ETV Bharat / sitara

'ಧನುಷ್-ಐಶ್ವರ್ಯಾ ನಡುವೆ ವಿಚ್ಛೇದನವಾಗಿಲ್ಲ.. ಇದು ಕುಟುಂಬ ಕಲಹವಷ್ಟೇ': ಕಸ್ತೂರಿರಾಜ ಸ್ಪಷ್ಟನೆ - ನಟ ಧನುಷ್ ಐಶ್ವರ್ಯಾ ವಿಚ್ಛೇದನ

ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ವಿಚ್ಛೇದನದ ಮಾತುಕತೆ ಇಲ್ಲ, ಅವರು ಕುಟುಂಬ ಕಲಹಗಳನ್ನು ಹೊಂದಿದ್ದಾರೆ, ಇದು ವಿವಾಹಿತರಲ್ಲಿ ಸಾಮಾನ್ಯ ಎಂದು ನಟ ಧನುಷ್ ಅವರ ತಂದೆ ಕಸ್ತೂರಿರಾಜ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ..

Actor Dhanush family
ನಟ ಧನುಷ್ ಕುಟುಂಬ
author img

By

Published : Jan 20, 2022, 12:47 PM IST

Updated : Jan 20, 2022, 12:54 PM IST

ಸ್ನೇಹಿತರಾಗಿ, ದಂಪತಿ, ಪೋಷಕರಾಗಿ ಮತ್ತು ಪರಸ್ಪರ ಹಿತೈಷಿಗಳಾಗಿ 18 ವರ್ಷಗಳ ಕಾಲ ನಾನು ಮತ್ತು ಪತ್ನಿ ಐಶ್ವರ್ಯ ಜೀವನ ಮಾಡಿದೆವು. ಇಂದು ನಾವು ನಮ್ಮ ಮಾರ್ಗಗಳು ಪ್ರತ್ಯೇಕಗೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ನಟ ಧನುಷ್ ಇದೇ ಸೋಮವಾರದಂದು ಶಾಕಿಂಗ್​ ಸುದ್ದಿ ನೀಡಿದ್ದರು.

ಆದ್ರೆ ನಟ ಧನುಷ್ ಅವರ ತಂದೆ ಕಸ್ತೂರಿರಾಜ ಸಂದರ್ಶನವೊಂದರಲ್ಲಿ ಧನುಷ್ ಮತ್ತು ಐಶ್ವರ್ಯಾ ನಡುವೆ ಯಾವುದೇ ವಿಚ್ಛೇದನದ ಮಾತುಕತೆ ಇಲ್ಲ ಎಂದು ತಿಳಿಸಿದ್ದಾರೆ. ಅವರು ಕುಟುಂಬ ಕಲಹಗಳನ್ನು( ಮನಸ್ಥಾಪಗಳನ್ನು) ಹೊಂದಿದ್ದಾರೆ, ಇದು ವಿವಾಹಿತರಲ್ಲಿ ಸಾಮಾನ್ಯ. ಸದ್ಯ ಅವರು ಚೆನ್ನೈನಲ್ಲಿ ಇಲ್ಲ, ಹೈದರಾಬಾದ್‌ನಲ್ಲಿದ್ದಾರೆ. ಅವರಿಗೆ ದೂರವಾಣಿ ಕರೆ ಮಾಡಿ ಸಲಹೆಯನ್ನೂ ನೀಡಿದ್ದೇನೆ ಎಂದು ಕಸ್ತೂರಿರಾಜ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: 18 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದ ಧನುಷ್!​

ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಮಗಳು ಐಶ್ವರ್ಯ ಅವರನ್ನು 18 ನವೆಂಬರ್ 2004 ರಂದು ವಿವಾಹವಾಗಿದ್ದರು. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನುಷ್ ಮತ್ತು ಐಶ್ವರ್ಯ ಅವರು ತಮ್ಮ ಪ್ರತ್ಯೇಕತೆ ಬಗ್ಗೆ ಸೋಮವಾರದಂದು ಟ್ವಿಟರ್​ನಲ್ಲಿ ತಿಳಿಸಿದ್ದರು.

Last Updated : Jan 20, 2022, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.