ETV Bharat / sitara

ಖಾಲಿ ಪೇಪರ್, ಪೆನ್ ಸಿಕ್ಬಿಟ್ರೆ ಬರ್ಕೊಂಡು ಕುಳಿತಿರುತ್ತಿದ್ರು: ಕಾರ್ನಾಡ್ ಬಗ್ಗೆ ನಟ ಚರಣ್ ರಾಜ್ ಮಾತು - undefined

ಗಿರೀಶ್ ಕಾರ್ನಾಡ್ ನಿಧನಕ್ಕೆ ಸಂತಾಪ ಸೂಚಿಸಿದ ನಟ ಚರಣ್ ರಾಜ್, ಶೂಟಿಂಗ್​ ವೇಳೆ ಅವರೊಂದಿಗಿನ ಕೆಲ ಅನುಭವಗಳನ್ನು ಹಂಚಿಕೊಂಡರು.

ಬಹುಭಾಷಾ ನಟ ಚರಣ್ ರಾಜ್
author img

By

Published : Jun 11, 2019, 5:03 AM IST

ಇವತ್ತು ಬೆಳ್ಳಗೆ ನನಗೆ ನಂಬಲಾರದಂತ ವಿಷಯ ಕೇಳಿ ಬಂತು. ನಮ್ಮ ಆತ್ಮೀಯ, ಪ್ರೀತಿಯ ಗಿರೀಶ್ ಕಾರ್ನಾಡ್ ಅವರು ಇನ್ನಿಲ್ಲ ಅಂತ ತುಂಬಾನೇ ಬೇಜಾರು ಆಯ್ತು ಎಂದು ಗಿರೀಶ್ ಕಾರ್ನಾಡ್ ನಿಧನಕ್ಕೆ ಬಹುಭಾಷಾ ನಟ, ಕನ್ನಡಿಗ ಚರಣ್ ರಾಜ್, ಸಂತಾಪ ಸೂಚಿಸಿ, ಶೂಟಿಂಗ್​ ವೇಳೆ ಅವರೊಂದಿಗಿನ ಕೆಲ ಅನುಭವಗಳನ್ನು ಹಂಚಿಕೊಂಡರು.

ಮೊನ್ನೆ ಮೊನ್ನೆ ಒಂದು ತೆಲುಗು ಸಿನಿಮಾ ಮಾಡಿದೆ. ಅದರಲ್ಲಿ ಪವನ್ ಕಲ್ಯಾಣ್​ ಹೀರೋ, ಗಿರೀಶ್ ಕಾರ್ನಾಡ್ ಸಿಎಂ ಪಾತ್ರ ಮಾಡಿದ್ರು. ನಾನು ಒಂದು ಪೊಲೀಸ್ ಪಾತ್ರ ಮಾಡಿದ್ದೆ. ಫಸ್ಟ್ ಡೇ ನಾನು ಅವರನ್ನ ಸೆಟ್‌ನಲ್ಲಿ ನೋಡಿದಾಗ ಕಾಲಿಗೆ ನಮಸ್ಕಾರ ಮಾಡಿದೆ. ನನ್ನನ್ನ ನೋಡಿ, ಹೇ ಚರಣ ಚನ್ನಾಗಿದ್ದೀರಾ, ಬನ್ನಿ ಬನ್ನಿ ಅಂತ ಹೇಳಿದ್ರು. ಹಾಗೇ ಮಾತಾಡಿಕೊಂಡು ಕುಳಿತೆವು. ನನ್ನ ಬಗ್ಗೆ ತುಂಬಾನೇ ಮಾತಾಡಿದ್ರು, ನಾನೂ ಅವರ ಬಗ್ಗೆ ಹೇಳಿದೆ, ನನ್ನ ಬಳಿ ಕೆಲವು ವಿಷಯಗಳನ್ನ ಹಂಚಿಕೊಂಡರು ಎಂದರು.

