ETV Bharat / sitara

'ಮದಗಜ' ಬಗ್ಗೆ ಅನುಭವ ಹಂಚಿಕೊಂಡ ರೋರಿಂಗ್ ಸ್ಟಾರ್ ಶ್ರೀಮುರಳಿ - ಮದಗಜ ಬಗ್ಗೆ ಅನುಭವ ಹಂಚಿಕೊಂಡ ಶ್ರೀಮುರಳಿ

ನಿನ್ನೆಯಷ್ಟೇ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಮದಗಜ' ಟ್ರೈಲರ್ ಬಿಡುಗಡೆ ಆಗಿ ಒಂದು ಗಂಟೆಯಲ್ಲೇ ಒಂದು ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಮಾಸ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಶ್ರೀಮುರಳಿ ಮದಗಜ ಸಿನಿಮಾದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ..

actor shrimuruli shares Experience about Madagaja film
''ಮದಗಜ'' ಬಗ್ಗೆ ಅನುಭವ ಹಂಚಿಕೊಂಡ ರೋರಿಂಗ್ ಸ್ಟಾರ್ ಶ್ರೀಮುರಳಿ
author img

By

Published : Nov 20, 2021, 5:40 PM IST

''ಮದಗಜ''(Madagaja film) ರೋರಿಂಗ್ ಸ್ಟಾರ್ ಶ್ರೀಮುರಳಿ(actor shrimuruli) ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಟೈಟಲ್ ಹಾಗೂ ಟೀಸರ್‌ನಿಂದಲೇ ಕನ್ನಡ ಚಿತ್ರರಂಗ ಅಷ್ಟೇ ಅಲ್ಲದೇ ಪರಭಾಷೆಯಲ್ಲೂ ಟಾಕ್ ಆಗುತ್ತಿದೆ.

ಮದಗಜ ಸಿನಿಮಾದ ಆಫೀಶಿಯಲ್ ಟ್ರೈಲರ್ ಅನ್ನು ನಿನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಅನಾವರಣ ಮಾಡಿ, ಹಾಲಿವುಡ್ ಸಿನಿಮಾಗೆ ಹೋಲಿಸಿದ್ದಾರೆ.

ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಒಂದು ಗಂಟೆಯಲ್ಲೇ ಒಂದು ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಮಾಸ್ ಲುಕ್​ನಲ್ಲಿ ಕಾಣಿಸಿರುವ ಶ್ರೀಮುರಳಿ ಮದಗಜ ಸಿನಿಮಾದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮದಗಜ ಸಿನಿಮಾ ಅಂದಾಕ್ಷಣ ನೆನಪಾಗೋದು ಸಿನಿಮಾದ ಕಥೆ ಬಳಿಕ ಈ ಸಿನಿಮಾಕ್ಕಾಗಿ ಚಿತ್ರೀಕರಣ ಮಾಡಿರುವ ಆ ಲೋಕೇಶನ್​ಗಳು. ಇಡೀ ಚಿತ್ರತಂಡ ಮಳೆ ಗಾಳಿಯೆನ್ನದೇ ಕಷ್ಟಪಟ್ಟು ಚಿತ್ರೀಕರಣ ಮಾಡಿದ ರೀತಿ ನನಗೆ ತುಂಬಾ ಕಾಡುತ್ತೆ ಅಂತಾರೆ ಶ್ರೀಮುರಳಿ.

ಮದಗಜ ಚಿತ್ರದ ಕುರಿತಂತೆ ರೋರಿಂಗ್ ಸ್ಟಾರ್ ಶ್ರೀಮುರಳಿ ಮಾತನಾಡಿರುವುದು..

ಮದಗಜ ಸಿನಿಮಾ ಚಿತ್ರೀಕರಣದಲ್ಲಿ ಬಹಳ ಇಷ್ಟ ಪಟ್ಟು ಕೆಲಸ ಮಾಡಿದ್ದೇವೆ. ಈ ಕಾರಣಕ್ಕಾಗಿ ನಾನು ಡಿಸೆಂಬರ್ 3ನೇ ತಾರೀಖಿಗಾಗಿ ಕಾಯುತ್ತಿದ್ದೇನೆ. ಡಿಸೆಂಬರ್ 3ಕ್ಕೆ ಮದಗಜ ಸಿನಿಮಾ ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾವನ್ನು ಜನರು ಹೇಗೆ ರಿಸೀವ್ ಮಾಡ್ತಾರೆ ಅನ್ನೋದು ಸ್ವಲ್ಪ ಟೆನ್ಷನ್ ಇದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳ ಜೊತೆಗೆ ಸಾಕಷ್ಟು ನೋವು ನಮ್ಮನ್ನು ಕಾಡುತ್ತಿದೆ. ಇಂತಹ ಸಮಯದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಬಂದು ನಮ್ಮ ಸಿನಿಮಾಗೆ ಸಪೋರ್ಟ್ ಮಾಡಿದ್ದಾರೆ. ಆ ಮೂಲಕ ಚಿತ್ರರಂಗಕ್ಕೆ ಶಕ್ತಿ ತುಂಬುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು.

