ETV Bharat / sitara

'ಟಾರ್ಗೆಟ್'ನಲ್ಲಿ ಹಿರಿಯ ನಟ ರವಿಕಿರಣ್‌ ಸುಪುತ್ರ ಪ್ರೇಮ್‌ಕಿರಣ್ - ನಾಯಕಿ ಸಹರ್‌ಕೃಷ್ಣನ್

ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ. ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಹೇಗೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ, ಹೆಣ್ಣಿನ ಮೇಲೆ ಚಿಕ್ಕ ವಯಸಿನಲ್ಲಿ ನಡೆದ ಶೋಷಣೆ ಮುಂದೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ಸ್ಟೋರಿ, ಮರ್ಡರ್, ಮಿಸ್ಟರಿ ಕೂಡ 'ಟಾರ್ಗೆಟ್' ಚಿತ್ರದಲ್ಲಿದೆ..

ಟಾರ್ಗೆಟ್ ಚಿತ್ರದ ಮುಹೂರ್ತ ಸಮಾರಂಭ
ಟಾರ್ಗೆಟ್ ಚಿತ್ರದ ಮುಹೂರ್ತ ಸಮಾರಂಭ
author img

By

Published : Mar 12, 2022, 12:28 PM IST

ಸಿನಿಮಾ ಹಾಗೂ ಕಿರುತೆರೆಯಲ್ಲಿ ಗಮನ ಸೆಳೆದಿದ್ದ ರವಿಕಿರಣ್ ಸುಪುತ್ರ ಪ್ರೇಮ್ ಕಿರಣ್ ಅವರು 'ಟಾರ್ಗೆಟ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು.

ಸಿನಿಮಾದ ಮೊದಲ ದೃಶ್ಯಕ್ಕೆ ನಟ ರವಿಕಿರಣ್ ಆರಂಭ ಫಲಕ ತೋರಿದರು. ಹೆಸರಾಂತ ನಿರ್ದೇಶಕರಾದ ರಾಮ್ ಗೋಪಾಲ್ ವರ್ಮಾ ಹಾಗೂ ಪೂರಿ ಜಗನ್ನಾಥ್ ಅವರ ಜೊತೆ ಕೆಲಸ ಮಾಡಿರುವ ರವಿವರ್ಮ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ.

ಪ್ರೇಮ್‌ಕಿರಣ್, ವಿಜಯ ಕಾರ್ತೀಕ್ ಹಾಗೂ ಸಚಿನ್ ಪುರೋಹಿತ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು, ಸಾಕ್ಷಿರಾಜ್, ಮೇಘಶ್ರೀ ಹಾಗೂ ಸಹರ್ ಕೃಷ್ಣನ್ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೇಮ್‌ಕಿರಣ್
ಪ್ರೇಮ್‌ಕಿರಣ್

ಸಿನಿಮಾ ಕುರಿತು ಮಾಹಿತಿ ನೀಡಿದ ನಿರ್ದೇಶಕ ರವಿವರ್ಮ, ಈ ಹಿಂದೆ ನಾನು ಕೆಲ ವೆಬ್‌ಸಿರೀಸ್‌ಗಳನ್ನು ನಿರ್ದೇಶನ ಮಾಡಿದ್ದೇನೆ. ಮೊದಲ ಬಾರಿಗೆ ಸಿನಿಮಾ ನಿರ್ದೇಶಕನಾಗುತ್ತಿದ್ದೇನೆ. ಈಗಿನ ಜನರೇಷನ್ ಯಾವ ರೀತಿ ಸಾಗುತ್ತಿದೆ, ಹೆಣ್ಣುಮಕ್ಕಳ ಮೇಲೆ ಹೇಗೆ ನಿತ್ಯವೂ ದೌರ್ಜನ್ಯ ನಡೆಯುತ್ತಿದೆ, ಹೆಣ್ಣಿನ ಮೇಲೆ ಚಿಕ್ಕ ವಯಸಿನಲ್ಲಿ ನಡೆದ ಶೋಷಣೆ ಮುಂದೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಈ ಚಿತ್ರದ ಮೂಲಕ ಹೇಳಹೊರಟಿದ್ದೇನೆ. ಲವ್‌ಸ್ಟೋರಿ, ಮರ್ಡರ್, ಮಿಸ್ಟರಿ ಕೂಡ 'ಟಾರ್ಗೆಟ್' ಚಿತ್ರದಲ್ಲಿದೆ ಎಂದರು.

