ETV Bharat / sitara

ದುಬಾರಿ ಕಾರು ಬಿಟ್ಟು ಟ್ರ್ಯಾಕ್ಟರ್​​​​ ಏರಿದ ಗಜ: ವಿಡಿಯೋ ವೈರಲ್​​​ - ಚಾಲೆಂಜಿಂಗ್ ಸ್ಟಾರ್ ದರ್ಶನ್

ಲಾಕ್​ಡೌನ್​ನಿಂದಾಗಿ ಯಾವುದೇ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿರುವ ನಟ ದರ್ಶನ್,​ ಹೊಸ ಟ್ರ್ಯಾಕ್ಟರ್​ ಖರೀದಿಸಿದ್ದಾರೆ. ಅದನ್ನು ಸ್ವತಃ ಅವರೇ ಡ್ರೈವ್​ ಮಾಡಿರುವ ವಿಡಿಯೋ ವೈರಲ್​ ಆಗಿದೆ.

Actor Dharshan has drive a tractor
ದುಬಾರಿ ಕಾರು ಬಿಟ್ಟು ಟ್ರಾಕ್ಟರ್​ ಏರಿದ ಗಜ
author img

By

Published : Jul 15, 2020, 10:23 AM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ದುಬಾರಿ ಕಾರುಗಳಿಗೇನು ಕೊರತೆ ಇಲ್ಲ. ಮನೆಯಲ್ಲಿ ಐಷಾರಾಮಿ ಕಾರುಗಳಿದ್ದರೂ ದಚ್ಚು ಕಾರು ಬಿಟ್ಟು ಟ್ರ್ಯಾಕ್ಟರ್ ಏರಿದ್ದಾರೆ.

ಹೊಸ ಟ್ರ್ಯಾಕ್ಟರ್​ ಚಲಾಯಿಸುತ್ತಿರುವ ನಟ ದರ್ಶನ್

ಕೊರೊನಾ ಎಫೆಕ್ಟ್​​​ನಿಂದ ಶೂಟಿಂಗ್ ಇಲ್ಲದೇ ಮೈಸೂರು ಫಾರ್ಮ್ ಹೌಸ್​​​ನಲ್ಲಿರುವ ದರ್ಶನ್,​ ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ದರ್ಶನ್ ಹೊಸ ಟ್ರ್ಯಾಕ್ಟರ್ ಖರೀದಿ ಮಾಡಿದ್ದು, ಸ್ವತಃ ಅವರೇ ಶೋ ರೂಂಗೆ ಹೋಗಿ ಟ್ರ್ಯಾಕ್ಟರ್ ಡೆಲವರಿ ಪಡೆದಿದ್ದಾರೆ. ಅಲ್ಲದೇ ಮೈಸೂರು ಬಳಿಯ ಕೆಂಪಯ್ಯನ ಹುಂಡಿಯಿಂದ ತಮ್ಮ ಫಾರ್ಮ್​​​ಹೌಸ್​ಗೆ ಟ್ರ್ಯಾಕ್ಟರ್ ಡ್ರೈವಿಂಗ್ ಮಾಡಿಕೊಂಡು ಹೋಗಿದ್ದಾರೆ. ಸಿಕ್ಕಾಪಟ್ಟೆ ಕಾರುಗಳ ಕ್ರೇಜ್ ಹೊಂದಿರುವ ಗಜ ಟ್ರ್ಯಾಕ್ಟರ್ ಡ್ರೈವಿಂಗ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.

ತೆರೆಮೇಲೆ ನೋಡಿದ್ದ ಡಿ ಬಾಸ್ ಅನ್ನು ಕಣ್ಣೆದುರೆ ನೋಡಿದ ಅಭಿಮಾನಿಗಳು ಫುಲ್​​​ಖುಷ್​ ಆಗಿದ್ದು, ಗಜ ಟ್ರ್ಯಾಕ್ಟರ್ ಡ್ರೈವ್ ಮಾಡಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.