ಬಹುಭಾಷಾ ನಟ ಚರಣ್ ರಾಜ್

ಸರ್, ನಾನು ಶಂಕರ್ ‌ನಾಗ್ ಅವರ ಜೊತೆ ಕೆಲ ಸಿನಿಮಾಗಳನ್ನು ಮಾಡ್ದೆ, ಆಗ ಶಂಕರ್ ‌ನಾಗ್ ಅವರು ನಿಮ್ಮ ಬಗ್ಗೆ ಹೇಳುತ್ತಿದ್ರು ನನಗೆ ಶಂಕರ್ ನಾಗ್ ಅವರು ತುಂಬಾ ಹೇಳ್ತಿದ್ರು, ನೋಡು ಚರಣ್ ನೀನು ತುಂಬಾ ಒಳ್ಳೆಯ ಕಲಾವಿದ, ಗಿರೀಶ್ ಕಾರ್ನಾಡ್ ಅವರ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡಿದ್ದೇ ಆದರೆ ನೀನು ನಿಜವಾಗಲೂ ಇನ್ನೂ ಒಳ್ಳೆಯ ಕಲಾವಿದ ಆಗುತ್ತೀಯ ಅಂತ ಹೇಳಿದ್ದರು ಅಂದೆ. ಅದಕ್ಕೆ ಕಾರ್ನಾಡ್​ ಅವರು, ಶಂಕರ್ ನಾಗ್ ತುಂಬಾ ಸ್ಪೀಡ್ ಅಪ್ಪ, ಆದ್ರೆ ವಿಧಿವಶಾತ್​ ನಮಗಿಂತ ಬೇಗ ಹೋಗಿ ಬಿಟ್ಟ ಅಂತ ತುಂಬಾ ಬೇಜಾರು ಮಾಡ್ಕೊಂಡ್ರು, ತುಂಬಾ ಸಲ ಶಂಕರು ಶಂಕರು ಅಂತಿದ್ರು. ಹೀಗಾಗಿ ತುಂಬಾ ಬೇಜಾರ್ ಆಯ್ತು ಇವತ್ತು ಎಂದರು.

ಗಿರೀಶ್ ಕಾರ್ನಾಡ್ ಅವರು ಎಲ್ಲೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾರೆ. ಅವರ ಬಗ್ಗೆ ಹೇಳ್ಬೇಕು ಅಂದ್ರೆ, ಒಂದು ನಿಮಿಷವನ್ನೂ ಶೂಟಿಂಗ್​ನಲ್ಲಿ ವೇಸ್ಟ್ ಮಾಡುತ್ತಿರಲಿಲ್ಲ. ನಾನು 6, 7 ದಿನ ಅವರ ಜೊತೆ ಇದ್ದೆ‌. ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, ಲೈಫ್​ನಲ್ಲಿ ಬ್ಯುಸಿಯಾಗಿ ಇರಬೇಕು ಅಂತ. ಹಾಗೇ ಖಾಲಿ ಪೇಪರ್, ಪೆನ್ ಸಿಕ್ಬಿಟ್ರೆ ಬರ್ಕೊಂಡು ಕುಳಿತಿರುತ್ತಿದ್ರು. ಎಷ್ಟು ಚೆನ್ನಾಗಿ ಕನ್ನಡ ಬರೆಯುತ್ತಿದ್ದರು ಅಂದ್ರೆ, ಆ ಪದಗಳು ಅರ್ಥ ಆಗುತ್ತಿರಲಿಲ್ಲ, ಎಕೆಂದರೆ ಅದೆಲ್ಲಾ ಹಳೆ ಕನ್ನಡ. ಅವರು ಸುಂದರ ಕತೆಗಳ ಬರಹಗಾರ, ಒಳ್ಳೆಯ ನಿರ್ದೇಶಕ, ಎಲ್ಲಾದಿಕ್ಕಿಂತ ಹೆಚ್ಚಾಗಿ ಒಳ್ಳೆಯ ನಟರು, ಅದಕ್ಕಿಂತ ಒಳ್ಳೆ ಮನುಷ್ಯರು.‌

