ETV Bharat / sitara

ಸುದೀಪ್ ದರ್ಶನ್ ಹೈಟ್ ನಷ್ಟೇ ಇರುವ ಸ್ಟಾರ್ ಕುಟುಂಬದ ಕುಡಿ ಈಗ ಸೂಪರ್‌ ಸ್ಟಾರ್ ! - ಸೂಪರ್ ಸ್ಟಾರ್

ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಿರಂಜನ್ , ಈಗ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Niranjan
Niranjan
author img

By

Published : Nov 23, 2020, 8:39 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಕುಟುಂಬದ ಮಕ್ಕಳು, ಮೊಮ್ಮಕ್ಕಳು ಸಿನಿಮಾ ರಂಗಕ್ಕೆ ಬರೋದು ಈಗ ಕಾಮನ್ ಆಗಿದೆ. ಈಗಾಗಲೇ ರಾಘವೇಂದ್ರ ರಾಜ್ ಕುಮಾರ್ , ರವಿಚಂದ್ರನ್ ಮಕ್ಕಳು, ಅಂಬರೀಶ್ ಮಗ, ಸೇರಿದಂತೆ ಸಾಕಷ್ಟು ನಟರ ಮಕ್ಕಳು ಚಿತ್ರರಂಗದ ಕಡೆ ಒಲವು ತೋರಿಸಿದ್ದಾರೆ. ಈಗ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪ್ರಿಯಾಂಕ ಉಪೇಂದ್ರ ಅಭಿನಯದ ಸೆಕೆಂಡ್ ಹಾಫ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಿರಂಜನ್ , ಈಗ ಪೂರ್ಣ ಪ್ರಮಾಣದ ನಾಯಕನಾಗಿ ಮಿಂಚಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ಎಂಬ ಹೆಸರಿನ ಸಿನಿಮಾ ಅನೌಸ್ಸ್ ಮಾಡಿರುವ ನಿರಂಜನ್ ಗೆ, ಸಿನಿಮಾಗೆ ಬರೋದಿಕ್ಕೆ ಯಾರು ಸ್ಫೂರ್ತಿ? ನಿರಂಜನ್ ಸಿನಿಮಾ ಎಂಟ್ರಿಗೆ ಏನಾಲ್ಲ ತಯಾರಿ ಮಾಡಿಕೊಂಡಿದ್ದಾರೆ? ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಮಗನಿಗೆ ಕೊಟ್ಟ ಸಲಹೆ ಏನು ಅನ್ನೋದರ ಬಗ್ಗೆ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.

ಸುದೀಪ್, ದರ್ಶನ್ ಬಳಿಕ‌ 6 ಅಡಿ ಹೈಟ್ ಇರುವ ನಿರಂಜನ್, ಕನ್ನಡ ಚಿತ್ರರಂಗದಲ್ಲಿ ಭವಿಷ್ಯದ ಸ್ಟಾರ್ ಹೀರೋ ಆಗುವ ಲಕ್ಷಣವಿದೆ. ಚಿಕ್ಕವಯಸ್ಸಿನಿಂದಲೂ ನಾನು ಸಿನಿಮಾ ಹೀರೋ, ಆಗಬೇಕು ಅಂದುಕೊಂಡಿದ್ದ ನಿರಂಜನ್, ಸೂಪರ್ ಸ್ಟಾರ್ ಸಿನಿಮಾ ಮೂಲಕ ಹೀರೋ ಆಗ್ತಾಬರಲಿದ್ದಾರೆ.

ಬಾಲ್ಯದಿಂದಲೇ, ಸಿಕ್ಕಾಪಟ್ಟೆ ಡ್ಯಾನ್ಸ್ ಮಾಡಿ ಗಮನ ಸೆಳೆಯುತ್ತಿದ್ದ, ನಿರಂಜನ್ , ತಂದೆ, ತಾಯಿ ಆಸೆಯಂತೆ ವಿದ್ಯಾಭ್ಯಾಸ ಮುಗಿಸಿ, ತಮ್ಮ ಆಸೆಯಂತೆ ಈಗ ನಾಯಕ ನಟನಾಗುತ್ತಿದ್ದಾನೆ.

