ETV Bharat / sitara

ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ.. ನಟಿ ಮೃಣಾಲ್ ಠಾಕೂರ್​ಗೂ ವಕ್ಕರಿಸಿದ ಮಹಾಮಾರಿ - Jersey actress Mrunal Thakur

Actor Mrunal Thakur tests positive for Covid: ಬಾಲಿವುಡ್​ ಮಂದಿಗೆ ಕೊರೊನಾ ಬಿಟ್ಟು ಬಿಡದಂತೆ ಕಾಡುತ್ತಿದ್ದು, ಇದೀಗ ನಟಿ ಮೃಣಾಲ್ ಠಾಕೂರ್​ಗೂ ಸೋಂಕು ದೃಢಪಟ್ಟಿದೆ.

Mrunal Thakur Tests Covid
Mrunal Thakur Tests Covid
author img

By

Published : Jan 1, 2022, 3:00 PM IST

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೊನಾ ಆರ್ಭಟ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿನ ಪ್ರಕರಣಗಳಲ್ಲಿ ಏರಿಕೆ ಕಂಡು ಬರುತ್ತಿದೆ. ಇಂದು ಬೆಳಗ್ಗೆಯಷ್ಟೇ 10 ಸಚಿವರು ಸೇರಿದಂತೆ 20ಕ್ಕೂ ಅಧಿಕ ಶಾಸಕರಿಗೆ ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ನಟಿ ಮೃಣಾಲ್​ ಠಾಕೂರ್​ಗೂ ಕೋವಿಡ್ ಸೋಂಕು ತಗುಲಿರುವುದು ಖಚಿತಗೊಂಡಿದೆ.

ಇದಕ್ಕೆ ಸಂಬಂಧಿಸಿದಂತೆ ನಟಿ ಮೃಣಾಲ್​​ ಠಾಕೂರ್​​​ ಇನ್​​​ಸ್ಟಾಗ್ರಾಂನಲ್ಲಿ ಖುದ್ದಾಗಿ ಬರೆದುಕೊಂಡಿದ್ದು, ತನಗೆ ಕೋವಿಡ್​ನ ಸೌಮ್ಯ ಪ್ರಮಾಣದ ಗುಣಲಕ್ಷಣ ಕಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಪ್ರತ್ಯೇಕವಾಗಿ ಉಳಿದುಕೊಂಡಿದ್ದೇನೆ ಎಂದಿರುವ ನಟಿ, ವೈದ್ಯರು ನೀಡಿರುವ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡ್ತಿದ್ದು, ನನ್ನ ಸಂಪರ್ಕಕ್ಕೆ ಬಂದಿರುವವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

Mrunal Thakur Tests Covid
ನಟಿ ಮೃಣಾಲ್ ಠಾಕೂರ್​ಗೂ ವಕ್ಕರಿಸಿದ ಮಹಾಮಾರಿ

ಮುಂಬೈನಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಈಗಾಗಲೇ ಬಾಲಿವುಡ್​ನ ಅರ್ಜುನ್ ಕಪೂರ್, ಕರೀನಾ ಕಪೂರ್​, ರಿಯಾ ಕಪೂರ್​ ಸೇರಿದಂತೆ ಅನೇಕರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಶಾಹಿದ್ ಕಪೂರ್​ ಜೊತೆಯಾಗಿ ನಟಿ ಮೃಣಾಲ್​ ಠಾಕೂರ್ ಜರ್ಸಿ ಚಿತ್ರದಲ್ಲಿ ನಟಿಸಿದ್ದು, ಕೊರೊನಾ ಹಾಗೂ ಒಮಿಕ್ರಾನ್​​ನಿಂದಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ​

ಇದನ್ನೂ ಓದಿರಿ: ಬಾಲಿವುಡ್​​ನಲ್ಲಿ ಕೊರೊನಾ ಸ್ಫೋಟ.. ಅರ್ಜುನ್​ ಕಪೂರ್​, ರಿಯಾ, ಅನ್ಶುಲಾಗೆ ಸೋಂಕು

ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 7 ಸಾವಿರಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣ ಕಾಣಿಸಿಕೊಂಡಿದ್ದು, ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 22,775 ಕ್ಕೂ ಅಧಿಕವಾಗಿದೆ. ಇದರ ಮಧ್ಯೆ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಕೂಡ 450ರ ಗಡಿ ದಾಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.