ETV Bharat / sitara

ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಜ್ವರ; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ - ಜ್ವರಕ್ಕೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಚಿತಾ ರಾಮ್ ಡಿಸ್ಚಾರ್ಜ್‌

ಬಿಡುವಿಲ್ಲದೆ ಶೂಟಿಂಗ್ ಹಾಗೂ ಸಿನಿಮಾ ಪ್ರಮೋಷನ್‌ಗಳಿಂದಾಗಿ ಅತಿಯಾದ ಒತ್ತಡ ಹಾಗೂ ಅತಿ ಆಯಾಸದಿಂದಾಗಿ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ಗೆ ಜ್ವರ ಕಾಣಿಸಿಕೊಂಡಿದೆ. ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಬಳಿಕ ಮನೆಗೆ ವಾಪಸ್‌ ಆಗಿದ್ದಾರೆ.

actress rachita ram hospitalised in Bangalore
ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಜ್ವರ; ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್‌
author img

By

Published : Dec 28, 2021, 4:22 PM IST

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್‌ಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ತಿಂಗಳುಗಳಿಂದ ಬಿಡುವಿಲ್ಲದೆ ಶೂಟಿಂಗ್ ಹಾಗೂ ಸಿನಿಮಾ ಪ್ರಮೋಷನ್‌ಗಳಿಂದಾಗಿ ಅತಿಯಾದ ಒತ್ತಡ ಹಾಗೂ ಆಯಾಸಕ್ಕೆ ಒಳಗಾದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಶೀತ ಜ್ವರದಿಂದ ರಚಿತಾ ರಾಮ್ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏಕ್ ಲವ್ ಯಾ ಚಿತ್ರದ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಹೋಗಿದ್ದ ರಚಿತಾಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ಕೊರೊನಾ ಭಯದಿಂದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ಇಂದು ಡಿಸ್ಚಾರ್ಜ್ ಆಗಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ರಚಿತಾ ರಾಮ್ ಅಭಿನಯದ ಲವ್ ಯೂ ರಚ್ಚು ಸಿನಿಮಾ ಈ ವರ್ಷದಲ್ಲಿ ಬಿಡುಗಡೆ ಆಗುತ್ತಿರುವ ಕೊನೆಯ ಸಿನಿಮಾ. ಡಿಂಪಲ್‌ ಕ್ವೀನ್‌ ಕೈಯಲ್ಲಿ ಬ್ಯಾಡ್ ಮ್ಯಾನರ್ಸ್, ವೀರಂ, ಮ್ಯಾಟ್ನಿ ಹೀಗೆ ಹಲವಾರು ಸಿನಿಮಾಗಳು ಇವೆ. ಹೊಸ ವರ್ಷಕ್ಕೆ ಜೋಗಿ ಪ್ರೇಮ್ ನಿರ್ದೇಶನದ ರಚಿತಾ ರಾಮ್ ಅಭಿನಯದ ಏಕ್ ಲವ್ ಯಾ ಸಿನಿಮಾ ಬಿಡುಗಡೆ ಆಗುತ್ತಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೊಂದಿರುವ ನಟಿಯಾಗಿ ರಚಿತಾ ರಾಮ್ ಹೊರ ಹೊಮ್ಮಿದ್ದಾರೆ‌.

ಇದನ್ನೂ ಓದಿ: ಸದ್ದಿಲ್ಲದೇ ಎಂಗೇಜ್ ಆದ ಶ್ಯಾನೇ ಟಾಪಾಗವ್ಳೆ ಬೆಡಗಿ ಅದಿತಿ ಪ್ರಭುದೇವ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.