ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಲೂಸ್ ಮಾದ ಯೋಗಿ ಅಭಿನಯದ ಲಂಕೆ ಸಿಸಿಮಾ ಬಿಡುಗಡೆಯಾಗಿದೆ. ಸತ್ಯ ಕಥೆ ಆಧರಿಸಿದ ಸಿನಿಮಾ ಇದಾಗಿದೆ. ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊರೊನಾ ಹಿನ್ನೆಲೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅನುಮತಿಸಿದೆ. ಈ ಹಿನ್ನೆಲೆಯಲ್ಲಿ ಯುವ ನಟರಿಂದ ಹಿಡಿದು ದೊಡ್ಡ ದೊಡ್ಡ ನಟರ ಸಿನಿಮಾಗಳ ರಿಲೀಸ್ ಡೇಟ್ಗಳು ಮುಂದೆ ಹೋಗುತ್ತಿವೆ. ಇದರ ನಡುವೆಯೂ ಲಂಕೆ ತೆರೆ ಮೇಲೆ ಅಬ್ಬರಿಸುತ್ತಿದೆ.
ಲೈಂಗಿಕ ಕಾರ್ಯಕರ್ತೆಯರ ಸಮುದಾಯದಿಂದ ಬಂದ ಹುಡುಗನ ಸುತ್ತ ಕಥೆ ನಡೆಯುತ್ತದೆ. ಈ ಸಿನಿಮಾದ ಮೂಲಕ ಯೋಗಿ ಬಹಳ ದಿನಗಳ ಬಳಿಕ ಮತ್ತೆ ಮಾಸ್ ಹೀರೊ ಆಗಿ ಕಾಣಿಸಿದ್ದಾರೆ.
ಯೋಗಿಗೆ ಜತೆಯಾಗಿ ಕೃಷಿ ತಾಪಂಡ ಮಿಂಚಿದ್ದಾರೆ. ಇವರ ಜೊತೆಗೆ ಗಾಯತ್ರಿ ಜಯರಾಮನ್ ಹಾಗೂ ಕಾವ್ಯ ಶೆಟ್ಟಿ ಕಾಣಿಸಿದ್ದಾರೆ. ಇನ್ನು, ಸಂಚಾರಿ ವಿಜಯ್, ಎಸ್ತರ್ ನೊರೊನ್ಹಾ ಜೋಡಿ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.
ಚಿತ್ರದ ಹಾಡುಗಳು ಈಗಾಗಲೇ ಸಿನಿ ಪ್ರಿಯರಿಗೆ ಇಷ್ಟವಾಗಿವೆ. ಸಾಂಗ್ಗಳಿಗೆ ಕಾರ್ತಿಕ್ ಶರ್ಮ ಹಿನ್ನೆಲೆ ಸಂಗೀತ ನೀಡಿದ್ದಾರೆ. ಹಿರಿಯ ಛಾಯಾಗ್ರಾಹಕ ರಮೇಶ್ ಬಾಬು ಈ ಸಿನಿಮಾಗೆ ಅದ್ಭುತ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಇದರ ಜೊತೆಗೆ ಡ್ಯಾನಿ ಕುಟ್ಟಪ್ಪ ಹಾಗೂ ನಟ ಶರತ್ ಲೋಹಿತಾಶ್ವ ಕೊಟ್ಟ ಪಾತ್ರಗಳಲ್ಲಿ ಮಿಂಚಿದ್ದಾರೆ.
ಸಿನಿಮಾವನ್ನು ನಿರ್ದೇಶಕ ರಾಮ್ ಪ್ರಸಾದ್ ನಿರ್ದೇಶಿಸಿದ್ದಾರೆ. ಪಟೇಲ್ ಶ್ರೀನಿವಾಸ್ ನಾಗವಾರ ಮತ್ತು ಸುರೇಖಾ ರಾಮ್‌ಪ್ರಸಾದ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಟಿ ಕೃಷಿ ತಾಪಂಡ ಹಾಗೂ ಎಸ್ತರ್ ನೊರೊನ್ಹಾ ಪ್ರೇಕ್ಷಕರ ಜೊತೆ ಕುಳಿತು ಸಿನಿಮಾ ವೀಕ್ಷಿಸಿ ಖುಷಿಪಟ್ಟರು.