ETV Bharat / sitara

ನಟ ರಾಜೇಶ್ ಅಂತ್ಯಕ್ರಿಯೆಗೆ 10 ಗುಂಟೆ ಜಾಗ ನೀಡಿದ ಅಭಿಮಾನಿ: ಧನ್ಯವಾದ ಅರ್ಪಿಸಿದ ಸರ್ಜಾ - ಹಿರಿಯ ನಟ ರಾಜೇಶ್ ನಿಧನ

ಇಂದು ಅನಾರೋಗ್ಯದಿಂದ ನಿಧನರಾದ ಹಿರಿಯ ನಟ ರಾಜೇಶ್​ ಅವರ ಅಂತ್ಯಕ್ರಿಯೆಗೆ ವ್ಯಕ್ತಿಯೋರ್ವರು 10 ಗುಂಟೆ ಜಾಗ ನೀಡಿ ಅಭಿಮಾನ ಮೆರೆದಿದ್ದಾರೆ. ಈ ಸಂಬಂಧ ನಟ ಅರ್ಜುನ್​ ಸರ್ಜಾ ಅವರು ಅಭಿಮಾನಿಗೆ ಧನ್ಯವಾದ ಅರ್ಪಿಸಿದ್ದಾರೆ.

A fan given his land for Actor Rajesh funeral
ನಟ ರಾಜೇಶ್ ಅಂತ್ಯಕ್ರಿಯೆಗೆ ಜಾಗ ನೀಡಿದ ಅಭಿಮಾನಿ
author img

By

Published : Feb 19, 2022, 3:18 PM IST

Updated : Feb 19, 2022, 3:54 PM IST

ಬೆಂಗಳೂರು: ಅನಾರೋಗ್ಯದಿಂದ ಇಂದು ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ರಾಜೇಶ್ ಅವರ ಅಂತ್ಯಕ್ರಿಯೆಯು ಗೋವಿಂದಪುರದಲ್ಲಿ ನಡೆಯಲಿದೆ ಎಂದು ಅವರ ಅಳಿಯ ಹಾಗೂ ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಹಿರಿಯ ನಟ ರಾಜೇಶ್​ ಅಂತ್ಯಕ್ರಿಯೆ ಜಾಗ ನೀಡಿದ ಅಭಿಮಾನಿಗೆ ಸರ್ಜಾ ಧನ್ಯವಾದ ಅರ್ಪಿಸಿದರು

ರಾಜೇಶ್ ಅವರ ಅಭಿಮಾನಿ ಸಿದ್ದಲಿಂಗಯ್ಯ ಎಂಬುವರು ಅಂತ್ಯಕ್ರಿಯೆಗಾಗಿ ತಮ್ಮ 10 ಗುಂಟೆ ಜಾಗವನ್ನು ನೀಡಿದ್ದಾರೆ. ಜಾಗಕ್ಕೆ ಹಣ ತೆಗೆದುಕೊಳ್ಳಲು ಎಷ್ಟೇ ಕೇಳಿದರೂ ಅವರು ಸ್ವೀಕರಿಸಲಿಲ್ಲ. ಈ ಹಿಂದೆ ಅನೇಕ ಸಲ ರಾಜೇಶ್​ ಅವರು ಸಿದ್ದಲಿಂಗಯ್ಯರ ಮನೆಗೆ ತೆರಳಿದ್ದರು. ಅಭಿಮಾನದ ರೂಪದಲ್ಲಿ ಹೊನ್ನಮ್ಮ ಎಂಬುವರ ಮಗ ಸಿದ್ದಲಿಂಗಯ್ಯ ಈ ಜಾಗ ನೀಡಿದ್ದಾರೆ. ಅವರಿಗೆ ನಾವು ಧನ್ಯವಾದ ತಿಳಿಸುತ್ತೇವೆ ಎಂದು ಅರ್ಜುನ್​ ಸರ್ಜಾ ಹೇಳಿದ್ದಾರೆ.

ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜೇಶ್ ಅವರು ಇಂದು ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ.

ಇದನ್ನೂ ಓದಿ: ನಟ ರಾಜೇಶ್ ವಿಧಿವಶ.. ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ

Last Updated : Feb 19, 2022, 3:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.