ETV Bharat / sitara

'ಹೆಡ್ ಬುಷ್' ನಿರ್ಮಾಣ ಜವಾಬ್ದಾರಿ ಹೊತ್ತ ಡಾಲಿ ಧನಂಜಯ್ - ಹೆಡ್ ಬುಷ್ ಚಿತ್ರ ನಿರ್ಮಾಣ ಮಾಡಲಿದ್ದಾರೆ ಡಾಲಿ ಧನಂಜಯ್​

'ಹೆಡ್ ಬುಷ್​' ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ಅಶು ಬೆದ್ರ ನಿರ್ಮಾಪಕರಾಗಿದ್ದರು. ಆದರೆ, ಈಗ ಅವರು ಚಿತ್ರ ತಂಡದಿಂದ ಹೊರಬಂದಿದ್ದಾರೆ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಧನಂಜಯ್ ವಹಿಸಿಕೊಂಡಿದ್ದಾರೆ.

actor-dali-dhananjay-produce-head-bush-movie
'ಹೆಡ್ ಬುಷ್' ನಿರ್ಮಾಣ ಜವಾಬ್ದಾರಿ ಹೊತ್ತ ಡಾಲಿ ಧನಂಜಯ್
author img

By

Published : Aug 4, 2021, 3:16 AM IST

'ಹೆಡ್ ಬುಷ್​' ಚಿತ್ರದಲ್ಲಿ ಡಾಲಿ ಧನಂಜಯ್, ಬೆಂಗಳೂರಿನ ಮಾಜಿ ಭೂಗತದೊರೆ ಎಂ.ಪಿ. ಜಯರಾಜ್ ಅವರ ಪಾತ್ರ ಮಾಡುತ್ತಿರುವ ವಿಷಯ ಎಲ್ಲರಿಗೂ ಗೊತ್ತು. ಈಗ ಆ ಚಿತ್ರಕ್ಕೆ ಧನಂಜಯ್ ಕೇವಲ ಹೀರೋ ಅಷ್ಟೇ ಅಲ್ಲ, ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.

ಎಲ್ಲ ಅಂದುಕೊಂಡಂತೆ ಆಗಿದ್ದರೆ, ಹೆಡ್ ಬುಷ್ ಚಿತ್ರವು ಇಷ್ಟರಲ್ಲಿ ಮುಗಿದಿರಬೇಕಿತ್ತು. ಕಳೆದ ವರ್ಷದ ಆರಂಭದಲ್ಲೇ ಈ ಚಿತ್ರದ ಘೋಷಣೆಯಾಗಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರ ಶುರುವಾಗುವುದು ಒಂದೂವರೆ ವರ್ಷ ತಡವಾಗಿದೆ. ಚಿತ್ರ ಘೋಷಣೆಯಾದ ಸಂದರ್ಭದಲ್ಲಿ ಅಶು ಬೆದ್ರ ನಿರ್ಮಾಪಕರಾಗಿದ್ದರು. ಆದರೆ, ಈಗ ಅವರು ಚಿತ್ರ ತಂಡದಿಂದ ಹೊರಬಂದಿದ್ದಾರೆ. ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಧನಂಜಯ್ ವಹಿಸಿಕೊಂಡಿದ್ದು, ಧನಂಜಯ್ ಮತ್ತು ಸೋಮಣ್ಣ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

'ಹೆಡ್ ಬುಷ್' ಚಿತ್ರೀಕರಣ ಆಗಸ್ಟ್ 09ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 23ಕ್ಕೆ ಚಿತ್ರದ ಫಸ್ಟ್​ಲುಕ್ ಬಿಡುಗಡೆಯಾಗಲಿದೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕನ್ನಡವಷ್ಟೇ ಅಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಇಂಗ್ಲೀಷ್ ಭಾಷೆಗಳಲ್ಲೂ ಬಿಡುಗಡೆಯಾಗಲಿದೆಯಂತೆ. ಅಷ್ಟೇ ಅಲ್ಲ, ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ.

ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದು, ಶೂನ್ಯ ಎಂಬ ಹೊಸ ನಿರ್ದೇಶಕ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಈ ಪಾತ್ರಕ್ಕಾಗಿ ಧನಂಜಯ್ ತೂಕ ಹೆಚ್ಚಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಂಗಳೂರು-ಬೆಂಗಳೂರು ವಿಸ್ತಾಡೋಮ್ ರೈಲಿನ ಪ್ರಯಾಣದ ಬಗ್ಗೆ ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.