ತಮಿಳು ನಟಿಯೊಬ್ಬರನ್ನು ಆಕೆಯ ಪೋಷಕರೇ ಅಪಹರಿಸಿದ್ದಾರೆ ಎನ್ನಲಾಗಿದ್ದು, ಚಿತ್ರದ ನಿರ್ದೇಶಕ ಹೈಕೋರ್ಟ್ನಲ್ಲಿ ಈ ಬಗ್ಗೆ ಕೇಸ್ ದಾಖಲಿಸಿದ್ದಾರೆ. 'ತೊರಟಿ' ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ಸತ್ಯಕಲಾ ಎಂಬುವವರೇ ಅಪಹರಣವಾದ ನಟಿ.
ಮಾರಿಮುತ್ತು 'ತೊರಟಿ' ಸಿನಿಮಾವನ್ನು ನಿರ್ದೇಶಿಸಿದ್ದು, ಆಗಸ್ಟ್ 2ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ತನ್ನ ತಂದೆ ಹಾಗೂ ಮಲತಾಯಿಗೆ ನಾನು ಸಿನಿಮಾದಲ್ಲಿ ನಟಿಸುವುದು ಇಷ್ಟ ಇಲ್ಲ ಎಂದು ಸತ್ಯಕಲಾ ಚಿತ್ರತಂಡದೊಂದಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಚಿತ್ರದ ಪ್ರಮೋಷನ್ ಬಗ್ಗೆ ಮಾತನಾಡಲು ನಿರ್ದೇಶಕ ಮಾರಿಮುತ್ತು ಆಕೆಗೆ ಕರೆ ಮಾಡಿದಾಗ ಬಹಳ ದಿನಗಳಿಂದ ಸಂಪರ್ಕ ಸಾಧ್ಯವಾಗಿಲ್ಲ ಎನ್ನಲಾಗಿದೆ. ಮನೆಯಲ್ಲೂ ಆಕೆ ಸಿಗದಿದ್ದಾಗ ಪೋಷಕರೇ ಆಕೆಯನ್ನು ಅಪಹರಿಸಿರಬಹುದೆಂದು ಅನುಮಾನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
- " class="align-text-top noRightClick twitterSection" data="">
ಶಮನ್ ಪಿಕ್ಚರ್ಸ್ ಬ್ಯಾನರ್ ಅಡಿ ಶಮನ್ ಮಿತ್ರು ಎಂಬುವವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಕೂಡಾ ಶಮನ್ ನಟಿಸಿದ್ದಾರೆ.