ಕಳೆದ 16 ವರ್ಷಗಳಿಂದ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾಗಿರುವ ಶುಭಾ ಪೂಂಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ಬಹಳ ದಿನಗಳ ಮುನ್ನವೇ ಶುಭಾ ಮದುವೆ ಫಿಕ್ಸ್ ಆಗಿತ್ತಾದರೂ ಲಾಕ್ಡೌನ್ ಆರಂಭವಾದ ಕಾರಣ ಮದುವೆ ಮುಂದೂಡಲ್ಪಟ್ಟಿತ್ತು. ಇದೀಗ ಶುಭಾ ಮನೆಯಲ್ಲಿ ಮದುವೆಗೆ ಸಕಲ ಸಿದ್ಧತೆ ನಡೆದಿದೆ.
![Shubha poonja marriage fixed](https://etvbharatimages.akamaized.net/etvbharat/prod-images/7620651_149_7620651_1592197868878.png)
ಸುಮಂತ್ ಎಂ. ಬಿಲ್ಲವ ಎಂಬುವವರು ಶುಭಾ ಅವರ ಕೈ ಹಿಡಿಯುತ್ತಿದ್ದಾರೆ. ಸುಮಂತ್ ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸಿ ನಡೆಸುತ್ತಿದ್ದಾರೆ. ಜಯ ಕರ್ನಾಟಕ ಸಂಘಟನೆಯಲ್ಲಿ ಕೂಡಾ ಸುಮಂತ್ ಗುರುತಿಸಿಕೊಂಡಿದ್ದಾರೆ. ಶುಭಾ ಹಾಗೂ ಸುಮಂತ್ ಇಬ್ಬರೂ ಕೆಲವು ವರ್ಷಗಳಿಂದ ಸ್ನೇಹಿತರು. ಇದೀಗ ಗುರುಹಿರಿಯರು ಇವರ ಮದುವೆ ನಿಶ್ಚಯಿಸಿದ್ದಾರೆ. ಕೆಲವೇ ದಿನಗಳಲ್ಲಿ ಶುಭಾ ಗೃಹಿಣಿಯಾಗಲಿದ್ದಾರೆ.
![Shubha poonja marriage fixed](https://etvbharatimages.akamaized.net/etvbharat/prod-images/7620651_990_7620651_1592197895434.png)
ಮದುವೆ ಬಗ್ಗೆ ಮಾತನಾಡಿರುವ ಶುಭಾ, ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಲಾಕ್ಡೌನ್ ಮುಗಿಯುತ್ತಿದ್ದಂತೆ ಮದುವೆಯಾಗುತ್ತಿದ್ದೇವೆ. ಸ್ನೇಹಿತರು, ಸಂಬಂಧಿಕರು ಹಾಗೂ ನನ್ನ ಬೆಳವಣಿಗೆಗೆ ಕಾರಣರಾದ ಮಾಧ್ಯಮದವರ ಸಮ್ಮುಖದಲ್ಲಿ ನಾನು ಮದುವೆ ಆಗಬೇಕು ಎಂದು ತಮ್ಮ ಆಸೆ ವ್ಯಕ್ತಪಡಿಸಿದ್ದಾರೆ.
![Shubha poonja marriage fixed](https://etvbharatimages.akamaized.net/etvbharat/prod-images/7620651_51_7620651_1592197835470.png)
'ಜಾಕ್ಪಾಟ್' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಶುಭಾ ಅವರಿಗೆ ಹೆಸರು ತಂದುಕೊಟ್ಟದ್ದು 2007 ರಲ್ಲಿ ಬಿಡುಗಡೆಯಾದ 'ಚಂಡ' ಹಾಗೂ 'ಮೊಗ್ಗಿನ ಮನಸ್ಸು' ಸಿನಿಮಾ. ತಮಿಳು, ಕನ್ನಡ ಸೇರಿ ಶುಭಾ ಇದುವರೆಗೂ ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ಲಮ್ಬಾಲಾ, ಕಂಠೀರವ, ಗೋಲ್ಬಾಲ್, ಜೈ ಮಾರುತಿ 800, ಗೂಗಲ್, ಪರಾರಿ, ತರ್ಲೆ ನನ್ಮಕ್ಳು, ನರಗುಂದ ಬಂಡಾಯ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ. ತ್ರಿದೇವಿ, ಹಾಗೂ ಸಮೋಸ ಚಿತ್ರಗಳಲ್ಲಿ ಶುಭಾ ನಟಿಸಬೇಕಿದೆ. ತ್ರಿದೇವಿ ಅವರ 25ನೇ ಸಿನಿಮಾ ಹಾಗೂ ಇದು ಎರಡು ಭಾಷೆಗಳಲ್ಲಿ ತಯಾರಾಗಲಿದೆ.
![Shubha poonja marriage fixed](https://etvbharatimages.akamaized.net/etvbharat/prod-images/7620651_99_7620651_1592197803286.png)
ಒಟ್ಟಿನಲ್ಲಿ ಶುಭಾ ಪೂಂಜಾ ಮದುವೆಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಿದ್ದಾರೆ.
![Shubha poonja marriage fixed](https://etvbharatimages.akamaized.net/etvbharat/prod-images/7620651_84_7620651_1592199240249.png)