ETV Bharat / sitara

'ಹಲೋ 1..2..3 ಮೈಕು ಟೆಸ್ಟಿಂಗ್'​​... ಮದುವೆ ಬಗ್ಗೆ ಚಾರ್ಮಿ ಕೌರ್ ಕೊಟ್ರು ಶಾಕಿಂಗ್ ಕಾಮೆಂಟ್​

ಕನ್ನಡದ 'ಯಾರೇ ಕೂಗಾಡಲಿ' ಚಿತ್ರದಲ್ಲಿಯ 'ಹಲೋ 1 2 3 ಮೈಕು ಟೆಸ್ಟಿಂಗ್' ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹಾರ್ಟ್​​ಗೆ ಬಾಣ ಬಿಟ್ಟಿದ್ದ ಈ ಚೆಲುವೆ, ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ವಂತೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : May 17, 2019, 9:54 PM IST

ಬಹುಭಾಷಾ ನಟಿ ಚಾರ್ಮಿ ಕೌರ್​ ವಯಸ್ಸು ಮೂವತ್ತು ದಾಟಿದ್ರೂ ಇನ್ನೂ ಮದುವೆಯಾಗಿಲ್ಲ. ಇತ್ತ ಸಿನಿಮಾಗಳಲ್ಲೂ ನಟಿಸುತ್ತಿಲ್ಲ, ಅತ್ತ ಮ್ಯಾರೇಜು ಮಾಡ್ಕೋತಿಲ್ಲ. ಅಷ್ಟಕ್ಕೂ ಯಾಕೆ ಈ ವನವಾಸ ಮೇಡಂ ಅಂತಾ ಅವರನ್ನೇ ಕೇಳಿದ್ರೆ... ಚಾರ್ಮಿಯಿಂದ ಬರುವ ಉತ್ತರ ಏನು ಗೊತ್ತಾ ?

ಕನ್ನಡ ಸೇರಿದಂತೆ ಸುಮಾರು 55 ಚಿತ್ರಗಳಲ್ಲಿ ನಟಿಸಿರುವ ಈ ಪಂಜಾಬಿ ಬೆಡಗಿ ಮೊನ್ನೆಯಷ್ಟೆ ಮಾಧ್ಯಮಗಳೊಂದಿಗೆ ಮಾತಿಗೆ ಸಿಕ್ಕಿದ್ದರು. ಈ ವೇಳೆ ತಮ್ಮ ಪರ್ಸನಲ್​ ಹಾಗೂ ಸಿನಿ ಕರಿಯರ್ ಬಗ್ಗೆ ಕೆಲವೊಂದು ಇಂಟ್ರೆಸ್ಟಿಂಗ್ ವಿಚಾರ ಹಂಚಿಕೊಂಡ್ರು.

ಕನ್ನಡದ 'ಯಾರೇ ಕೂಗಾಡಲಿ' ಚಿತ್ರದಲ್ಲಿಯ 'ಹಲೋ 1 2 3 ಮೈಕು ಟೆಸ್ಟಿಂಗ್' ಹಾಡಿಗೆ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಹಾರ್ಟ್​​ಗೆ ಬಾಣ ಬಿಟ್ಟಿದ್ದ ಈ ಚೆಲುವೆ, ಇನ್ಮುಂದೆ ಸಿನಿಮಾಗಳಲ್ಲಿ ನಟಿಸಲ್ವಂತೆ. ಅವರೇ ಹೇಳುವಂತೆ 'ಇನ್ಮುಂದೆ ನಾನು ಸಿನಿಮಾಗಳಲ್ಲಿ ನಟಿಸಲು ಇಚ್ಛಿಸಲ್ಲ'. ಹಾಗಂತಾ ಚಿತ್ರರಂಗದಿಂದ ದೂರವು ಹೋಗುತ್ತಿಲ್ಲ. ನಿರ್ಮಾಪಕಿಯಾಗಿ ಇಂಡಸ್ಟ್ರಿಯಲ್ಲಿ ಮುಂದುವರೆಯಲು ಬಯಸುತ್ತೇನೆ' ಎಂದಿದ್ದಾರೆ.

ಇನ್ನು ಮದುವೆ, ಮಕ್ಕಳ ಬಗ್ಗೆಯೂ ಮಾತಾಡಿರುವ ಚಾರ್ಮಿ, ಮ್ಯಾರೇಜ್​ ಮಾಡ್ಕೊಂಡು ಮಕ್ಕಳನ್ನು ಪಡೆಯೋದರ ಬಗ್ಗೆ ಯಾವುದೇ ಪ್ಲ್ಯಾನಿಲ್ಲ. ಗೃಹಸ್ಥಾಶ್ರಮಕ್ಕೆ ನಾನು ಸೂಕ್ತವಲ್ಲ ಎನ್ನೋದು ನನ್ನ ಭಾವನೆ. ನನ್ನ ಜೀವನದಲ್ಲಿ ಬೇರೆ ವ್ಯಕ್ತಿಯನ್ನು ಕಲ್ಪಿಸಿಕೊಳ್ಳಲು ನಂಗೆ ಸಾಧ್ಯವಾಗೋದಿಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.