ನಾಳೆ ಬಿಡುಗಡೆಯಾಗುತ್ತಿರುವ ತಮ್ಮ ಪತಿ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾಗೆ ನಟಿ ಮೇಘನಾ ರಾಜ್ ಶುಭ ಕೋರಿದ್ದಾರೆ. ಇಂದು ಸೆಲ್ಫಿ ವಿಡಿಯೋ ಮೂಲಕ ಚಿತ್ರಕ್ಕೆ ವಿಶ್ ಮಾಡಿರುವ ಅವರು, ಶಾನೆ ಟಾಪ್ ಆಗಿರುವ 'ಸಿಂಗ' ಚಿತ್ರ ಜುಲೈ 19ಕ್ಕೆ ಬಿಡುಗಡೆಯಾಗ್ತಿದೆ. ಈ ಸಿನಿಮಾ ನಂಗೆ ತುಂಬಾ ಸ್ಪೆಷಲ್. ಫಸ್ಟ್ ಡೇ ಫಸ್ಟ್ ಶೋ ನೋಡೋಕೆ ಕಾಯ್ತಿದ್ದೇನೆ. ನೀವೂ 'ಸಿಂಗ' ಚಿತ್ರ ನೋಡಿ ಹರಸಿ ಎಂದಿದ್ದಾರೆ.
ಇನ್ನು ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕೂಡ ಗೆಳೆಯನ ಸಿನಿಮಾಗೆ ಶುಭ ಹಾರೈಸಿದ್ದಾರೆ. 'ನನ್ನ ಸ್ನೇಹಿತ ಚಿರು ಅಭಿನಯದ 'ಸಿಂಗ' ಚಿತ್ರ ನಾಳೆ ಬಿಡುಗಡೆಯಾಗ್ತದೆ. ಸಿನಿಮಾ ಉತ್ತಮ ಹಾಡು, ಒಳ್ಳೆ ಕಥೆ ಹೊಂದಿದೆ. ದಯವಿಟ್ಟು ಅಭಿಮಾನಿಗಳು ಈ ಸಿನಿಮಾ ಥಿಯೇಟರ್ನಲ್ಲೇ ನೋಡಿ. ಅಲ್ಲದೆ ಪೈರಸಿ ಮಾಡಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಸಿಂಗ ಚಿತ್ರವನ್ನು ವಿಜಯ್ ಕಿರಣ್ ನಿರ್ದೇಶನ ಮಾಡಿದ್ದಾರೆ. ಉದಯ್ ಮೆಹ್ತಾ ನಿರ್ಮಾಣ ಮಾಡಿದ್ದಾರೆ. ಸ್ಯಾಂಡಲ್ವುಡ್ ಸುಂದ್ರಿ ಅದಿತಿ ಈ ಚಿತ್ರದಲ್ಲಿ ಚಿರುಗೆ ನಾಯಕಿಯಾಗಿ ನಟಿಸಿದ್ದಾರೆ.