ETV Bharat / sitara

'ನನ್ನ ಮೇಲೆ ಕೋಪವಿದ್ದರೆ ಮನೆಗೆ ಬಂದು ತೀರಿಸಿಕೊಳ್ಳಿ, ಸುಳ್ಳು ಸುದ್ದಿ ಹಬ್ಬಿಸಬೇಡಿ' - ನಟ‌ ಅವಿನಾಶ್ ನಿಧನ

ನಾನು ಆರೋಗ್ಯವಾಗಿದ್ದೇನೆ. ಬೆಳಗ್ಗೆ ಒಂದು ಗಂಟೆ ವರ್ಕ್‌ಔಟ್ ಮಾಡಿದ್ದೇನೆ. ಆದ್ರೆ ಯಾರೋ ನಾನು ತೀರಿಕೊಂಡಿದ್ದೇನೆಂದು ಸುದ್ದಿ ಹಬ್ಬಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿದ್ದೇನೆಂದು ನಟ ಅವಿನಾಶ್ ತಿಳಿಸಿದ್ದಾರೆ.

actor avinash
ಹಿರಿಯ ನಟ‌ ಅವಿನಾಶ್
author img

By

Published : Jan 6, 2022, 3:12 PM IST

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅವಿನಾಶ್​​ ನಿಧನ ಹೊಂದಿದ್ದಾರೆಂಬ ಸುಳ್ಳು ಸುದ್ದಿ ಹಬ್ಬಿತ್ತು. ಇದಕ್ಕೆ ನಟ ಅವಿನಾಶ್ ಪ್ರತಿಕ್ರಿಯಿಸಿದ್ದು​​, ನಾನು ಆರೋಗ್ಯವಾಗಿದ್ದೇನೆ ಎಂದು ತಿಳಿಸಿದ್ದಾರೆ.

'ನಾನು ಆರೋಗ್ಯವಾಗಿದ್ದೇನೆ. ಬೆಳಗ್ಗೆ ಒಂದು ಗಂಟೆ ವರ್ಕ್ ಔಟ್ ಮಾಡಿ ಬಂದಿದ್ದೇನೆ. ಆದ್ರೆ ಯಾರೋ ನಾನು ತೀರಿಕೊಂಡಿದ್ದೇನೆಂದು ಸುದ್ದಿ ಹಬ್ಬಿಸಿದ್ದಾರೆ. ಸದ್ಯ ಜೇಮ್ಸ್‌ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಿರ್ಮಾಪಕರು ಹಾಗು ನಿರ್ದೇಶಕರು ಆತಂಕಕ್ಕೆ ಒಳಾಗುತ್ತಾರೆ' ಎಂದು ಹಿರಿಯ ನಟ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ತಮಿಳುನಾಡು ವಿಧಾನಸಭೆಯಲ್ಲಿ 'ಕರ್ನಾಟಕ ರತ್ನ' ಪುನೀತ್​ ರಾಜಕುಮಾರ್​ಗೆ ನಮನ

'ನನ್ನ ಮೇಲೆ ಕೋಪ ಇದ್ದರೆ ಮನೆಗೆ ಬಂದು ತೀರಿಸಿಕೊಳ್ಳಿ, ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ' ಎಂದಿದ್ದಾರೆ. ಈ ಕುರಿತು ಸೈಬರ್ ಕ್ರೈಂಗೆ ದೂರು ನೀಡಿರುವುದಾಗಿ ಅವರು ತಿಳಿಸಿದರು.

ಕೆಲವು ತಿಂಗಳ ಹಿಂದೆ ಹಿರಿಯ ಹಾಸ್ಯನಟ ದೊಡ್ಡಣ್ಣ ತೀರಿಕೊಂಡಿದ್ದಾರೆಂದು ಯಾರೋ ಕಿಡಿಗೇಡಿಗಳು ಸುದ್ದಿ ಹಬ್ಬಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.