ಮುಂಬೈ (ಮಹಾರಾಷ್ಟ್ರ): ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಹಿಂದಿ ಭಾಷೆಯ ಮೇಲಿನ ಹಿಡಿತ ಹಾಗೂ ವಾಕ್ಚಾತುರ್ಯ ನಿಸ್ಸಂದೇಹವಾಗಿ ವಿದ್ವಾಂಸರಿಗೆ ಸಮಾನವಾಗಿದೆ. ಆದರೆ ಈ ಬಾರಿ ಅವರ ಮೊಮ್ಮಗಳು ಆರಾಧ್ಯ ಬಚ್ಚನ್ ಹಿಂದಿಯಲ್ಲಿ ತನ್ನ ವಾಕ್ ಚಾತುರ್ಯದಿಂದ ಜನರ ಮನ ಗೆದ್ದಿದ್ದಾಳೆ.
-
The Legacy continues... @SrBachchan @juniorbachchan https://t.co/khLvpcAisY
— Miten Lapsiya, the artist (@mitenlapsiya) March 13, 2022 " class="align-text-top noRightClick twitterSection" data="
">The Legacy continues... @SrBachchan @juniorbachchan https://t.co/khLvpcAisY
— Miten Lapsiya, the artist (@mitenlapsiya) March 13, 2022The Legacy continues... @SrBachchan @juniorbachchan https://t.co/khLvpcAisY
— Miten Lapsiya, the artist (@mitenlapsiya) March 13, 2022
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಮಗಳು ಆರಾಧ್ಯ ಹಿಂದಿಯಲ್ಲಿ ಕೆಲವು ಸಾಲುಗಳನ್ನು ಪಠಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್‌ನಲ್ಲಿ, ಶಾಲಾ ಸಮವಸ್ತ್ರದಲ್ಲಿ ಕಾಣಿಸಿಕೊಂಡಿರುವ ಪುಟ್ಟ ಹುಡುಗಿ ಆರಾಧ್ಯ ಹಿಂದಿ ಭಾಷೆಯ ಮಹತ್ವದ ಬಗ್ಗೆ ಮಾತನಾಡಿದ್ದಾಳೆ. ಯಾರಾದರೂ ಒಂದು ಭಾಷೆ ಕಲಿಯಬೇಕೆಂದಿದ್ದರೆ ಅದನ್ನು ಕಾವ್ಯದ ಮೂಲಕ ಕಲಿಯಬೇಕು ಎಂದು ಹೇಳಿದ್ದಾಳೆ.
ವಿಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರು ಆರಾಧ್ಯ ಅವರನ್ನು ಹೊಗಳಿದ್ದು, "ಪರಂಪರೆ ಮುಂದುವರಿಯುತ್ತದೆ" ಎಂದು ಬರೆದಿದ್ದಾರೆ. ನೆಟ್ಟಿಗರ ಕಾಮೆಂಟ್ಗೆ ಅಭಿಷೇಕ್ ಗೌರವದ ಸಂಕೇತವಾಗಿ ಜೋಡಿಸಿದ ಕೈಗಳ ಎಮೋಜಿಯನ್ನು ಬಳಸಿ ಪ್ರತಿಕ್ರಿಯೆ ನೀಡಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ವಿವಾಹದ ನಾಲ್ಕು ವರ್ಷಗಳ ನಂತರ ಅಂದರೆ 2011 ರಲ್ಲಿ ಆರಾಧ್ಯ ಜನಿಸಿದ್ದಳು.
ಇದನ್ನೂ ಓದಿ: ಕೊರೊನಾ ವಾರಿಯರ್ಸ್ಗೆ ಪೇಯ್ಟಿಂಗ್ ಮೂಲಕ ಧನ್ಯವಾದ ಅರ್ಪಿಸಿದ ಆರಾಧ್ಯ ಬಚ್ಚನ್