ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಾಯಾ ಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದ ಕಿರುತೆರೆ ನಟಿ ಇಶಿತ ವರ್ಷ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಸು ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಮತ್ತೆ ಕಾಲಿಟ್ಟಿರುವ ಇಶಿತ ವರ್ಷರನ್ನು, ತೆರೆ ಮೇಲೆ ಕಂಡು ವೀಕ್ಷಕರಿಗೆ ಸಂತಸವಾಗಿದೆ.
ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ಬೇರೆ ಯಾವುದೇ ಧಾರಾವಾಹಿಗಳಲ್ಲಿ ಇಶಿತ ಅಭಿನಯಿಸಲಿಲ್ಲ. ಕೊಂಚ ಬ್ರೇಕ್ ಪಡೆದುಕೊಂಡಿದ್ದ ಇಶಿತ ಇದೀಗ ಸರಸು ಧಾರಾವಾಹಿಯ ಮೂಲಕ ಕಂ ಬ್ಯಾಕ್ ಆಗಿದ್ದು, ಇಲ್ಲಿ ಒಂದಷ್ಟು ಸಂಚಿಕೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸೀರಿಯಲ್ ಹೊರತಾಗಿ ಸದ್ಯ ರಿಯಾಲಿಟಿ ಶೋ ನಲ್ಲೂ ಭಾಗವಹಿಸುತ್ತಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ರಿಯಾಲಿಟಿ ಶೋ ಕುಕ್ಕು ವಿತ್ ಕಿರಿಕ್ಕು ನಲ್ಲಿ ಕಾಣಿಸಿಕೊಂಡಿರುವ ಇಶಿತ ಸಾಕಷ್ಟು ಎಂಜಾಯ್ ಮಾಡುತ್ತಿದ್ದಾರೆ.
‘ಕುಕ್ಕು ವಿತ್ ಕಿರಿಕ್ಕು ಎನ್ನುವ ಶೋ ತುಂಬಾ ಸೊಗಸಾಗಿ ಮೂಡಿ ಬರುತ್ತಿದೆ. ಈ ಶೋ ನ ಪ್ರಸಾರ ಅದೆಷ್ಟು ಮಜಾದಿಂದ ಕೂಡಿರುತ್ತದೋ, ನಾವು ಕೊಂಚ ಜಾಸ್ತಿಯೇ ಶೂಟಿಂಗ್ನಲ್ಲಿ ಮಜಾ ಮಾಡುತ್ತೇವೆ. ಇಂತಹ ಶೋ ನಲ್ಲಿ ಭಾಗವಹಿಸಲು ಅವಕಾಶ ದೊರಕಿದ್ದು ನನ್ನ ಅದೃಷ್ಟವೇ ಸರಿ’ ಎಂದು ಹೇಳುತ್ತಾರೆ ಇಶಿತ.
ಇದನ್ನೂ ಓದಿ: ತವರಿನ ಸಂಕಷ್ಟಕ್ಕೆ ಮಿಡಿದ ನಟ ಭುವನ್, ನಟಿ ಹರ್ಷಿಕಾ.. ಕೊಡವರಿಗೆ 'ಭುವನಂ' ನೆರವು
‘ಈ ಶೋ ನಿಂದ ನಾನು ಒಂದಷ್ಟು ಅಡುಗೆಗಳನ್ನು ಕಲಿತೆ. ಇನ್ನು ಈ ಶೋ ನಲ್ಲಿ ಒಂದಷ್ಟು ಜನ ಸೀನಿಯರ್ಸ್ ಗಳು ಕೂಡ ಇದ್ದರು. ಆದರೆ ಜ್ಯೂನಿಯರ್ಸ್, ಸೀನಿಯರ್ಸ್ ಎಂಬ ಭಾವ ಯಾವತ್ತೂ ನಮ್ಮ ನಡುವೆ ಬಂದಿಲ್ಲ. ಎಲ್ಲರೂ ಒಟ್ಟಾಗಿ ಕೂಡಿ ಸಕತ್ ಮಜಾ ಮಾಡುತ್ತೇವೆ’ ಎಂದಿದ್ದಾರೆ ಇಶಿತ.