ETV Bharat / sitara

ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು: ನಟ ಸುದೀಪ್ - actor sudeep latest tweet

ನಟ ಕಿಚ್ಚ ಸುದೀಪ್ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ವಾರಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಆರೋಗ್ಯವಾಗಿ ಇದ್ದೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ.

actor sudeep
ನಟ ಕಿಚ್ಚ ಸುದೀಪ್
author img

By

Published : Apr 29, 2021, 2:23 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಂಡಿರುವ ಸುದೀಪ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ ಎರಡು ವಾರಗಳಿಂದ ಬಿಗ್ ಬಾಸ್ ಶೋ ಜೊತೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಮನೆಯಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಸುದೀಪ್ ಅಭಿಮಾನಿಗಳಿಗೆ, ನಮ್ಮ ನೆಚ್ಚಿನ ನಟನಿಗೆ ಏನಾಗಿದೆ, ಹೇಗಿದ್ದಾರೆ? ಎನ್ನುವ ಆತಂಕವಿತ್ತು.

actor sudeep tweet
ನಟ ಕಿಚ್ಚ ಸುದೀಪ್ ಟ್ವೀಟ್​​

ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ನನಗಾಗಿ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ಈಗ ಉತ್ತಮವಾಗಿದ್ದೇನೆ. ಈ ವಾರ ನಿರೂಪಣೆಗೆ ಹಾಜರಾಗಲು ಎದುರು ನೋಡುತ್ತಿದ್ದೇನೆ. ನನಗೆ ಚಿಕಿತ್ಸೆ ನೀಡಿದ ಡಾ. ವೆಂಕಟೇಶ್ ಮತ್ತು ಡಾ. ವಿನಯ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಸೋಂಕು ತಗುಲಿ ಸ್ಯಾಂಡಲ್​ವುಡ್​ ನಿರ್ಮಾಪಕ ಚಂದ್ರಶೇಖರ್ ನಿಧನ

ಇನ್ನು ದೇವಸ್ಥಾನದಲ್ಲಿ ಪೂಜೆ ಮಾಡಿದ, ಪ್ರಾರ್ಥಿಸಿದ ಸಾಕಷ್ಟು ವಿಡಿಯೋಗಳನ್ನು ನೋಡಿದ್ದೇನೆ. ಎಲ್ಲರಿಗೂ ಲವ್ ಯೂ ಎಂದು ಸುದೀಪ್ ಹೇಳಿದ್ದಾರೆ.

actor sudeep
ನಟ ಕಿಚ್ಚ ಸುದೀಪ್

ಕಿಚ್ಚನ ಆರೋಗ್ಯಕ್ಕಾಗಿ ಸಾಕಷ್ಟು ಮಂದಿ ಅಭಿಮಾನಿಗಳು ದೇವರ ಮೊರೆ ಹೋಗಿದ್ದರು. ನೆಚ್ಚಿನ ನಟ ಬೇಗ ಗಣಮುಖರಾಗಲಿ ಎಂದು ವಿಶೇಷ ಪೂಜೆ ಮಾಡಿಸಿ ಪ್ರಾರ್ಥಿಸಿದ್ದಾರೆ. ಅಭಿಮಾನಿಗಳ ಪೂಜೆಯ ಫೋಟೋವನ್ನು ಸುದೀಪ್ ಶೇರ್ ಮಾಡಿ, ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಬಿಗ್ ಬಾಸ್ ಶೋನ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್​ ಕಾರ್ಯಕ್ರಮದಲ್ಲಿ ಕಿಚ್ಚನನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.