ಸ್ಯಾಂಡಲ್ವುಡ್ನ ಕಾಮಿಡಿ ಸ್ಟಾರ್ ಚಿಕ್ಕಣ್ಣ ಈ ಹಿಂದೆ ಚಿತ್ರರಂಗಕ್ಕೆ ಎಂಟ್ರಿ ನೀಡುವುದಕ್ಕೂ ಮೊದಲು ಗಾರೆ ಕೆಲಸ ಮಾಡಿ ಜೀವನ ಸಾಗಿಸ್ತಿದ್ರು ಅನ್ನೊದು ಎಲ್ಲರಿಗೂ ಗೊತ್ತಿದೆ. ಇದೀಗ ಲಾಕ್ಡೌನ್ ಆಗಿರುವ ಕಾರಣ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದು, ಹೀಗಾಗಿ ಸದ್ಯ ಗಾರೆ ಕೆಲಸದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ.
ಹೌದು, ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಮ್ಯಾನರಿಸಂನಿಂದಲೇ ಬೇಡಿಕೆ ಹೊಂದಿರುವ ನಟ ಚಿಕ್ಕಣ್ಣ ಮತ್ತೆ ಗಾರೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸದ್ಯ ಚಿಕ್ಕಣ್ಣ ಮೈಸೂರಿನ ಸಮೀಪದಲ್ಲಿರುವ ತೋಟದ ಮನೆಯಲ್ಲಿದ್ದಾರೆ. ಹೀಗಾಗಿ ತಮ್ಮ ತೋಟದ ಮನೆಯ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ್ದಾರೆ. ಮನೆಯ ಶೌಚಾಲಯ ಕೆಲಸವನ್ನ ಖುದ್ದಾಗಿ ಮಾಡ್ತಿದ್ದಾರೆ. ಕೈಯಲ್ಲಿ ಕರಣಿ ಹಿಡಿದು ಗಾರೆ ಕೆಲಸ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲಾ ಗಾರೆ ಕೆಲಸದ ಜೊತೆಗೆ ಕೈಯಲ್ಲಿ ಸೌಟು ಹಿಡಿದು ಅಡುಗೆ ಕೆಲಸವನ್ನ ಮಾಡುತ್ತಿದ್ದಾರೆ. ಇವರ ಜೊತೆಗೆ ಇಬ್ಬರು ಸ್ನೇಹಿತರಿದ್ದು, ಕಾಮಿಡಿ ನಟನಿಗೆ ಸಾಥ್ ನೀಡುತ್ತಿದ್ದಾರೆ.