ETV Bharat / sitara

ಈ ನಿರ್ದೇಶಕನಿಗೆ ನೀನು ಸ್ಟಾರ್​ ಡೈರಕ್ಟರ್​​ ಆಗುವೆ ಎಂದಿದ್ದರಂತೆ ಜಗ್ಗೇಶ್..​ ನುಡಿದ ಭವಿಷ್ಯ ನಿಜವಾಯ್ತಾ? - ಸಂತೋಷ್ ಆನಂದ್ ರಾಮ್

ಅಂದು‌ ಸಂತೋಷ್ ಆನಂದ್ ರಾಮ್ ಟ್ಯಾಲೆಂಟ್‌ ನೋಡಿ, ಜಗ್ಗೇಶ್ ನೀನು ಮುಂದೆ ಒಂದು ದಿನ ಸ್ಟಾರ್ ಡೈರೆಕ್ಟರ್ ಆಗುತ್ತೀಯಾ ಅಂತಾ ಹೇಳಿದ್ರಂತೆ. ಅದರಂತೆ ಇಂದು ಸಂತೋಷ್ ಆನಂದ್ ರಾಮ್, ಸದ್ಯ ಜಗ್ಗೇಶ್ ಅವ್ರಿಗೆ ಸಿನಿಮಾ‌ ಮಾಡುವ ಮಟ್ಟಿಗೆ ಬೆಳೆದಿದ್ದಾರೆ..

ನವರಸನಾಯಕ ಜಗ್ಗೇಶ್
ನವರಸನಾಯಕ ಜಗ್ಗೇಶ್
author img

By

Published : Sep 28, 2021, 8:03 PM IST

Updated : Sep 28, 2021, 8:45 PM IST

ಕನ್ನಡ ಚಿತ್ರರಂಗದಲ್ಲಿ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್, ಶಂಕರ್ ನಾಗ್, ಡಾ ಅಂಬರೀಶ್, ರವಿಚಂದ್ರನ್ ರಂತಹ ಮೇರು ನಟರ ಜೊತೆ ಒಡನಾಟ ಹೊಂದಿದ್ದ ನಟ ನವರಸ ನಾಯಕ ಜಗ್ಗೇಶ್.

ಅಣ್ಣಾವ್ರಿಂದ ಪ್ರಭಾವಿತರಾಗಿ ರಾಘವೇಂದ್ರ ಸ್ವಾಮಿಗಳ ಮಹಾನ್ ಭಕ್ತನಾಗಿರೋ ಜಗ್ಗೇಶ್, ಕೆಲವೊಮ್ಮೆ ಹೇಳುವ ಮಾತುಗಳು ಸತ್ಯ ಆಗಿರುವ ಘಟನೆಗಳು ಚಿತ್ರರಂಗದಲ್ಲಿ ನಡೆದಿವೆ. ಸದ್ಯ ಮಗ ಗುರುರಾಜ್ ಜಗ್ಗೇಶ್ ಸಿನಿಮಾ ಪತ್ರಿಕಾಗೋಷ್ಠಿಗೆ ಬಂದಿದ್ದ ಜಗ್ಗೇಶ್, ತಾವು ಈ ಹಿಂದೆ ಹೇಳಿದ ಭವಿಷ್ಯ ನಿಜ ಆಗಿದೆ ಎಂದಿದ್ದಾರೆ.

ಈ ನಿರ್ದೇಶಕನಿಗೆ ನೀನು ಸ್ಟಾರ್​ ಡೈರಕ್ಟರ್​​ ಆಗುವೆ ಎಂದಿದ್ದರಂತೆ ಜಗ್ಗೇಶ್..

