೇ ಹೇಳಿದ್ರು.

Intro:ಹೆಣ್ಣುಮಕ್ಕಳಿಗೆ ಒಳ್ಳೆಯದನ್ನು ಮಾಡಲಿಕ್ಕೆ ಅಗದಿದ್ರು ಪರವಾಗಿಲ್ಲ,ಅದ್ರೆ ಕೆಟ್ಟದ್ದನ್ನು ಮಾತ್ರ ಮಾಡಬೇಡಿ. ಸಪೋರ್ಟ್ ಮಾಡಿ ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ನಟಿ ಅದಿತಿ ಪ್ರಭುದೇವ ಹೇಳಿದ್ದಾರೆ. ಹೌದು ಇತ್ತೀಚಿಗಷ್ಟೇ ಪಶುವೈದ್ಯ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಾಚಾರಿಗಳಿಗೆ ಹೈದರಾಬಾದ್ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.ಈ ವಿಷಯಕ್ಕೆ ಸಂಭದಿಸಿದಂತೆ ಮಾತನಾಡಿದ ಅದತಿ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಹೆಚ್ಚಾಗಿದೆ. ಇತ್ತೀಚಿಗೆ ನಡೆದ ಪ್ರಿಯಾ ರೆಡ್ಡಿ ಅತ್ಯಾಚಾರ ವಿಚಾರವಾಗಿ ನಾನು ತುಂಬಾ ಎಮೋಷನಲ್ ಆಗಿದೆ. ಆ ಘಟನೆ ನಡೆದ ಮಾರನೇಯ ದಿನ ನನಗೆ ನೈಟ್ ಶೂಟಿಂಗ್ ಇತ್ತು.

Body:ಯಾವತ್ತು ನನ್ನ ಜೊತೆ ಶೂಟಿಂಗ್ ಗೆ ಬರದ ನನ್ನ ತಂದೆ ಆವತ್ತು ಪುಟ್ಟ ನಾನು ಬರ್ತೀನಿ ನಿನ್ನ ಜೊತೆ ಎಂದರು,ಆಗ ಎಂಥಾ ಪರಿಸ್ಥಿತಿ ಬಂತು ಎಂದು ನನಗೆ ಅನಿಸಿತು. ಜೀವಂತ
ವಾಗಿರುವಾಗಲೆ ಸುಡುತ್ತಾರೆ ಎಂದರೆ ಆ ವ್ಯಕ್ತಿಗಳಲ್ಲಿ ಎಂತಾ ವಿಕೃತ ಮನಸ್ಸಿರಬಹುದು, ಇಂತಹ ಘಟನೆಗಳು ನಡೆದಾಗ ಹೆಣ್ಣು ಮಕ್ಕಳ ಅಪ್ಪ ಅಮ್ಮಂದಿರಿಗೆ ತುಂಭಾ ಎಫೆಕ್ಟ್ ಆಗುತ್ತೆ.ಅಲ್ಲದೆ ತಂದೆ ತಾಯಿಗಳ ನೋಡಿದ್ರೆ ನಮಗೂ ಭಯ ಆಗುತ್ತೆ ಎಂದು ದಿಶಾ ಆತ್ಯಾಚಾರದ ಕರಾಳತೆಯನ್ನು ಭಾವುಕವಾಗಿಯೇ ಅದಿತಿ ಹೇಳಿದರು.ಅಲ್ಲದೆ ಅತ್ಯಾಚಾರಿಗಳನ್ನು ಎನ್ ಕೌಂಟರ್ ಮಾಡಿದಾಗ ಅದಿತಿ ತಂದೆ ಕಂಗ್ರಾಜ್ಯಲೇಷನ್ ಹೇಳಿದ್ರಂತೆ, ಯಾಕೆ ಇವತ್ತು ಅಪ್ಪ ಕಾಂಗ್ರಾಟ್ಸ್ ಹೇಳ್ತಿದ್ದಾರೆ.ನನಗೆ ಗೊತ್ತಿಲ್ಲದೆ ಯಾವುದಾದರು ಸಿನಿಮಾ ಒಪ್ಪಿಕೊಂಡರ ಅಂದು ಕೊಂಡೆ. ಅಗ ನಮ್ಮ ತಂದೆ ಆಪಾಪಿಗಳ ಎನ್ ಕೌಂಟರ್ ಮಾಡಿದ್ದಾರೆ ಎಂದು ಹೇಳಿದರು. ನಮ್ಮ ತಂದೆ ಮಾತು ಕೇಳಿದಾಗ ನನಗೆ ಸಖತ್ಖುಷಿಯಾಯ್ತು
ಅಲ್ಲದೆ ಅಂದು ನಾನು ಕಾಲ್ ಮಾಡಿದ ಎಲ್ಲರಿಗೂ ಕಂಗ್ರಾಟ್ಸ್ ಹೇಳಿದೆ ಎಂದು ಅದಿತಿ ಅತ್ಯಾಚಾರಿಗಳ ಎನ್ ಕೌಂಟರ್ ಗೆ ಸಂತಸ ವ್ಯಕ್ತಪಡಿಸಿದರು. ಅಲ್ಲದೆ ಬದುಕಿರುವ ಮೂರು ದಿವಸ ಹೆಣ್ಣು ಮಕ್ಕಳಿಗೆ ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ. ಕೆಟ್ಟದನ್ನು ಮಾಡುವುದು ಬೇಡ ಎಂದು ಅದಿತಿ ಪ್ರಭುದೇವ ಹೇಳಿದರು.

ಸತೀಶ ಎಂಬಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.