ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹಾಗೂ ಕುರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಭೇಟಿಯಾಗಿದ್ದಾರೆ.
ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಟಾಲಿವುಡ್ ಪ್ರಿನ್ಸ್ ಅವರನ್ನು ಶಿವರಾಜಕುಮಾರ್ ಭೇಟಿಯಾಗಿದ್ದಾರೆ. ಖಾಸಗಿ ಜಾಹೀರಾತು ನಿಮಿತ್ತ ಮುತ್ತಿನ ನಗರಿಗೆ ತೆರಳಿದ್ದ ಅವರು ಪಕ್ಕದ ಸೆಟ್ನಲ್ಲಿ ಮಹರ್ಷಿ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದ ಮಹೇಶ್ ಬಾಬು ಅವರನ್ನು ಸಂದಿಸಿ ಕುಶಲೋಪರಿ ವಿಚಾರಿಸಿದರು.
ಜೊತೆಗೆ ಕರ್ನಾಟಕದ ಪ್ರಸ್ತುತ ರಾಜಕೀಯ ವಿಚಾರದ ಕುರಿತು ಉಭಯ ನಟರು ಮಾತನಾಡಿದ್ದಾರೆ . ಈ ವೇಳೆ ಶಿವಣ್ಣಗೆ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಸಾಥ್ ನೀಡಿದರು.