ಇಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ಮೊದಲಿಗೆ ಅಭಿ ಅವರ 'ಅಮರ್' ಚಿತ್ರಕ್ಕೆ ವಿಶ್ ಮಾಡಿದ್ದಾರೆ. ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿ. ಖಂಡಿತವಾಗಿಯೂ ಈ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದಿದ್ದಾರೆ. ನಾನು ವಿಶ್ ಮಾಡುತ್ತಿರುವುದು ಕೇವಲ ತೋರಿಕೆಗೆ ಎಂದು ಭಾವಿಸಿಕೊಂಡರೆ, ಅಂತಹವರಿಗೆ ಒಂದು ಮಾತು ಹೇಳಲು ಇಚ್ಛಿಸುತ್ತೇನೆ, ನಾನು ಎಲ್ಲದಕ್ಕಿಂತಲೂ ಹೆಚ್ಚು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದಿದ್ದಾರೆ. ಇನ್ನು ಸುಮಲತಾ ಅವರ ಗೆಲುವಿಗೆ ಶುಭ ಕೋರಿರುವ ನಿಖಿಲ್, ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಜತೆ ಕೈ ಜೋಡಿಸುತ್ತೇನೆ ಎಂದಿದ್ದಾರೆ.
ಮಂಡ್ಯ ಚುನಾವಣೆ ಸೋಲಿನ ಸಂಪೂರ್ಣ ಹೊಣೆ ತಾನೇ ವಹಿಸಿಕೊಳ್ಳುತ್ತೇನೆ ಎಂದಿರುವ ನಿಖಿಲ್, ಎಲ್ಲದಕ್ಕೂ ನಾನೇ ಜವಾಬ್ದಾರಿ, ನನ್ನನ್ನು ಮಾತ್ರ ದೂರಿ. ಬದಲಾಗಿ ನನ್ನ ಪಕ್ಷದ MLA, MLC ಅಥವಾ ಕಾರ್ಯಕರ್ತರನ್ನು ಹಾಗೂ ದೇವೇಗೌಡರನ್ನು ದೂರಬೇಡಿ ಎಂದಿದ್ದಾರೆ.
- " class="align-text-top noRightClick twitterSection" data="
">
ನಿಖಿಲ್ ಕುಮಾರ ಸ್ವಾಮಿ ಇನ್ಸ್ಟಾಗ್ರಾಂ ಪೋಸ್ಟ್ ವಿವರಣೆ ಇಲ್ಲಿದೆ ನೋಡಿ...
'ನಾಳೆ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಮೊದಲ ಸಿನಿಮಾ 'ಅಮರ್' ಭಾರಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸುತ್ತಿದ್ದೇನೆ. ದಯವಿಟ್ಟು ಚಿತ್ರಮಂದಿರಗಳಿಗೆ ಹೋಗಿ ಆ ಸಿನಿಮಾ ನೋಡಿ. ಇದು ಕೇವಲ ತೋರ್ಪಡಿಕೆಗಾಗಿ ವಿಶ್ ಮಾಡುತ್ತಿದ್ದೇನೆ ಎಂದು ತಿಳಿದುಕೊಳ್ಳುವವರಿಗೆ ನಾನು ಹೇಳುವುದೇನೆಂದರೆ, 'ನಾನು ಮಾನವೀಯ ಸಂಬಂಧಗಳಿಗೆ ಬೆಲೆ ಕೊಡುತ್ತೇನೆ. ಇದನ್ನೇ ನಾನು ಚುನಾವಣಾ ಪ್ರಚಾರದ ಸಮಯದಲ್ಲಿಯೂ ಒತ್ತಿ ಹೇಳುತ್ತಿದ್ದೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದಕ್ಕೆ ಶುಭ ಕೋರುತ್ತೇನೆ.
ಸೋಲಿನ ಹೊಣೆ ನಾನೇ ಹೊರುತ್ತೇನೆ :
'ಮಂಡ್ಯದ ಅಭಿವೃದ್ದಿಗಾಗಿ ನಾನು ಯಾರ ಜೊತೆಗಾದರೂ ಕೈ ಜೋಡಿಸಲು ಸಿದ್ಧ. ಈ ಚುನಾವಣೆಯ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ಫಲಿತಾಂಶದ ಬಗ್ಗೆ ಟೀಕಿಸುವುದಿದ್ದರೆ ನನ್ನನ್ನೇ ಟೀಕಿಸಿ. ಮಂಡ್ಯದ ಸಚಿವರನ್ನಾಗಲಿ, ಶಾಸಕರನ್ನಾಗಲಿ, ಕ್ಷೇತ್ರದ ಕಾರ್ಯಕರ್ತರನ್ನಾಗಲಿ, ನನ್ನ ತಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ, ನನ್ನ ಅಜ್ಜ ದೇವೇಗೌಡರನ್ನು ಜರಿಯುವುದು ಬೇಡ.'' ಎಂದಿದ್ದಾರೆ.
ಮಂಡ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 8,671 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಆ ಕೆಲಸಗಳು ಸರಿಯಾಗಿ ನಡೆಯುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಏಕೆಂದರೆ, ಅದು ನಮ್ಮ ಕರ್ತವ್ಯ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ 5 ಲಕ್ಷದ 76 ಸಾವಿರ 400 ಜನರಿಗೂ ಧನ್ಯವಾದ ಹೇಳುತ್ತೇನೆ. ಮುಂದಿನ ದಿನದಲ್ಲಿ ಇನ್ನುಳಿದ ಮತದಾರರ ನಂಬಿಕೆ ಗಳಿಸಲು ಪ್ರಯತ್ನ ಮಾಡುತ್ತೇನೆ. ರಾಜ್ಯದ ತುಂಬ ಪ್ರವಾಸ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಾನು ಈ ಪಯಣದಲ್ಲಿ ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ನಾನು ಮೊದಲ ದಿನದಿಂದ ಪಾಸಿಟಿವ್ ವ್ಯಕ್ತಿಯಾಗಿದ್ದೆ. ಈಗಲೂ ನಿಮಗೆ ನಿಖಿಲ್ ಕುಮಾರಸ್ವಾಮಿ ಒಬ್ಬ ಸೀರಿಯಸ್ ರಾಜಕಾರಣಿಯೇ? ಎನ್ನುವ ಪ್ರಶ್ನೆ ಕಾಡುತ್ತಿದ್ದರೆ, ನಾನು ಇಡೀ ರಾಜ್ಯದ ತುಂಬ ಪ್ರವಾಸ ಮಾಡಿ, ಅಲ್ಲಿನ ಸಮಸ್ಯೆಗಳನ್ನು ತಿಳಿಯುವುದರ ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬುತ್ತೇನೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಸುದ್ದಿಗೋಷ್ಠಿ ಕರೆಯುತ್ತೇನೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದ ಎಂದಿದ್ದಾರೆ.