shrimuruli photo with actor jagapathi babu
ತೆಲುಗು ನಟ ಜಗಪತಿ ಬಾಬು ಜೊತೆಗೆ ಶ್ರೀಮುರುಳಿ ಫೋಟೋ

ಮದಗಜ ಸಿನಿಮಾದಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಈ ಸಿನಿಮಾದ ಸಂಪೂರ್ಣ ಕ್ರೆಡಿಟ್ ನಾನು ನನ್ನ ಸಿನಿಮಾ ತಂಡಕ್ಕೆ ಕೊಡುತ್ತೇನೆ. ಇನ್ನು ನಿರ್ದೇಶಕ ಮಹೇಶ್ ಕುಮಾರ್ ಒಬ್ಬ ನಿರ್ದೇಶಕನ ಜೊತೆಗೆ ಒಳ್ಳೆಯ ಟೆಕ್ನಿಶಿಯನ್. ಮಹೇಶ್ ಬಂದು ನನಗೆ ಕಥೆ ಹೇಳಿದಾಗ ಸಾಕಷ್ಟು ಬದಲಾವಣೆ ಮಾಡಿಕೊಂಡು, ಅದ್ಧೂರಿ ಮೇಕಿಂಗ್​​ನೊಂದಿಗೆ ಸಿನಿಮಾವನ್ನು ಮಾಡಿದ್ವಿ ಎಂದು ತಿಳಿಸಿದರು.

ಮದಗಜ ಸಿನಿಮಾದ ಮತ್ತೊಬ್ಬ ಹೀರೋ ಅಂದರೆ ನಮ್ಮ ನಿರ್ಮಾಪಕ ಉಮಾಪತಿ ಶ್ರೀನಿವಾಸ್. ಬಹಳ ಅದ್ದೂರಿಯಾಗಿ ದೊಡ್ಡ ಸ್ಟಾರ್ ಕಾಸ್ಟ್​​ಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಅದಕ್ಕಾಗಿ ಮದಗಜ ಸಿನಿಮಾದ ಹೀರೋ ನಾನಲ್ಲ, ನಮ್ಮ ನಿರ್ಮಾಪಕರು ಅನ್ನೋದು ಅಂತಾ ತಿಳಿಸಿದರು.

ಇದನ್ನೂ ಓದಿ: ಮದಗಜ ಟ್ರೇಲರ್ ರಿಲೀಸ್​.. 1 ಗಂಟೆಯಲ್ಲೇ 1 ಮಿಲಿಯನ್ ದಾಖಲೆಯ ವೀಕ್ಷಣೆ

ತೆಲುಗು ನಟ ಜಗಪತಿ ಬಾಬು ಅವರ ಜೊತೆಗಿನ ಅನುಭವವನ್ನು ಹಂಚಿಕೊಂಡರು.''ನಾನು ಜಗಪತಿ ಬಾಬು ಸರ್ ಅವ್ರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಒಂದು ಬಾರಿ ನಾನು ಶೂಟಿಂಗ್ ಲೊಕೇಶನ್​ಗೆ ಬೇಗ ಬಂದಿದ್ದೆ. ಆಗ ಜಗಪತಿ ಬಾಬು ಸರ್ ಅಲ್ಲೇ ವಾಕಿಂಗ್ ಮಾಡುತ್ತಿದ್ದರು. ನಾನು ಅಲ್ಲೇ ಚೇರ್ ಹಾಕಿಕೊಂಡು ಕುಳಿತಿದ್ದೆ.

ಇದನ್ನು ಗಮನಸಿದ ಜಗಪತಿ ಬಾಬು ಸರ್ ನನ್ನ ಹತ್ತಿರ ಬಂದು ಕುಳಿತು, ಏನು ಬೇಗ ಬಂದಿದ್ದೀಯಾ ಎಂದು ಮಾತನ್ನು ಆರಂಭಿಸಿದ್ರು. ಅರ್ಧ ಗಂಟೆಯಲ್ಲಿ ನಾನು ಜಗಪತಿ ಬಾಬು ಸಾರ್ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ವಿ. ನಾನು ಬಾಬು ಸರ್ ಅವ್ರಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡೆ ಎಂದು ಶ್ರೀಮುರಳಿ ಮದಗಜ ಸಿನಿಮಾದ ಅನುಭವನ್ನು ಹಂಚಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.