ಈ ಮಾತಿಗೆ ಸಾಕ್ಷಿಯಾಗಿ ಜಗ್ಗೇಶ್ ಅಭಿನಯದ ಅಗ್ರಜ ಸಿನಿಮಾದಲ್ಲಿ ಡೈರೆಕ್ಷನ್ ಡಿಪಾರ್ಟ್‌ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಹುಡುಗನನ್ನ ಅಂದು, ಮಾಧ್ಯಮದ ಮುಂದೆ ನಿಲ್ಲಿಸಿ ಈ ಹುಡುಗ, ಚಿತ್ರರಂಗದಲ್ಲಿ ಮುಂದೆ ಒಂದು ದಿನ ಸ್ಟಾರ್ ಡೈರೆಕ್ಟರ್ ಅಂತಾ ಭವಿಷ್ಯ ನುಡಿದಿದ್ರಂತೆ. ಅದರಂತೆ ಅಂದು ಜಗ್ಗೇಶ್ ಹೇಳಿದ ಹುಡುಗ ಇಂದು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕನಾಗಿ‌ ಸಕ್ಸಸ್ ಕಂಡಿದ್ದಾರೆ.

ಅವರೇ ಸ್ಯಾಂಡಲ್​ವುಡ್​​ ನಲ್ಲಿ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ, ರಾಜಕುಮಾರ ಹಾಗೂ ಯುವರತ್ನ ಅಂತಹ ಹಿಟ್ ಚಿತ್ರಗಳನ್ನ ಕೊಟ್ಟಿರುವ ನಿರ್ದೇಶಕ ಸಂತೋಷ್ ಆನಂದ್ ರಾಮ್. ಸಂತೋಷ್ ಆನಂದ್ ರಾಮ್ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾಗಿಂತ ಮುಂಚೆ ನವರಸ ನಾಯಕ ಜಗ್ಗೇಶ್ ನಟನೆಯ ಅಗ್ರಜ ಚಿತ್ರದಲ್ಲಿ ‌ಡೈರೆಕ್ಷನ್ ಡಿಪಾರ್ಟ್ ಮೆಂಟ್​​ನಲ್ಲಿ ಕೆಲಸ ಮಾಡಿದ್ದರು.

ಅಂದು‌ ಸಂತೋಷ್ ಆನಂದ್ ರಾಮ್ ಟ್ಯಾಲೆಂಟ್‌ ನೋಡಿ, ಜಗ್ಗೇಶ್ ನೀನು ಮುಂದೆ ಒಂದು ದಿನ ಸ್ಟಾರ್ ಡೈರೆಕ್ಟರ್ ಆಗುತ್ತೀಯಾ ಅಂತಾ ಹೇಳಿದ್ರಂತೆ. ಅದರಂತೆ ಇಂದು ಸಂತೋಷ್ ಆನಂದ್ ರಾಮ್, ಸದ್ಯ ಜಗ್ಗೇಶ್ ಅವ್ರಿಗೆ ಸಿನಿಮಾ‌ ಮಾಡುವ ಮಟ್ಟಿಗೆ ಬೆಳೆದಿದ್ದಾರೆ.

ಈಗಾಗಲೇ ಜಗ್ಗೇಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್‌ನಲ್ಲಿ ರಾಘವೇಂದ್ರ ಸ್ಟೋರ್ಸ್ ಎಂಬ ಚಿತ್ರ ಅನೌನ್ಸ್ ಆಗಿದೆ. ಈ ಚಿತ್ರವನ್ನು ಹೊಂಬಾಳೆ ಫಿಲ್ಸ್ಮ್ ಸಂಸ್ಥೆ ಅಡಿ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ.

ಜಗ್ಗೇಶ್, ಸಂತೋಷ್ ಆನಂದ್ ರಾಮ್ ಜುಗಲ್ ಬಂದಿ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಸಹಜವಾಗಿ ದೊಡ್ಡ ನಿರೀಕ್ಷೆ ಮೂಡಿಸಿದೆ. ಹೀಗಾಗಿ, ಜಗ್ಗೇಶ್ ಹೇಳಿದ ಭವಿಷ್ಯ ನಿರ್ದೇಶಕ ಸಂತೋಷ್ ಆನಂದ್ ರಾಮ್ ವಿಚಾರದಲ್ಲಿ ನಿಜವಾಗಿದೆ.

Last Updated : Sep 28, 2021, 8:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.