35ನೇ ವಸಂತಕ್ಕೆ ಕಾಲಿಟ್ಟ ಬಿರುಗಾಳಿ ಚೇತನ್ ಮೊದಲ ಬಾರಿಗೆ ತನ್ನ ಮಡದಿ ಮೇಘ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ವಿಶೇಷ ಅಂದರೆ ಚೇತನ್ ತಮ್ಮ 35ನೇ ವರ್ಷದ ಹುಟ್ಟುಹಬ್ಬವನ್ನು ತುಂಬಾ ಸರಳವಾಗಿ ಹಾಗೂ ಸಾರ್ಥಕವಾಗಿ ಆಚರಿಸಿಕೊಂಡರು.
ಚೇತನ್ ಬೆಂಗಳೂರಿನ ಹೊರವಲಯದಲ್ಲಿರುವ ಪ್ರಾಣಿಗಳ ಆಶ್ರಮವೊಂದರಲ್ಲಿ, ಪಶುಗಳು, ಪಕ್ಷಿಗಳು, ಶ್ವಾನ ಹಾಗೂ ಬೆಕ್ಕುಗಳಿಗೆ ವಿಶೇಷವಾದ ಆಹಾರ ನೀಡುವ ಮೂಲಕ ಪ್ರಾಣಿಗಳ ಜೊತೆ ತನ್ನ ಹುಟ್ಟುಹಬ್ಬ ಆಚರಿಸಿ ಕೊಂಡಿದ್ದಾರೆ. ಅಲ್ಲದೆ ಆಶ್ರಮದಲ್ಲಿರುವ ಕೆಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡಿದ್ದಾರೆ.