ETV Bharat / sitara

ಅರ್ಜುನ್​​ ನಿರ್ದೇಶನದ 'ಕಿಸ್' ಚಿತ್ರಕ್ಕೆ ಧ್ವನಿ ನೀಡಿದ ಆ್ಯಕ್ಷನ್​ ಪ್ರಿನ್ಸ್ - ಡಾರ್ಜಿಲಿಂಗ್

ವಿರಾಟ್ ಹಾಗೂ ಶ್ರೀಲೀಲಾ ಪ್ರೇಮಿಗಳಾಗಿ ನಟಿಸಿರುವ 'ಕಿಸ್' ಚಿತ್ರಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಎ.ಪಿ. ಅರ್ಜುನ್ ಈ ಸಿನಿಮಾವನ್ನು ನಿರ್ದೇಶಿಸಿದ್ದು, ಚಿತ್ರಕ್ಕೆ ಪುನೀತ್​ ರಾಜ್​ಕುಮಾರ್ ಕೂಡಾ ಒಂದು ಹಾಡು ಹಾಡಿದ್ದಾರೆ.

ಧ್ರುವಾ ಸರ್ಜಾ
author img

By

Published : Aug 19, 2019, 12:55 PM IST

ಎ.ಪಿ.ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇನ್ನು ಅರ್ಜುನ್ ಅವರ ‘ಅದ್ದೂರಿ’ ಸಿನಿಮಾದಿಂದ ಸ್ಯಾಂಡಲ್​ವುಡ್​​​ನಲ್ಲಿ ಬ್ರೇಕ್​ ಪಡೆದ ನಟ ಧ್ರುವಾ ಸರ್ಜಾ ಇದೀಗ ಅರ್ಜುನ್ ನಿರ್ದೇಶನದ 'ಕಿಸ್' ಚಿತ್ರಕ್ಕೆ ತಮ್ಮ ಧ್ವನಿ ನೀಡಿದ್ದಾರೆ.

dhruva
ಎ.ಪಿ. ಅರ್ಜುನ್ , ಧ್ರುವಾ ಸರ್ಜಾ

ಚಿತ್ರರಂಗಕ್ಕೆ ಬಂದಾಗ ನಾನೂ ಕೂಡಾ ಹೊಸಬ. ಹೊಸಬರನ್ನೇ ಮುಂಚೂಣಿಯಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿ ನನ್ನನ್ನು ಹೇಗೆ ಜನರಿಗೆ ಪರಿಚಯಿಸಿದರೋ ಹಾಗೆ ಈಗ ಹೊಸ ನಾಯಕ ಹಾಗೂ ನಾಯಕಿಯನ್ನು ‘ಕಿಸ್’ ಚಿತ್ರದ ಮೂಲಕ ಪರಿಚಯಿಸುತ್ತಿದ್ದೀರಾ. ನಿಮ್ಮ ಚಿತ್ರಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ನಿರ್ದೇಶಕ ಅರ್ಜುನ್ ಅವರೇ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಡಿರುವ 'ಅವನು ಬೆಟ್ಟೇಗೌಡ..ಇವಳು ಚಿಕ್ಕಬೋರಮ್ಮ' ಹಾಡು ಹೊಸ ದಾಖಲೆ ಬರೆಯಲು ಮುಂದಾಗಿದೆ.

dhruva1
ಚಿತ್ರಕ್ಕೆ ಧ್ವನಿ ನೀಡುತ್ತಿರುವ ಧ್ರುವಾ

ಬೆಂಗಳೂರು, ಗೋವಾ, ಡಾರ್ಜಿಲಿಂಗ್ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ವಿರಾಟ್ ಹಾಗೂ ಶ್ರೀಲೀಲಾ ‘ಕಿಸ್’ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. KISS ಎಂದರೆ keep it simple and short ಎಂದು ಅರ್ಥವಂತೆ. 'ಕಿಸ್​​'...ತುಂಟ ತುಟಿಗಳ ಆಟೋಗ್ರಾಫ್ ಎಂಬ ಅಡಿ ಬರಹ ಇರುವ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸಂಗೀತ, ಗಿರೀಶ್​​ ಗೌಡ ಛಾಯಾಗ್ರಹಣ, ಡಾ. ಕೆ. ರವಿವರ್ಮ ಅವರ ಸಾಹಸ, ದೀಪು ಎಸ್​​​. ಕುಮಾರ್ ಸಂಕಲನ, ರವಿವರ್ಮ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಇದೆ.

