ETV Bharat / sitara

ಅವರ ಸಿನಿಮಾಗಳು ಬಂದರೆ ನಾವು ನಂತರ ಬರುತ್ತೇವೆ ಅಂದ್ರು ಆ್ಯಕ್ಷನ್ ಪ್ರಿನ್ಸ್​​​...!

author img

By

Published : Feb 12, 2020, 7:58 PM IST

'ಓಲ್ಡ್ ಮಾಂಕ್' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ 'ಪೊಗರು' ಚಿತ್ರದ ಬಗ್ಗೆ ಮಾತನಾಡಿದ ಆ್ಯಕ್ಚನ್ ಪ್ರಿನ್ಸ್, ಮಾರ್ಚ್​ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಪ್ಲ್ಯಾನ್​​​​​​ ಮಾಡಿದ್ದೇವೆ. ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆ ದಿನಾಂಕವನ್ನು ಆದಷ್ಟು ಬೇಗ ಅನೌನ್ಸ್ ಮಾಡಲಿದ್ದೇವೆ. ಎಲ್ಲಾ ಅಂದುಕೊಂಡಂತೆ ಆದರೆ ಏಪ್ರಿಲ್‌ನಲ್ಲಿ ಪೊಗರು ರಿಲೀಸ್ ಆಗಲಿದೆ ಎಂದು ಹೇಳಿದರು.

Action prince
ಆ್ಯಕ್ಷನ್ ಪ್ರಿನ್ಸ್

ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ 'ಪೊಗರು' ಸಿನಿಮಾ ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೆ ಧ್ರುವಾ ಸಿಹಿ ಸುದ್ದಿ ನೀಡಿದ್ದಾರೆ. 'ಭರ್ಜರಿ' ಸಿನಿಮಾ ನಂತರ ಧ್ರುವಾ ಅಭಿನಯದ ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. ಧ್ರುವಾ ಸುಮಾರು ಮೂರು ವರ್ಷಗಳಿಂದ 'ಪೊಗರು' ಸಿನಿಮಾದಲ್ಲೇ ಬ್ಯುಸಿ ಇದ್ದಾರೆ.

ಧ್ರುವಾ ಸರ್ಜಾ

ಸಂಕ್ರಾತಿಗೆ ನಮ್ಮ ಸಿನಿಮಾ ರಿಲೀಸ್ ಆಗಲಿದೆ ಎಂದು ನಿರ್ದೇಶಕ ನಂದ ಕಿಶೋರ್ ಹೇಳಿದ್ದರು. ಆದರೆ ಸಂಕ್ರಾತಿ ಮುಗಿದು, ಶಿವರಾತ್ರಿ ಬರುತ್ತಿದ್ದರೂ 'ಪೊಗರು' ಸಿನಿಮಾ ಬಿಡುಗಡೆ ಆಗಿಲ್ಲ. ಆದರೆ ಇದೀಗ ಧ್ರುವಾ ಸರ್ಜಾ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. 'ಓಲ್ಡ್ ಮಾಂಕ್' ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ 'ಪೊಗರು' ಚಿತ್ರದ ಬಗ್ಗೆ ಮಾತನಾಡಿದ ಆ್ಯಕ್ಚನ್ ಪ್ರಿನ್ಸ್, ಮಾರ್ಚ್​ನಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲು ಪ್ಲ್ಯಾನ್​​​​​​ ಮಾಡಿದ್ದೇವೆ. ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆ ದಿನಾಂಕವನ್ನು ಆದಷ್ಟು ಬೇಗ ಅನೌನ್ಸ್ ಮಾಡಲಿದ್ದೇವೆ. ಎಲ್ಲಾ ಅಂದುಕೊಂಡಂತೆ ಆದರೆ ಏಪ್ರಿಲ್‌ನಲ್ಲಿ ಪೊಗರು ರಿಲೀಸ್ ಆಗಲಿದೆ ಎಂದು ಹೇಳಿದರು.

ಆದರೆ ಏಪ್ರಿಲ್​​​​ನಲ್ಲಿ ಕಿಚ್ಚ ಅಭಿನಯದ 'ಕೋಟಿಗೊಬ್ಬ-3' ಹಾಗೂ ದರ್ಶನ್​​ ಅಭಿನಯದ 'ರಾಬರ್ಟ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಧ್ರುವಾ ಹಿರಿಯರು ಬಂದರೆ ಜಾಗ ಬಿಡುತ್ತೇವೆ. ಮೊದಲು ಅವರ ಸಿನಿಮಾಗಳು ಬರಲಿ ನಂತರ ನಾವು ಬರುತ್ತೇವೆ ಎಂದು ಹೇಳುವ ಮೂಲಕ ಸೀನಿಯರ್​ ಚಿತ್ರಗಳಿಗೆ ಮೊದಲ ಆದ್ಯತೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.