ETV Bharat / sitara

ಡಾ. ರಾಜ್ ಕುಮಾರ್ ಹಾದಿಯಲ್ಲೇ 'ಸಂಚಾರಿ'.. ನಮ್ಮ ನಡುವೆಯೇ ಬದುಕಿದ 'ಅವನು..' - ಸಂಚಾರಿ ವಿಜಯ್ ಮಾನವೀಯ ಕಾರ್ಯಗಳು

ಅಣ್ಣಾವ್ರು ನೇತ್ರದಾನ ಮಹಾದಾನ ಎಂದು ಸಾರಿದ್ದರು. ಅಲ್ಲದೆ ತಮ್ಮ ಕಣ್ಣುಗಳನ್ನು ದಾನ ಮಾಡಿ ನುಡಿದಂತೆ ನಡೆದಿದ್ರು. ಈಗ ಅವರ ಮಾರ್ಗದಲ್ಲೇ ನಡೆದ ಸಂಚಾರಿ ವಿಜಯ್ ಅವರು ಸಾವಿನ ನಂತರ ಅಂಗಾಂಗ ದಾನ ಮಾಡುವ ಮೂಲಕ, ಮಾನವೀಯತೆಯ ಮೂರ್ತಿಯಾಗಿದ್ದಾರೆ‌..

sanchari
sanchari
author img

By

Published : Jun 16, 2021, 7:12 PM IST

ಕನ್ನಡ ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಸಾರ್ಥಕತೆಯ ಜೀವನ ನಡೆಸಿದ ನಟರಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಸಿನಿಮಾ ಪ್ರೇಕ್ಷಕರನ್ನ ರಂಜಿಸಿ, ಬದುಕಿನ ಪಯಣ ಮುಗಿಸಿ, ಸಂಚಾರಿ ವಿಜಯ್ ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ, ವಿಜಯ್ ಬದುಕಿದ್ದ ಸಮಯದಲ್ಲಿ ಸಾಕಷ್ಟು ಸಾಮಾಜಿಕ ಕೆಲಸಗಳನ್ನ ಮಾಡಿದ್ದಾರೆ.

ಸಿನಿಮಾ, ರಂಗಭೂಮಿ ಮಾತ್ರವಲ್ಲದೆ ಹಸಿದವರು, ಬಡವರ ಕಷ್ಟಕ್ಕೆ ವಿಜಯ್ ಮಿಡಿಯುತ್ತಿದ್ದರು. ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ತನ್ನ ಕಾರನ್ನು ಸೇಲ್ ಮಾಡಿ ಬಡವರಿಗೆ ಸಹಾಯ ಮಾಡಿದ್ರು. ಇದೀಗ ಸಾವಿನ ನಂತರ ಐದು ಜನರ ಬಾಳಿಗೆ ಬೆಳಕಾಗಿದ್ದಾರೆ. ಜೂನ್12ರಂದು ರಾತ್ರಿ ಬೈಕ್ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು, ಕೋಮಾಗೆ ತಲುಪಿದ್ದ ವಿಜಯ್, ನಿನ್ನೆಯಷ್ಟೇ ಕೊನೆಯುಸಿರೆಳೆದಿದ್ದರು.

sanchari
sanchari

ಈ ಅಪಘಾತದಲ್ಲಿ ವಿಜಯ್ ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಅವರ ಮೆದುಳು ತನ್ನ ಕೆಲಸವನ್ನೇ ನಿಲ್ಲಿಸಿ ಬಿಟ್ಟಿತ್ತು.. ಏನೇ ಮಾಡಿದ್ರೂ ವಿಜಯ್ ಬದುಕಿ ಬರೋದು ಸಾಧ್ಯವಿಲ್ಲ ಎಂಬುದನ್ನು ಅರಿತ ಅವರ ಕುಟುಂಬಸ್ಥರು, ನೋವಿನಲ್ಲೂ ವಿಜಯ್ ಅವರ ದೇಹದ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ರು.. ಇದರಿಂದ ಕತ್ತಲೆಯ ಬದುಕಿನಲ್ಲಿದ್ದ ಇಬ್ಬರು ಅಂಧ ಚೇತನರಿಗೆ ಬೆಳಕು ಸಿಕ್ಕಿದೆ.

sanchari
sanchari

ಅಲ್ಲದೆ ಅವರ ಕಿಡ್ನಿಯನ್ನು ಸಹ ಈಗಾಗಲೇ ಬೇರೊಬ್ಬರಿಗೆ ಕಸಿ ಮಾಡಲಾಗಿದೆ.. ಈ ಮೂಲಕ ಸಂಚಾರಿ ವಿಜಯ್ ಡಾ. ರಾಜ್​ಕುಮಾರ್, ಪರಸಂಗದ ಗೆಡ್ಡೆ ತಿಮ್ಮ ಲೋಕೇಶ್ ಅವರ ಹಾದಿಯಲ್ಲೇ ಸಾಗುವ ಮೂಲಕ, ಸಾವಿನ ನಂತರವೂ ನಮ್ಮ ಮಧ್ಯೆ ಬದುಕಿದ್ದಾರೆ. ಡಾ. ರಾಜ್​ಕುಮಾರ್ ನೇತ್ರದಾನ ಮಹಾದಾನ ಎಂದು ಸಾರಿದ್ದರು. ಅಲ್ಲದೆ ತಮ್ಮ ಕಣ್ಣುಗಳನ್ನು ದಾನ ಮಾಡಿ ನುಡಿದಂತೆ ನಡೆದಿದ್ರು.

ಅದೇ ರೀತಿ ನಟ ಲೋಕೇಶ್ ಅವರು ಕೂಡ ತಮ್ಮ ಸಂಪೂರ್ಣ ದೇಹವನ್ನು ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಈಗ ಅವರ ಮಾರ್ಗದಲ್ಲೇ ನಡೆದ ಸಂಚಾರಿ ವಿಜಯ್ ಅವರು, ಬದುಕಿದ್ದಾಗಲೂ ಸಮಾಜದ ಕಷ್ಟಕ್ಕೆ ಮರುಗುತ್ತಿದ್ದರು. ಸಾವಿನ ನಂತರವೂ ಅವರ ಅಂಗಾಂಗ ದಾನ ಮಾಡುವ ಮೂಲಕ, ಸಂಚಾರಿ ವಿಜಯ್ ಮಾನವೀಯತೆಯ ಮೂರ್ತಿಯಾಗಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.