ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು, ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಚೇತರಿಕೆ ಆಗಲೆಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.
ಇಡೀ ದೇಶದಲ್ಲಿ ಎಸ್ಪಿಬಿ ಗುಣಮುಖರಾಗಲಿ ಎಂದು ದೊಡ್ಡ ಸ್ಟಾರ್ ನಟರು, ತಾವು ಇರುವ ಸ್ಥಳದಿಂದಲೇ ಅವರ ಹಾಡುಗಳನ್ನು ಹಾಡುವ ಮೂಲಕ ಗಾನ ಪ್ರಾರ್ಥನೆ ಸಲ್ಲಿಸಿದರು.
ಕನ್ನಡ ಚಿತ್ರರಂಗದಲ್ಲೂ ದೊಡ್ಡ ಕೊಡುಗೆ ನೀಡಿರುವ ಎಸ್ಪಿಬಿ ಆರೋಗ್ಯದ ಚೇತರಿಕೆಗಾಗಿ, ನಟ ಶಿವರಾಜ್ ಕುಮಾರ್ ಪ್ರಾರ್ಥಿಸಿದ್ದಾರೆ.
- " class="align-text-top noRightClick twitterSection" data="">
ತಮ್ಮ ಸಿನಿಮಾದಲ್ಲಿ ಹಾಡಿದ ಹಾಡೊಂದನ್ನು ನೆನಪಿಸಿಕೊಳ್ಳುವ ಮೂಲಕ, ನಾನು ನಿಮ್ಮ ದೊಡ್ಡ ಅಭಿಮಾನಿ ಸಾರ್ ಎಂದು ಹೇಳಿದ್ದಾರೆ. ನೀವು ಚೇತರಿಸಿಕೊಂಡು ಗುಣಮುಖರಾಗಿ ಬಂದು, ಇನ್ನಷ್ಟು ಸಿನಿಮಾಗಳಲ್ಲಿ ಹಾಡಿ ಎಂದು ಶಿವಣ್ಣ ಹಾರೈಸಿದ್ದಾರೆ.
ನೀವು ಗುಣಮುಖರಾದ ಮೇಲೆ ಮತ್ತೆ ನಮ್ಮ ಸಿನಿಮಾದಲ್ಲಿ ಹಾಡಬೇಕು ಎಂದು ವಿಡಿಯೋ ಹಾಕುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸ್ಮರಿಸಿಕೊಂಡಿದ್ದಾರೆ.