ETV Bharat / sitara

ಅಪ್ಪನ ಹಾದಿಯಲ್ಲಿ ಅಭಿ: 'ಬ್ಯಾಡ್ ಮ್ಯಾನರ್ಸ್​'ನಲ್ಲಿ ಪೊಲೀಸ್ ಅಧಿಕಾರಿ - Abhishek ambarish movie

'ಬ್ಯಾಡ್ ಮ್ಯಾನರ್ಸ್' ಬಗ್ಗೆ ಕಳೆದ ಒಂದೂವರೆ ವರ್ಷಗಳಿಂದ ಸುದ್ದಿ ಕೇಳಿಬರುತ್ತಿದೆಯಾದರೂ, ಚಿತ್ರದ ಕಥೆ ಏನು, ಅಭಿಷೇಕ್ ಪಾತ್ರವೇನು ಎಂಬ ವಿಷಯವನ್ನು ಸೂರಿ ಬಹಿರಂಗಗೊಳಿಸಿರಲಿಲ್ಲ. ಇದೀಗ (ಭಾನುವಾರ) ಅಭಿಷೇಕ್ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಸ್ನೀಕ್​ ಪೀಕ್​ ವಿಡಿಯೋ ಟೀಸರ್ ಬಿಡುಗಡೆಯಾಗಿದೆ.

Abhishek plays a police officer in Bad Manners
ಅಪ್ಪನ ಹಾದಿಯಲ್ಲಿ ಅಭಿ... 'ಬ್ಯಾಡ್ ಮ್ಯಾನರ್ಸ್​'ನಲ್ಲಿ ಪೊಲೀಸ್ ಅಧಿಕಾರಿ
author img

By

Published : Oct 4, 2021, 9:57 AM IST

ಕನ್ನಡ ಚಿತ್ರರಂಗದಲ್ಲಿ ಖಾಕಿ ಖದರ್ ಕೊಟ್ಟ ಮೊದಲ ನಟರೆಂದರೆ ಅದು ಅಂಬರೀಶ್. 'ಅಂತ' ಚಿತ್ರದಿಂದ ಪ್ರಾರಂಭಿಸಿ, ಆ ನಂತರ ಹಲವು ಚಿತ್ರಗಳಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಒಂದು ಹಂತದಲ್ಲಿ ಪೊಲೀಸ್ ಪಾತ್ರ ಎಂದರೆ ಅದು ಅಂಬರೀಶ್ ಎನ್ನುವಷ್ಟು ಜನಪ್ರಿಯರಾಗಿದ್ದರು. ಈಗ ಅವರ ಅಭಿ ಸಹ ಅಪ್ಪನ ಹಾದಿಯಲ್ಲೇ ಮುಂದುವರೆದಿದ್ದಾರೆ. ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಯಂಗ್​ ರೆಬೆಲ್​ ಸ್ಟಾರ್​ ಖಾಕಿ ತೊಟ್ಟಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ಬಗ್ಗೆ ಕಳೆದ ಒಂದೂವರೆ ವರ್ಷಗಳಿಂದ ಸುದ್ದಿ ಕೇಳಿಬರುತ್ತಿದೆಯಾದರೂ, ಚಿತ್ರದ ಕಥೆ ಏನು, ಅಭಿಷೇಕ್ ಪಾತ್ರವೇನು ಎಂಬ ವಿಷಯವನ್ನು ಸೂರಿ ಬಹಿರಂಗಗೊಳಿಸಿರಲಿಲ್ಲ. ಇದೀಗ ಭಾನುವಾರ ಅಭಿಷೇಕ್ ಹುಟ್ಟುಹಬ್ಬದ ಅಂಗವಾಗಿ ಚಿತ್ರದ ಸ್ನೀಕ್​ ಪೀಕ್​ ವಿಡಿಯೋ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್​ನಲ್ಲಿ ಅಭಿಷೇಕ್, ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಬಹಿರಂಗವಾಗಿದೆ.

ಟೀಸರ್​ನಲ್ಲಿ ಖಾಕಿ ತೊಟ್ಟ ಅಭಿಷೇಕ್, ಹಲವು ಎನ್​ಕೌಂಟರ್​ಗಳನ್ನು ಮಾಡುವುದನ್ನು ನೋಡಬಹುದು. ಯಾಕೆ, ಏನು ಎಂಬ ಪ್ರಶ್ನೆಗಳಿಗೆ ಉತ್ತರ ಚಿತ್ರದಲ್ಲೇ ಸಿಗಲಿದೆ. ಬ್ಯಾಡ್ ಮ್ಯಾನರ್ಸ್ ಚಿತ್ರವು ಜನವರಿಯಲ್ಲಿ ಪ್ರಾರಂಭವಾಗಿದ್ದು, ಮಂಡ್ಯ ಮುಂತಾದ ಕಡೆ ಒಂದಿಷ್ಟು ಚಿತ್ರೀಕರಣವಾಗಿತ್ತು. ಸದ್ಯದಲ್ಲೇ ಬಾಕಿ ಉಳಿದಿರುವ ದೃಶ್ಯಗಳ ಚಿತ್ರೀಕರಣ ಮುಂದುವರೆಯಲಿದೆ ಎಂದು ಹೇಳಲಾಗುತ್ತಿದೆ.

  • " class="align-text-top noRightClick twitterSection" data="">

ಸೂರಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ 'ಬ್ಯಾಡ್ ಮ್ಯಾನರ್ಸ್'ನಲ್ಲಿ ಇಬ್ಬರು ನಾಯಕಿಯರು. ರಚಿತಾ ರಾಮ್ ಮತ್ತು ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದು, ಮಿಕ್ಕಂತೆ ತಾರಾ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರವನ್ನು ಕೆ.ಎಂ. ಸುಧೀರ್ ನಿರ್ಮಿಸುತ್ತಿದ್ದು, ಮಾಸ್ತಿ ಮಂಜು ಸಂಭಾಷಣೆ ಬರೆದರೆ, ಚರಣ್​ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಮುಂದಿನ ವರ್ಷ ಅಂಬರೀಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರವು ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 'ಸಲಗ'ಕ್ಕೆ ಎ ಸರ್ಟಿಫಿಕೇಟ್ ನೀಡಿದ ಸೆನ್ಸಾರ್ ಮಂಡಳಿ; 'ಕೋಟಿಗೊಬ್ಬ 3' ಜೊತೆಗೆ ಪೈಪೋಟಿಗೆ ರೆಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.