ಧ್ರುವ ಸರ್ಜಾ ಕಿಸ್ ಚಿತ್ರಕ್ಕೆ ಮಾತು ಜೋಡಿಸಿದರು

ನಿರ್ದೇಶಕ ಎ ಪಿ ಅರ್ಜುನ್ ಅದ್ಧೂರಿ ಸಿನಿಮಾ ಇಂದ ಬ್ರೇಕ್ ನೀಡಿದ ಜನಪ್ರಿಯ ನಟ ಧ್ರುವ ಸರ್ಜಾ ಈಗ ಕಿಸ್ ಚಿತ್ರಕ್ಕೆ ಕೆಲವು ಮಾತುಗಳನ್ನು ತುಂಬಿದ್ದಾರೆ. ಚಿತ್ರರಂಗಕ್ಕೆ ಬಂದಾಗ ನಾನು ಹೊಸಬ, ಹೊಸಬಬರನ್ನೆ ಮುಂಚೂಣಿಯಲ್ಲಿ ಇಟ್ಟುಕೊಂಡು ನನ್ನನ್ನು ಪರಿಚಯಿಸಿದ ನಿರ್ದೇಶಕರು ಎ ಪಿ ಅರ್ಜುನ್. ನನ್ನನ್ನು ಹೇಗೆ ಪರಿಚಯಿಸಿದರೋ ಹಾಗೆ ಈಗ ಹೊಸ ನಾಯಕ ಹಾಗೂ ನಾಯಕಿ ಪರಿಚಯ ಕಿಸ್ ಮೂಲಕ ಮಾಡುತ್ತಿದ್ದೀರ. ಈ ಚಿತ್ರಕ್ಕೆ ಶುಭವಾಗಲಿ ಎಂದು ಹರಸಿದ್ದಾರೆ.

ಇನ್ನೊಂದು ಬೆಳವಣಿಗೆ ಕಿಸ್ ಚಿತ್ರದ ಬಗ್ಗೆ ಅಂದರೆ ನಿರ್ದೇಶಕ ಎ ಪಿ ಅರ್ಜುನ್ ಅವರೇ ಕಿಸ್ ಚಿತ್ರದ ನಿರ್ಮಾಪಕರಾಗಿದ್ದಾರೆ. ಈ ಮೊದಲು ರಾಷ್ಟ್ರ ಕೂಟ ಪಿಕ್ಚರ್ಸ್ ರವಿ ಕುಮಾರ್ ನಿರ್ಮಾಪಕರಾಗಿದ್ದರು. ಆದರೆ ಈಗ ಎ ಪಿ ಅರ್ಜುನ್ ಫಿಲ್ಮ್ಸ್ ಅಲ್ಲಿ ಕಿಸ್ (ಕೀಪ್ ಇಟ್ ಸಿಂಪಲ್ ಸ್ವೀಟ್) ಚಿತ್ರ ನಿರ್ದೇಶಕರ ತಕ್ಕೆಗೆ ಬಂದಿದೆ.

ಈ ಬೆಳವಣಿಗೆಯ ಮಧ್ಯೆ ಕಿಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೇಳಿರುವ ಹಾಡು ಬೆಟ್ಟೆ ಗೌಡ ವರ್ಸಸ್ ಚಿಕ್ಕ ಬೋರಮ್ಮ....ಹಾಡು ಹೊಸ ಧಾಖಲೆ ಬರೆಯಲು ಮುಂದಾಗಿದೆ.

ಬಹು ನಿರೀಕ್ಷಿತ ಕನ್ನಡ ಸಿನೆಮಾ ‘ಕಿಸ್’ ಎ ಪಿ ಅರ್ಜುನ್ ಸಾರಥ್ಯದಲ್ಲಿ (ಅಂಭಾರಿ ಅದ್ಧೂರಿರಾಟೆ ಹಾಗೂ ಐರಾವತ’  ಖ್ಯಾತಿಯ ನಿರ್ದೇಶಕ) ಬೆಂಗಳೂರುಗೋವಡಾರ್ಜೀಲಿಂಗ್ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ವಿರಾಟ್ ಹಾಗೂ ಶ್ರೀಲೀಲ ‘ಕಿಸ್’ ಚಿತ್ರದ ಯುವ ಜೋಡಿ. ವಿರಾಟ್ ಕಿರು ತೆರೆ ನಟಶ್ರೀಲೀಲ 17 ವರ್ಷದ ಮೊದಲನೇ ಪಿ ಯು ಸಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ತಿ. ಇದೊಂದು ಪ್ರೀತಿಸುವ ಹೃದಯಗಳಿಗೆ ತಯಾರಾಗುತ್ತಿರುವ ಚಿತ್ರ.ಕಿಸ್’ ಅಂದಾಕ್ಷಣ ಯಾವ ಮುಜುಗರ ಬೇಕಾಗಿಲ್ಲ. ಎ ಪಿ ಅರ್ಜುನ್ ಅವರ ‘ಕಿಸ್’ ಅಂದರೆ – ಕೀಪ್ ಇಟ್ ಸಿಂಪಲ್ ಅಂಡ್ ಶಾರ್ಟ್’ ಎಂದು ಅರ್ಥ.

ಕಿಸ್’....ತುಂಟ ತುಟಿಗಳ ಆಟೋಗ್ರಾಫ್ ಅಡಿ ಬರಹ ಇರುವ ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತಗಿರೀಷ್ ಗೌಡ ಅವರ ಛಾಯಾಗ್ರಹಣಡಾ ಕೆ ರವಿ ವರ್ಮ ಅವರ ಸಾಹಸದೀಪು ಎಸ್ ಕುಮಾರ್ ಸಂಕಲನ, ರವಿ ವರ್ಮಾ ಸಾಹಸ, ಇಮ್ರಾನ್ ಸರ್ದಾರಿಯ ನೃತ್ಯ, ರವಿ ಸಂತೆಹಕ್ಲು ಸಂಭಾಷಣೆ ಚಿತ್ರ ತಂಡದೊಂದಿಗೆ ಸೇರಿಕೊಂಡಿದೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.