ಅವರಿಗೆ ಇಷ್ಟ ಆದ್ರೆ ಮಾತ್ರ ಮಾತಾಡುತ್ತಿದ್ರು, ಇಷ್ಟ ಆಗಿಲ್ಲಾ ಅಂದ್ರೆ ಯಾರ ಬಳಿಯೂ ಮಾತಾಡಲ್ಲ. ಆದರೆ ಅವರ ಬಳಿ ನಾನು ತುಂಬಾ ಶಿಸ್ತು ಕಲಿತೆ. ಅವರಿಗೆ ತೆಲುಗು ಸರಿಯಾಗಿ ಬರುತ್ತಿರಲಿಲ್ಲ. ಅದಕ್ಕೆ ಅವರು ಶೂಟಿಂಗ್​ನಲ್ಲಿ ತೆಲುಗು ರೇಟರ್ನ ಕರೆಸಿಕೊಂಡು ಅವರೇ ಬರೆದುಕೊಂಡು, ಅದನ್ನ ಪ್ರಾಕ್ಟೀಸ್ ಮಾಡಿ ತೆಲುಗು ಡೈಲಾಗ್ ಹೇಳುತ್ತಿದ್ದರು ಅಂದ್ರೆ, ಅವರಲ್ಲಿ ಭಾಷೆಯ ಪ್ರಾಮುಖ್ಯತೆ ಅಷ್ಟು ಇತ್ತು. ಆದ್ರೆ ಇವತ್ತು ಅವರು ಇಲ್ಲ, ಅವರ ಕುಟುಂಬಕ್ಕೆ ದೇವರು ಒಳ್ಳೆಯದನ್ನು ಮಾಡಲಿ ಅಂತ ದೇವರ ಬಳಿ ಕೇಳಿಕೊಳ್ತೀನಿ ಎಂದು ಕಾರ್ನಾಡರ ನಿಧನಕ್ಕೆ ಚರಣ್ ರಾಜ್ ಸಂತಾಪ‌ ಸೂಚಿಸಿದರು.

Intro:ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಬಹುಭಾಷ ನಟ ಕನ್ನಡಿಗ ಚರಣ್ ರಾಜ್..