ಸೂಪರ್ ಸ್ಟಾರ್ ಸಿನಿಮಾಕ್ಕಾಗಿ ನಿರಂಜನ್ ಮಾಡುವ ತಯಾರಿ ನೋಡಿದ್ರೆ, ಎಂಥವರು ಕೂಡ ಬೋಲ್ಡ್ ಆಗ್ತಾರೆ‌. ನಿರಂಜನ್ ಕಬ್ಬಿಣದಂತಹ ದೇಹ ತಯಾರು ಮಾಡಲು ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ವರ್ಷ. ಸೂಪರ್ ಸ್ಟಾರ್ ಚಿತ್ರಕ್ಕಾಗಿ ನಿರಂಜನ್ ಮಾಡಿದ ತಯಾರಿ ಅಂದ್ರೆ, ಲಾಕ್ ಡೌನ್ ಟೈಮಲ್ಲಿ ನಿರಂಜನ್ ಮನೆಯಲ್ಲೇ, ಸಿಕ್ಕಾಪಟ್ಟೇ ವರ್ಕ್ ಔಟ್ ಮಾಡಿ ಬಾಡಿಯನ್ನ ಹುರಿಗೊಳಿಸಿದ್ದಾರೆ.

ನಿರಂಜನ್ ತಮ್ಮ ಪಾತ್ರಕ್ಕೆ ತಯಾರಿ ಮಾಡೋದಿಕ್ಕೆ, ಕಾರಣ ಸೂಪರ್ ಸ್ಟಾರ್ ಚಿತ್ರದ, ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು, ಮೊದಲ ಚಿತ್ರ ಅಂದಮೇಲೆ ಸಾಕಷ್ಟು ನಿರೀಕ್ಷೆ ಇರುತ್ತೆ, ಈ ಕಾರಣಕ್ಕೆ ನಾನು ಸಾಕಷ್ಟು ಹಾರ್ಡ್ ವರ್ಕ್ ಮಾಡಿದ್ದೇನೆ ಅಂತಾರೆ‌.

ಇನ್ನು ನಿರಂಜನ್ ಗೆ ಅವ್ರ ಚಿಕ್ಕಪ ಉಪೇಂದ್ರ ಸಿನಿಮಾಗಳು ಸಾಕಷ್ಟು ಸ್ಫೂರ್ತಿಯಾಗಿದೆಯಂತೆ.ನಮ್ಮ ಚಿಕ್ಕಪ್ಪ ನಿರ್ದೇಶನ ಮಾಡಿರೋ ಎಲ್ಲಾ ಸಿನಿಮಾಗಳು ಇಷ್ಟ.ಅದರಲ್ಲಿ ,ಎ, ಸೂಪರ್ ಅಂತಹ ಸಿನಿಮಾಗಳು ನನಗೆ ಇಷ್ಟ ಅಂತಾರೆ.

ಇನ್ನು ಚಿಕ್ಕವಯಸ್ಸಿನಿಂದಲೇ ನಾನು ಹೀರೋ ಆಗ್ತಿನಿ ಅಂತಾ ತಂದೆ, ತಾಯಿಗೆ ಹೇಳಿದ್ರಂತೆ.ಈ ಕಾರಣಕ್ಕೆ, ಡ್ಯಾನ್ಸಿಂಗ್, ಮಾರ್ಷಲ್ ಆರ್ಟ್ ಹಾಗು ನಾಟಕಗಳಲ್ಲಿ ಅಭಿನಯಿಸಿ ಈಗ ಸಿನಿಮಾಗೆ ಎಂಟ್ರಿ ಕೊಡೋದಿಕ್ಕೆ ರೆಡಿಯಾಗಿದ್ದೀನಿ ಅಂತಾರೆ‌.ನನಗೆ ತಂದೆ, ತಾಯಿ, ಚಿಕ್ಕಪ್ಪ ಹಾಗು ಚಿಕ್ಕಮ್ಮಯಿಂದ ತುಂಬಾನೇ ಸಪೋರ್ಟ್ ಇದೆ ಅಂತಾರೆ‌.

