ಕಿಚ್ಚ ಸುದೀಪ್ ಸಿನಿ ಜರ್ನಿಯಲ್ಲಿ ಅಚ್ಚಳಿಯದಂತಹ ಸಿನಿಮಾಗಳ ಪೈಕಿ 'ಮೈ ಆಟೋಗ್ರಾಫ್' ಕೂಡ ಒಂದು. ಈ ಚಿತ್ರವನ್ನು ಸುದೀಪ್ ಅವರೇ ನಿರ್ದೇಶಿಸಿ ನಟಿಸಿದ್ದರು. 2006ರಲ್ಲಿ ತೆರೆ ಕಂಡ ಈ ಸಿನಿಮಾವನ್ನು ಸುದೀಪ್ ಇದೀಗ ಮೆಲುಕು ಹಾಕಿದ್ದಾರೆ.
ಚಿತ್ರದ ಶೂಟಿಂಗ್ ಕೇರಳ ಒಂದು ಮನೆಯಲ್ಲಿ ನಡೆದಿದ್ದು, ಆ ಮನೆಗೆ ಸುದೀಪ್ ಲತಿಕಾ ಮನೆ ಎಂದು ಕರೆದಿದ್ದಾರೆ. ಯಾಕಂದ್ರೆ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಲತಿಕಾ ಕಣಿಸಿಕೊಂಡಿದ್ದರು.
ಓದಿ: ಈ ಬಾರಿ ಚಿತ್ರಸಂತೆ ಉದ್ಘಾಟಿಸಲಿದ್ದಾರೆ ಇನ್ಫೋಸಿಸ್ ಸುಧಾಮೂರ್ತಿ
ಹೈದ್ರಾಬಾದ್ನಲ್ಲಿ 'ಫ್ಯಾಂಟಮ್' ಸಿನಿಮಾ ಶೂಟಿಂಗ್ ಮುಗಿಸಿರುವ ಕಿಚ್ಚ ಕೇರಳ ಕಡೆ ಪ್ರವಾಸ ಬೆಳೆಸಿದ್ದಾರೆ. ಈ ವೇಳೆ ಲತಿಕಾ ಮನೆಗೆ ಹೋದ ವಿಡಿಯೋವನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆ ಮನೆಯೊಳಗೆ ಹೋದ ಸಂದರ್ಭದಲ್ಲಿ ಲತಿಕಾ ವೀಣೆ ಬಾರಿಸುವ ದೃಶ್ಯವಿದೆ. ಆ ಸ್ಥಳಕ್ಕೂ ಹೋಗಿರುವ ಸುದೀಪ್ ವೀಣೆ ಸೀನ್ ಇಲ್ಲೇ ಚಿತ್ರೀಕರಿಸಿದ್ವಿ ಎಂದು ನೆನಪಿಸಿಕೊಂಡರು.
- " class="align-text-top noRightClick twitterSection" data="
">