ETV Bharat / sitara

ಶಾಲಾ-ಕಾಲೇಜು ಪ್ರವೇಶ​ ಶುಲ್ಕದಲ್ಲಿ ರಿಯಾಯಿತಿ ಕೊಡಿಸಿ: ಸಿಎಂಗೆ ಪತ್ರ ಬರೆದ ಕಿರಣ್ ರಾಜ್

ಶಾಲಾ-ಕಾಲೇಜಿನ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ನಟ ಕಿರಣ್ ರಾಜ್, ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದಾರೆ.

ನಟ ಕಿರಣ್ ರಾಜ್
author img

By

Published : May 22, 2021, 12:44 PM IST

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕನ್ನಡತಿಯಲ್ಲಿ ನಾಯಕ ಹರ್ಷನಾಗಿ ಅಭಿನಯಿಸಿತ್ತಿರುವ ಕಿರಣ್ ರಾಜ್, ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸಂಕಷ್ಟದಲ್ಲಿರುವವರ ಸಹಾಯಕ್ಕಾಗಿಯೇ ಕಿರಣ್ ರಾಜ್ ಫೌಂಡೇಶನ್ ಆರಂಭಿಸಿದ್ದು, ಅದರ ಮೂಲಕ ಕಷ್ಟದಲ್ಲಿರುವ ಜನರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.

Kiran raj
ಸಿಎಂಗೆ ಪತ್ರ ಬರೆದ ಕಿರಣ್ ರಾಜ್

ಇದೀಗ ಒಂದು ಹೊಸ ಹೆಜ್ಜೆ ಮುಂದೆ ಇಟ್ಟಿರುವ ಕಿರಣ್ ರಾಜ್ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಶಾಲಾ-ಕಾಲೇಜಿನ ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಕಿರಣ್ ರಾಜ್ ಫೌಂಡೇಶನ್ ಹಾಗೂ ಪೋಷಕರ ಪರವಾಗಿ ವಿನಂತಿಸಿದ್ದಾರೆ. ಜೊತೆಗೆ ತಮ್ಮ ಇನ್​ಸ್ಟಾ ಗ್ರಾಂ​ ಖಾತೆಯಲ್ಲಿ ಈ ಪತ್ರದ ಫೊಟೋವನ್ನು ಹಂಚಿಕೊಂಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳೇ/ ಶಿಕ್ಷಣ ಸಚಿವರೇ, ನನ್ನ ಹೆಸರು ಕಿರಣ್ ರಾಜ್. ಕನ್ನಡ ಹಾಗೂ ಹಿಂದಿ ಕಿರುತೆರೆ ಮತ್ತು ಸಿನಿಮಾ ನಟ. ಜಗತ್ತಿನೆಲ್ಲೆಡೆ ಕೋವಿಡ್ 19 ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾಮಾನ್ಯ ಜನರ ಬದುಕು ಅಲ್ಲೋಲಕಲ್ಲೋಲವಾಗಿದೆ. ಇನ್ನು ಮಕ್ಕಳು ಶಾಲಾ-ಕಾಲೇಜು ಇಲ್ಲದೇ ಆನ್​ಲೈನ್ ಶಿಕ್ಷಣಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಶಾಲಾ-ಕಾಲೇಜು ಶುಲ್ಕ ಸ್ವಲ್ಪವೂ ಕುಗ್ಗಿಲ್ಲ. ದಯವಿಟ್ಟು ಶಾಲಾ ಕಾಲೇಜು ಶುಲ್ಕದಲ್ಲಿ ರಿಯಾಯಿತಿ ಕೊಡಿಸಬೇಕೆಂದು ಈ ಮೂಲಕ ನಿಮ್ಮಲ್ಲಿ ಎಲ್ಲಾ ಪೋಷಕರ ಪರವಾಗಿ ವಿನಂತಿಸಿಕೊಳ್ಳುತ್ತೇವೆ. ನಮ್ಮ ಈ ವಿನಂತಿಯನ್ನು ನೀವು ಪರಿಗಣಿಸಿ, ಪರಿಶೀಲಿಸಿ, ಜನರ ಬೆನ್ನೆಲುಬಾಗಿ ನಿಲ್ಲುವಿರೆಂಬ ವಿಶ್ವಾಸವಿದೆ ಎಂದು ಬರೆದುಕೊಂಡಿದ್ದಾರೆ.

ಓದಿ: ಕರ್ನಾಟಕದಲ್ಲಿ ಸಿಕ್ಕ ಪ್ರೀತಿ, ಗೌರವ, ಅವಕಾಶ ಬೇರೆಲ್ಲೂ ಸಿಕ್ಕಿಲ್ಲ : ಅಕುಲ್ ಬಾಲಾಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.