ಖ್ಯಾತ ಲೇಖಕ ರಂಗಕರ್ಮಿ ನಟ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.ಇನ್ನೂ ಕಾರ್ನಾಡರ ನಿಧನಕ್ಕೆ ಬಹುಭಾಷ ನಟ ಕನ್ನಡಿಗ ಚರಣ್ ರಾಜ್ ಅವರು ಸಂತಾಪ ಸೂಚಿಸಿದ್ದಾರೆ.ಇವತ್ತು ಬೆಳ್ಳಗೆ ನನಗೆ ನಂಬಲಾರದಂತ ವಿಷಯ ಕೇಳಿ ಬಂತ್ತು ನಮ್ಮ ಆತ್ಮೀಯ , ಪ್ರೀತಿ ಯ ಗಿರೀಶ್ ಕಾರ್ನಾಡ್ ಅವರು ಇನ್ನಿಲ್ಲ ಅಂತ. ನನಗೆ ತುಂಬಾನೇ ಬೇಜಾರ್ ಆಯ್ತು. ಮೊನ್ನೆ ಮೊನ್ನೆ ಒಂದು ತೆಲುಗು ಫಿಲ್ಮ್ ಮಾಡ್ದೆ. ಅದರಲ್ಲಿ ಪವನ್ ಕುಮಾರ್ ಹೀರೂ. ಗಿರೀಶ್ ಕಾರ್ನಾಡ್ ಸಿಎಂ ಪಾತ್ರ ಮಾಡಿದ್ರು. ನಾನು ಒಂದು ಪೋಲಿಸ್ ಪಾತ್ರ ಮಾಡಿದ್ದೆ. ಫಸ್ಟ್ ಡೇ ನಾನು ಅವರನ್ನ ಸೆಟ್‌ನಲ್ಲಿ ನೋಡಿದಾಗ ಕಾಲಿಗೆ ನಮಸ್ಕಾರ ಮಾಡ್ದೆ. ನನ್ನ ನೋಡ್ಬಿಟ್ಟು ಹೇ ಚರಣ ಚನ್ನಾಗಿದ್ದೀರ. ಬನ್ನಿ ಬನ್ನಿ ಅಂತ ಹೇಳಿದ್ರು. ಹಂಗೆ ಮಾತಾಡ್ಕೊಂಡು ಕುತ್ಕೊಂಡ್ವಿ ನನ್ನ ಬಗ್ಗೆ ತುಂಬಾನೇ ಮಾತಾಡುದ್ರು.ನಾನು ಅವರ ಬಗ್ಗೆ ಹೇಳ್ದೆ. ಸರ್ ನಾನು ಕನ್ನಡ 4,5 ಪಿಚರ್ ಶಂಕರ್ ‌ನಾಗ್ ಅವರ ಜೊತೆ ಮಾಡ್ದೆ ಆಗ ನಿಂಮ್ ಬಗ್ಗೆ ಹೇಳತ್ತಿದ್ರು ಅಂದೆ. ಅದಕ್ಕೆ ಅವರು ಶಂಕರ್ ನಾಗ್ ತುಂಬಾ ಸ್ಪೀಡ್ ಅಪ್ಪ, ಆದ್ರೆ ವಿಧಿವಶತ್ ನಮಗಿಂತ ಬೇಗ್ಬಿಟ ಅಂತ ತುಂಬಾ ಫೀಲ್ ಮಾಡ್ಕೊಂಡ್ರು. ನನಗೆ ಶಂಕರ್ ನಾಗ್ ಅವರು ತುಂಬಾ ಹೇಳ್ತಿದ್ರು ನೋಡು ಚರಣ್ ನೀನು ತುಂಬಾ ಒಳ್ಳೆಯ ಕಲಾವಿದ ಗಿರೀಶ್ ಕಾರ್ನಾಡ್ ಅವರ ಡೈರೆಕ್ಷನ್ ನಲ್ಲಿ ಒಂದು ಸಿನಿಮಾ ಮಾಡಿದ್ದೇ ಆದ್ರೆ. ನೀನು ನಿಜವಾಗಲೂ ಒಂದು ಇನ್ನೂ ಒಳ್ಳೆಯ ಕಲಾವಿದ ಆಗ್ತಿಯ ಅಂತ ಹೇಳಿದ್ರು. ನಾನು ಇದನ್ನ ಹೇಳ್ದಾಗ ಅವರು ಅದನ್ನೆ ಹೇಳುದ್ರು ತುಂಬಾ ಸಲ ಶಂಕರು ಶಂಕರು ಅಂತಿದ್ರು. ಆಗಾಗಿ ತುಂಬಾ ಬೇಜಾರ್ ಆಯ್ತು ಇವತ್ತು. ಗಿರೀಶ್ ಕಾರ್ನಾಡ್ ಅವರು ಎಲ್ಲೂ ಹೋಗಿಲ್ಲ ನಮ್ಮನ್ನ ಬಿಟ್ಟು ನಮ್ಮ ನಡುವೆ ಇದ್ದಾರೆ. Body:ಇನ್ನೂ ಗಿರೀಶ್ ಕಾರ್ನಾಡ್ ಅವರ ಬಗ್ಗೆ ಹೇಳ್ಬೇಕು ಅಂದ್ರೆ ಒಂದು ನಿಮಿಷವನ್ನು ಶೂಟಿಂಗ್ ನಲ್ಲಿ ವೇಸ್ಟ್ ಮಾಡ್ತಿರ್ಲಿಲ್ಲಾ.. ನಾನು 6, 7ದಿನ ಅವರ ಜೊತೆ ಇದ್ದೆ‌. ಯಾವಗ್ಲು ಒಂದು ಮಾತ್ ಹೇಳೋರು ಯಾವಗಾಲೂ ಬ್ಯುಸಿಯಾಗಿ ಇರಬೇಕು ಲೈಫ್ ನಲ್ಲಿ, ಹಾಗೇ ಕಾಲಿ ಪೇಪರ್ ಪೆನ್ ಸಿಕ್ಬಿಟ್ರೆ ಬರ್ಕೊಂಡು ಕೂತಿರ್ತಿದ್ರು... ಎಷ್ಟು ಚೆನ್ನಾಗಿ ಬರಿತ್ತಿದ್ರು ಕನ್ನಡ ಅಂದ್ರೆ. ಆ ವರ್ಡ್ ಗಳೆಲ್ಲಾ ಅರ್ಥ ಆಗ್ತಿರ್ಲೊಲ್ಲಾ. ಅದೆಲ್ಲಾ ಹಳೆ ಕನ್ನಡ. ಅವರು ಬ್ಯೂಟಿಫುಲ್ ಸ್ಟೋರಿ ರೈಟರ್, ಒಳ್ಳೆಯ ಡೈರೆಕ್ಟರ್, ಎಲ್ಲಾದಿಕ್ಕಿಂತ ಒಳ್ಳೆ ನಟರು, ಅದಕ್ಕಿಂತ ಒಳ್ಳೆ ಮನುಷ್ಯರು.‌ ಒಂದು ಒಳ್ಳೆ ಬ್ಯುಟಿಫುಲ್ ವ್ಯಕ್ತಿ ಅಂದ್ರೆ ಅದು ಗಿರೀಶ್ ಕಾರ್ನಾಡ್. ಅವರಿಗೆ ಇಷ್ಟ ಆದ್ರೆ ಮಾತ್ರ ಮಾತಡೋರು, ಇಷ್ಟ ಆಗಿಲ್ಲಾ ಅಂದ್ರೆ ಯಾರತ್ರಾನೂ ಮಾತಾಡೋಲ್ಲ. ಬಟ್ ಅವರ ಅತ್ತಿರ ನಾನು ತುಂಬಾ ಶಿಸ್ತು ಕಳ್ತೆ. ಅವರಿಗೆ ತೆಲುಗು ಸರಿಯಾಗಿ ಬರ್ತಿಲಿಲ್ಲಾ. ಅದಕ್ಕೆ ಅವರು ಶೂಟಿಂಗ್ ನಲ್ಲಿ ತೆಲುಗು ರೇಟರ್ನ ಕರ್ಸಕೊಂಡು ಅವರೇ ಬರ್ಕೊಂಡು ಅದನ್ನ ಕ್ಲೀನ್ ಹಾಗಿ, ಪ್ರಾಕ್ಟೀಸ್ ಮಾಡಿ ಡೈಲಾಗ್ ಹೇಳುವಾಗ ತೆಲುಗು ಅವರಿಗಿಂತ ಚನ್ನಾಗಿ ಹೇಳುದ್ರು. ಅಂದ್ರೆ ಬಾಷೆ ಪ್ರಾಮುಖ್ಯತೆ ಅಂಗೆ ಇತ್ತು. ಆದ್ರೆ ಇವತ್ತು ಅವರು ಇಲ್ಲ , ಅವರ ಕುಟುಂಬಕ್ಕೆ ದೇವರು ಒಳ್ಳೆದು ಮಾಡ್ಲಿ ಅಂತ ದೇವರ ಬಳಿ ಕೇಳಿಕೊಳ್ತೀನಿ..ಎಂದು ಕರ್ನಾಡರ ನಿಧನಕ್ಕೆ ಚರಣ್ ರಾಜ್ ಸಂತಾಪ‌ ಸೂಚಿಸಿದ್ರು

ಸತೀಶ ಎಂಬಿConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.