ETV Bharat / sitara

ಕೊಚ್ಚಿ ಶಾಪಿಂಗ್ ಮಾಲ್‌ನಲ್ಲಿ ನಡೆದ ‘ಆ ಕರಾಳ ಘಟನೆ’ ಬಗ್ಗೆ ಹಂಚಿಕೊಂಡ ಕೇರಳ ನಟಿ - ಕೇರಳದ ನಟಿ ಮೇಲೆ ದೌರ್ಜನ್ಯ

ಇಬ್ಬರು ಯುವಕರು ನನ್ನನ್ನು ಹಿಂಬಾಲಿಸಿದರು. ದೇಹದ ವೈಯಕ್ತಿಕ ಭಾಗಗಳನ್ನು ಮುಟ್ಟಿದರು ಮತ್ತು ನನ್ನನ್ನು ಹಿಡಿದರು ಎಂದು ಮಾಲ್​ ಒಂದರಲ್ಲಿ ತಮಗಾದ ದೌರ್ಜನ್ಯದ ಬಗ್ಗೆ ಕೇರಳದ ನಟಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Kerala actor abuse in Kochi shopping mall
‘ಆ ಕರಾಳ ಘಟನೆ’ ಬಗ್ಗೆ ಹಂಚಿಕೊಂಡ ಕೇರಳ ನಟಿ
author img

By

Published : Dec 18, 2020, 4:15 PM IST

ಎರ್ನಾಕುಲಂ (ಕೇರಳ): ಕೊಚ್ಚಿಯ ಮಾಲ್‌ನಲ್ಲಿ ಶಾಪಿಂಗ್ ಮಾಡುವಾಗ ಇಬ್ಬರು ಯುವಕರು ತಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಕೇರಳದ ನಟಿ ಆರೋಪಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ನಂತರ ಸುಮೋಟೋ ಪ್ರಕರಣವನ್ನು ದಾಖಲಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಘಟನೆ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಘಟನೆಯ ಬಗ್ಗೆ ಔಪಚಾರಿಕ ದೂರು ನೀಡುವುದಿಲ್ಲ ಎಂದು ನಟಿಯ ಕುಟುಂಬಕ್ಕೆ ತಿಳಿಸಿದೆ. ಇಬ್ಬರು ಯುವಕರು ನನ್ನನ್ನು ಹಿಂಬಾಲಿಸಿದರು. ದೇಹದ ವೈಯಕ್ತಿಕ ಭಾಗಗಳನ್ನು ಮುಟ್ಟಿದರು ಮತ್ತು ನನ್ನನ್ನು ಹಿಡಿದರು. ಈ ಅನಿರೀಕ್ಷಿತ ಘಟನೆಯಿಂದ ನಾನು ಆಘಾತಕ್ಕೊಳಗಾಗಿದ್ದೆ. ನನಗೆ ತಕ್ಷಣ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ ಎಂದು ನಟಿ ಹೇಳಿದ್ದಾರೆ.

Kerala actor abuse in Kochi shopping mall
‘ಆ ಕರಾಳ ಘಟನೆ’ ಬಗ್ಗೆ ಹಂಚಿಕೊಂಡ ಕೇರಳ ನಟಿ

ನಾನು ಅವರ ಬಳಿಗೆ ಹೋಗಲು ಪ್ರಯತ್ನಿಸಿದಾಗ, ಇಬ್ಬರು ನನ್ನನ್ನು ನೋಡಲಿಲ್ಲ ಎಂಬಂತೆ ವರ್ತಿಸಿದರು. ನಂತರ ನಾನು ನಗದು ಕೌಂಟರ್‌ನಲ್ಲಿದ್ದಾಗ, ಅವರು ಬಂದು ನನ್ನೊಂದಿಗೆ ಮಾತನಾಡಲು ಪ್ರಯತ್ನಿಸಿದರು ಎಂದು ನಟಿ ತಿಳಿಸಿದ್ದಾರೆ.

ಇದನ್ನೂ ಓದಿ:'ನಟಿಯರು ಮಾತ್ರ ಅರೆಸ್ಟ್​: ನಟರನ್ನೇಕೆ ತನಿಖೆ ಮಾಡಿ ಅರೆಸ್ಟ್​​ ಮಾಡ್ತಿಲ್ಲ'​​

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಮಹಿಳಾ ಆಯೋಗ ಈ ಬಗ್ಗೆ ಖುದ್ದಾಗಿ ನಟಿಯನ್ನು ಭೇಟಿಯಾಗಿ ಘಟನೆಯ ವಿವರಗಳನ್ನು ಕಲೆ ಹಾಕುವುದಾಗಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.