ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಕಿರುತೆರೆ ಜತೆ ಹಿರಿತೆರೆಯಲ್ಲೂ ಬ್ಯೂಸಿಯಾಗಿದ್ದಾರೆ. ಅವರ ನಟಿಸಿ, ನಿರ್ಮಿಸುತ್ತಿರುವ 'ಎಲ್ಲಿದ್ದೆ ಇಲ್ಲಿ ತನಕ' ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ಅದಾಗಲೇ ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರ ಕೆಲವು ದಿವಸಗಳ ಹಿಂದೆ ಸದ್ದಿಲ್ಲದೇ ಸೆಟ್ಟೇರಿದೆ. ಇದೀಗ ಈ ಚಿತ್ರದ ನಾಯಕಿಯಾಗಿ ಸುಂದರ ಚೆಲುವೆ ಮೇಘನ ರಾಜ್ ಆಯ್ಕೆಯಾಗಿದ್ದಾರೆ. ಮೇಘನ ರಾಜ್ ‘ಇರುವುದೆಲ್ಲವ ಬಿಟ್ಟು’ ಸಿನಿಮಾ ನಂತರ ಯಾವುದೇ ಕನ್ನಡ ಸಿನಿಮಾ ಆಯ್ಕೆ ಮಾಡಿಕೊಂಡಿರಲಿಲ್ಲ.ಈಗ ಸೃಜನ್ ಜೊತೆ ಒಂದು ಕಾಮಿಡಿ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದು ಮ್ಯಾರೇಜ್ ನಂತ್ರ ಮೇಘನಾ ಸೈನ್ ಮಾಡಿರುವ ಮೊದಲ ಚಿತ್ರ.
ಈ ಹೊಸ ಚಿತ್ರಕ್ಕೆ 'ವಾಸ್ಕೋಡಿಗಾಮ' ಮತ್ತು 'ಸೈಬರ್ ಯುಗದೋಳ್' ಸಿನಿಮಾಗಳ ನಿರ್ದೇಶಕ ಮಧುಚಂದ್ರ (ನಿರ್ದೇಶಕ ಹಾಗೂ ಸಂಭಾಷಣೆಗಾರ ಮಂಜು ಮಾಂಡವ್ಯ ಸಹೋದರ) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಕಾಮಿಡಿ ಚಿತ್ರ. ಮೇಘನ ರಾಜ್ ಈ ಕಥೆ ಕೇಳಿ ಸಾಕಷ್ಟು ನಕ್ಕಿದ್ದಾರಂತೆ. ಇದು ಹಾಸ್ಯದ ಜೊತೆ ಸಮಾಜಕ್ಕೆ ಒಂದು ಸಂದೇಶ ನೀಡುವ ಚಿತ್ರವಂತೆ. ಚಿತ್ರದಲ್ಲಿ ಮೊಬೈಲ್ ಸಹ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.
ಮೂರು ಸಿನಿಮಾಗಳಲ್ಲಿ ಬುದ್ಧಿವಂತಿಕೆ ಮೇರೆದ ಮಧುಚಂದ್ರ ಅವರಿಗೆ ಒಂದು ಗಟ್ಟಿ ಯಶಸ್ಸು ಸಿಕ್ಕಲ್ಲ. ಈ ಸಿನಿಮಾ ಮೂಲಕ ಅವರಿಗೆ ಯಶಸ್ಸಿನ ಅದೃಷ್ಟದ ಬಾಗಿಲು ತೆರೆಯುವುದು ಎಂದು ನಂಬಿದ್ದಾರಂತೆ.