ಸಿನಿಮಾ ಎಂಟ್ರಿಗೆ ಸ್ಟಾರ್ ಕುಟುಂಬದ ಕುಡಿ ಅಂತಾ ಬ್ರಾಂಡ್ ಹೊಂದಿರುವ, ನಿರಂಜನ್ ಗೆ, ತಮ್ಮ ಮೇಕ್ ಓವರ್ ಬಗ್ಗೆ ಹೆಚ್ಚು ಗಮನ ಕೊಡ್ತಾರಂತೆ.ಅದಕ್ಕೆ ಸ್ವಲ್ಪ ಜಾಸ್ತಿನೇ ಹಾರ್ಡ್ ವರ್ಕ್ ಮಾಡ್ತಿನಿ ಅಂತಾರೆ‌.

ಪುನೀತ್ ರಾಜ್‍ಕುಮಾರ್, ಯಶ್, ದರ್ಶನ್ ರಂತಹ ಸ್ಟಾರ್ ನಟರ ಸಿನಿಮಾಗಳನ್ನ, ನೋಡಿ ಕಲಿತ್ತಿರುವ ನಿರಂಜನ್ ಗೆ, ಎಲ್ಲಾ ಸ್ಟಾರ್ ನಟರ ಚಿತ್ರಗಳನ್ನ ನೋಡಿ ಕಲಿಯುತ್ತಾರಂತೆ ನಿರ‌ಂಜನ್.

ಈ ಸೂಪರ್ ಸ್ಟಾರ್ ಚಿತ್ರಕ್ಕಾಗಿ, ಸಿಕ್ಸ್ ಪ್ಯಾಕ್, ಉದ್ದವಾದ ಕೂದಲು ಬಿಟ್ಟಿರೋದು, ಈ ಚಿತ್ರದಲ್ಲಿ ಐದಾರು ಗೆಟಪ್ ಗಳಲ್ಲಿ ನಿರಂಜನ್ ಕಾಣಿಸಿಕೊಳ್ಳಲಿದ್ದಾರಂತೆ‌.

ಇನ್ನು ಅದ್ದೂರಿ 2 ಸಿನಿಮಾವನ್ನ, ಮೊದಲು ನಿರಂಜನ್ ಮಾಡ್ತಾರೆ ಎನ್ನಲಾಗಿತ್ತು.ಆದರೆ ಅದೇ ಟೈಟಲ್ ಬದಲಾಯಿಸಿ ಸೂಪರ್ ಸ್ಟಾರ್ ಅಂತಾ ಇಡಲಾಗಿದೆ ಅಂತಾರೆ.ಅದ್ದೂರಿ 2 ಸಿನಿಮಾವನ್ನ ಧ್ರುವ ಸಾರ್ ಮಾಡಿದ್ರೆ ಚೆನ್ನಾಗಿ ಇರುತ್ತೆ ಅನ್ನೋದು ನಿರಂಜನ್ ಮಾತು.

ಒಟ್ಟಾರೆ ಸ್ಟಾರ್ ಕುಟುಂಬದ ಕುಡಿ ಅಂತಾ ಬ್ರಾಂಡ್ ಹೊಂದಿರುವ ನಿರಂಜನ್, ಮುಂದಿನ ವರ್ಷ ಬಿಗ್ ಸ್ಕ್ರೀನ್ ನಲ್ಲಿ ಸೂಪರ್ ಸ್ಟಾರ್ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.