ಇಂದು ಸೆಂಚ್ಯೂರಿ ಸ್ಟಾರ್, ಕರುನಾಡ ಚರ್ಕವರ್ತಿ ನಟ ಶಿವರಾಜ್ ಕುಮಾರ್ ಹುಟ್ಟುಹಬ್ಬ. ಈ ಸಂಭ್ರಮದ ದಿನ ಅವರ 123ನೇ ಚಿತ್ರದ ಟೈಟಲ್ ಬಿಡುಗಡೆ ಆಗಿದ್ದು, ಇದೀಗ 124ನೇ ಸಿನಿಮಾ ಯಾವ ನಿರ್ದೇಶಕರ ಜೊತೆ ಅನ್ನೋ ಸುದ್ದಿ ರಿವೀಲ್ ಆಗಿದೆ.
ಶಿವರಾಜಕುಮಾರ್ 124 ನೇ ಚಿತ್ರವನ್ನು ರಾಮ್ ಧುಲಿಪುಡಿ ಎಂಬುವರು ನಿರ್ದೇಶನ ಮಾಡಲಿದ್ದು, ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಹೆಸರಾಂತ ನಟಿಯೊಬ್ಬರು ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದು, ಸದ್ಯದಲ್ಲೇ ಇದರ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ.
ಖ್ಯಾತ ನಟರಾದ ನಾಜರ್ ಹಾಗೂ ಸಂಪತ್ ಸಹ ಈ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ತಮ್ಮ ಕಂಚಿನ ಕಂಠದ ಮೂಲಕ ಜನಮನಸೂರೆಗೊಂಡಿರುವ ತೆಲುಗು ಗಾಯಕಿ ಮಂಗ್ಲಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 70 ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಹಾಗೂ ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ.
ಇದನ್ನೂ ಓದಿ: ಭಜರಂಗಿ-2 ಚಿತ್ರತಂಡದಿಂದ ಸೆಂಚುರಿ ಸ್ಟಾರ್ ಬರ್ತಡೇಗೆ ಸಿಕ್ತು ಸ್ಪೆಷಲ್ ಗಿಫ್ಟ್
ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಚಿತ್ರಕ್ಕೆ ರವಿಕುಮಾರ್ ಸನಾ ಅವರ ಛಾಯಾಗ್ರಹಣವಿದೆ. ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಹೊಸ ಚಿತ್ರಕ್ಕಿದೆ. ಬಾಲ ಶ್ರೀರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿದ್ದಾರೆ.