ETV Bharat / sitara

'ನಮ್ಮ ವಿದ್ಯಾರ್ಥಿಗಳಿಗೆ ಸವಾರಿ'..ಸೈಕಲ್​ ಏರಿ ಸಿನಿಮಾ ಶೂಟಿಂಗ್​ಗೆ ಬಂದ ಸೋನು ಸೂದ್​! - Actor Sonu Sood

ವಿದ್ಯಾರ್ಥಿಗಳ ಗೆಲುವಿಗಾಗಿ ಬಹುಭಾಷಾ ನಟ ಸೋನು ಸೂದ್ ಇಂದು ಬೆಳಗ್ಗೆ ಸೈಕಲ್​ ಸವಾರಿ ನಡೆಸಿ ಸಿನಿಮಾ ಸೆಟ್​ಗೆ ತೆರಳಿದ್ದಾರೆ.

Actor Sonu Sood Takes Cycle Ride
Actor Sonu Sood Takes Cycle Ride
author img

By

Published : Apr 14, 2021, 9:46 PM IST

ಹೈದರಾಬಾದ್​: ಕೋವಿಡ್ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿರುವ ನಟ ಸೋನು ಸೂದ್​ ಇದೀಗ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದು, ಅದರ ಅಂಗವಾಗಿ ಇಂದು ಬೆಳಗ್ಗೆ ಸಿನಿಮಾ ಶೂಟಿಂಗ್​ಗೆ ಸೈಕಲ್​ ಮೇಲೆ ತೆರಳಿದ್ದಾರೆ.

ಸಿಬಿಎಸ್​ಇ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಮಾಡುವಂತೆ ಬಹುಭಾಷಾ ನಟ ಸೋನು ಸೂದ್ ಕಳೆದ ಕೆಲ ದಿನಗಳ ಹಿಂದೆ ಮನವಿ ಮಾಡಿ, ವಿದ್ಯಾರ್ಥಿಗಳ ಪರವಾಗಿ ಬ್ಯಾಟ್​ ಬೀಸಿದ್ದರು. ಅದರ ನಿಮಿತ್ತ ಇಂದು ಬೆಳಗ್ಗೆ ಹೈದರಾಬಾದ್​ನಲ್ಲಿ ಅವರು ಸಿನಿಮಾ ಶೂಟಿಂಗ್​ ಸೆಟ್​ಗೆ ಸೈಕಲ್​ ಮೇಲೆ ಸವಾರಿ ನಡೆಸಿದ್ದಾರೆ. ಇದರ ವಿಡಿಯೋ ತಮ್ಮ ಟ್ವೀಟರ್​​ನಲ್ಲಿ ಹಾಕಿಕೊಂಡಿದ್ದಾರೆ.

ಹೈದರಾಬಾದ್​ನ ಮುಂಬೈ ರೋಡ್​ನಲ್ಲಿ ಚಿರಂಜೀವಿ ನಟನೆಯ 'ಆಚಾರ್ಯ'ಸಿನಿಮಾ ಚಿತ್ರೀಕರಣವಾಗುತ್ತಿದ್ದು, ಅಲ್ಲಿಗೆ ಸೋನು ಸೂದ್ ಸೈಕಲ್​ ತುಳಿದುಕೊಂಡು ಹೋಗಿದ್ದು, ನಮ್ಮ ವಿದ್ಯಾರ್ಥಿಗಳಿಗಾಗಿ ಸವಾರಿ ಎಂದಿದ್ದಾರೆ.

  • So finally it happened.
    Congratulations to every student. 🇮🇳

    — sonu sood (@SonuSood) April 14, 2021 " class="align-text-top noRightClick twitterSection" data=" ">

ಸಿಬಿಎಸ್​​ಇ ವಿದ್ಯಾರ್ಥಿಗಳ ಪರೀಕ್ಷೆ ವಿಚಾರವಾಗಿ ಹೆಚ್ಚಿನ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 10ನೇ ತರಗತಿ ಪರೀಕ್ಷೆ ರದ್ಧುಗೊಳಿಸಿದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ ಮಾಡಿದೆ. ಪರೀಕ್ಷೆ ಮುಂದೂಡಿಕೆ ಆಗುತ್ತಿದ್ದಂತೆ ಕೊನೆಗೂ ಇದು ಸಾಧ್ಯವಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದನೆಗಳು ಎಂದಿದ್ದಾರೆ.

Watch: ಸೈಕಲ್​ ಏರಿ 'ಆಚಾರ್ಯ' ಸಿನಿಮಾ ಶೂಟಿಂಗ್​ಗೆ ತೆರಳಿದ ಸೋನು ಸೂದ್!- ವಿಡಿಯೋ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.