ನಟ ಪ್ರೇಮ್​ಕಿರಣ್ ಮಾತನಾಡಿ, ಈ ಚಿತ್ರದಲ್ಲಿ ಗೌತಮ್ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಎಲ್ಲರ ಮೇಲೂ ಚಿತ್ರದ ಕಥೆ ಸಾಗುತ್ತದೆ. ಇಲ್ಲಿ ಕಥೆಯೇ ಹೀರೋ, ಚಿಕ್ಕ ವಯಸ್ಸಿನಲ್ಲಿ ನಾವು ಹೇಗೆ ಬೆಳೆಯುತ್ತೇವೋ ಅದೇರೀತಿ ಮುಂದೆ ನಮ್ಮ ಮೈಂಡ್‌ಸೆಟ್ ಕೂಡ ಇರುತ್ತದೆ ಎಂದು ಚಿತ್ರದಲ್ಲಿ ತೋರಿಸಲಾಗುತ್ತಿದೆ. ಈಗಾಗಲೇ 'ಪರಿವರ್ತನ', 'ಪ್ರೀತ್ಸೋಣ ಮತ್ತೊಮ್ಮೆ' ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದು, ಇದು ನನ್ನ 3ನೇ ಚಿತ್ರ ಎಂದರು.

ಟಾರ್ಗೆಟ್ ಚಿತ್ರದ ಮುಹೂರ್ತ ಸಮಾರಂಭ
ಟಾರ್ಗೆಟ್ ಚಿತ್ರದ ಮುಹೂರ್ತ ಸಮಾರಂಭ

ಈ ಹಿಂದೆ ವಾಹಿನಿಯೊಂದರ ನಿರೂಪಕಿಯಾಗಿದ್ದ ಸಾಕ್ಷಿರಾಜ್ ಮಾತನಾಡಿ, ಹುಡುಗಿಯರ ಮೇಲೆ ಚಿಕ್ಕ ವಯಸ್ಸಿನಿಂದಲೂ ಒಂದಲ್ಲ ಒಂದು ರೀತಿ ಒತ್ತಡವಿದೆ. ಆಕೆ ಸದಾ ಶೋಷಣೆ ಎದುರಿಸುತ್ತಲೇ ಬಂದಿದ್ದಾಳೆ. ಆಕೆಯ ಮೇಲೆ ಯಾಕೆ ಈ ರೀತಿ ಆಗುತ್ತಿದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ ಎಂದರು.

ನಾಯಕಿ ಸಹರ್‌ಕೃಷ್ಣನ್ ಮಾತನಾಡಿ, ನನಗೂ ಕೂಡ ಇದು 4ನೇ ಚಿತ್ರ. ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ, ಮಾಡೆಲಿಂಗ್‌ನಿಂದ ಸಿನಿಮಾಗೆ ಬಂದಿದ್ದೇನೆ ಎಂದರು. ಮತ್ತೊಬ್ಬ ನಾಯಕಿ ಮೇಘಶ್ರೀ ಮಾತನಾಡಿ, ಈ ಹಿಂದೆ 'ಮುಗಿಲ್‌ಪೇಟೆ' ಸಿನಿಮಾದಲ್ಲಿ ಅಭಿನಯಿಸಿದ್ದೆ. ಅದರ ಮೂಲಕವೇ ಈ ಚಿತ್ರದ ಅವಕಾಶ ಸಿಕ್ಕಿದೆ. ಇದರಲ್ಲಿ ಲೀಡ್‌ರೋಲ್ ಮಾಡುತ್ತಿದ್ದೇನೆ ಎಂದರು.

ವಿಜಯ್ ಕಾರ್ತೀಕ್ ಸಿನಿಮಾದಲ್ಲಿ ನೆಗೆಟಿವ್ ರೋಲ್​ನಲ್ಲಿ ಕಾಣಿಸಿದ್ದಾರೆ. ನಿರ್ದೇಶಕ ರವಿವರ್ಮ ಬೆಂಗಳೂರು ಸುತ್ತಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲು ಸಜ್ಜಾಗಿದ್ದು, ಡಾ.ವಿ.ನಾಗೇಂದ್ರ ಪ್ರಸಾದ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ವಿನೋದ್‌ ಬಾಲ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮೋಹನ್‌ರೆಡ್ಡಿ, ಸುಬ್ಬಾರೆಡ್ಡಿ ಹಾಗೂ ಮಧು ಬಾಬು ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. 'ಟಾರ್ಗೆಟ್' ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.

ಇದನ್ನೂ ಓದಿ; ಕತ್ರಿನಾ ಕೈಫ್ ಅಭಿನಯದ 'ಮೆರ್ರಿ ಕ್ರಿಸ್‌ಮಸ್‌' ಚಿತ್ರೀಕರಣ ಪ್ರಾರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.