ನಟ, ನಿರ್ದೇಶಕ ಉಪೇಂದ್ರ ಅವರು ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ಇಂದು ಬೆಳಗ್ಗೆ ನಿವಾಸಕ್ಕೆ ತೆರಳಿ ರಾಘಣ್ಣ ಅವರ ಯೋಗಕ್ಷೇಮ ವಿಚಾರಿಸಿದರು.
ಉಪ್ಪಿ ತಮ್ಮ ಮನೆಗೆ ಆಗಮಿಸಿದ್ದರ ಬಗ್ಗೆ ರಾಘಣ್ಣ ಫೇಸ್ಬುಕ್ಲ್ಲಿ ಫೋಟೊ ಹಂಚಿಕೊಂಡಿದ್ದಾರೆ. 'ತಮ್ಮ ಮನೆಗೆ ಬಂದಿದ್ದ ಉಪೇಂದ್ರ ಅವರಿಗೆ ಧನ್ಯವಾದ ಹೇಳಿರುವ ಅವರು, 'ನಿಮ್ಮ ಸರಳತೆಯ ಸ್ವಭಾವ ಬದಲಾಗಿಲ್ಲ. ಹಾಗೆ ಉಳಿದಿದೆ' ಎಂದು 'ಬುದ್ಧಿವಂತ'ನನ್ನು ಗುಣಗಾನ ಮಾಡಿದ್ದಾರೆ.
![raghavendra-rajakumar](https://etvbharatimages.akamaized.net/etvbharat/prod-images/fb_img_15608516738351560853176995-33_1806email_1560853188_890.jpg)
ಇನ್ನು ಈ ಇಬ್ಬರ ತಾರೆಯರ ಭೇಟಿ ಕುತೂಹಲ ಕೆರಳಿಸಿದೆ. ಉಪ್ಪಿ ಹಾಗೂ ರಾಘಣ್ಣ ಕಾಂಬಿನೇಷನ್ನ ಸ್ವಸ್ತಿಕ್ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಈಗ ಉಪ್ಪಿ, ರಾಘಣ್ಣ ಅವರನ್ನು ಭೇಟಿ ಮಾಡಿದ್ದು ಮತ್ತೆ ಈ ಜೋಡಿ ಹೊಸ ಸಿನಿಮಾಗೆ ಕೈ ಹಾಕಬಹುದಾ? ಅಥವಾ ರಾಘಣ್ಣನ ಎರಡನೇ ಮಗ ಯುವರಾಜ್ನಿಗೆ ಉಪ್ಪಿ ಸಿನಿಮಾ ಮಾಡ್ತಾರಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.