ಮುನ್ನುಡಿ ಸಿಮಿಮಾದ ಮೂಲಕ ನಟನಾ ರಂಗಕ್ಕೆ ಪರಿಚಿತರಾದ ಚೆಂದುಳ್ಳಿ ಚೆಲುವೆ ಛಾಯಾ ಸಿಂಗ್ ರವರ ದಾಂಪತ್ಯಕ್ಕೆ 8 ವರ್ಷ ತುಂಬಿದೆ.
ಮುನ್ನುಡಿ ಸಿಮಿಮಾದ ಮೂಲಕ ಪರಿಚಿತರಾದ ಛಾಯಾ ಸಿಂಗ್ ಇಂದು ಕಿರುತೆರೆ ಪ್ರಿಯರ ಪ್ರೀತಿಯ ಜನನಿ, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಂದಿನಿ ಧಾರಾವಾಹಿಯಲ್ಲಿ ಜನನಿಯಾಗಿ ಅಭಿನಯಿಸುತ್ತಿರುವ ಛಾಯಾ ಸಿಂಗ್ ನಟಿಸಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳಾದರೂ ಇಂದಿಗೂ ಸಿನಿ ಪ್ರಿಯರ ಮನದಲ್ಲಿ ಹಸಿರಾಗಿದ್ದಾರೆ.
ತಮ್ಮ ಮೊದಲ ಚಿತ್ರಕ್ಕೆ ರಾಷ್ಟ ಪ್ರಶಸ್ತಿ ಪಡೆದ ರಜಪೂತ ಕುವರಿ ಛಾಯಾ ಸಿಂಗ್ ಮುಂದೆ ಹಸೀನಾ, ತುಂಟಾಟ, ಚಿಟ್ಟೆ, ರೌಡಿ ಅಳಿಯ, ಆಕಾಶ ಗಂಗೆ, ಬಲಗಾಲಿಟ್ಟು ಒಳಗೆ ಬಾ, ಪ್ರೀತಿಸಲೇಬೇಕು, ಸಖ ಸಖಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಸಿನಿ ರಂಗಕ್ಕೆ ಛಾಯಾ ಸಿಂಗ್ ಬಂದು ಇಪ್ಪತ್ತು ವರ್ಷಗಳಾಗಿದ್ದು, ಇವರು ಬಣ್ಣ ಹಚ್ಚಿರುವ ಸಿನಿಮಾಗಳ ಸಂಖ್ಯೆ ಮೂವತ್ತು. ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ. ಪಾತ್ರಗಳ ಆಯ್ಕೆಯಲ್ಲಿ ಅಳೆದು ತೂಗಿ ಮಾಡಿದ ಕಾರಣವೇ ಅವರಿಂದು ಕೇವಲ ಮೂವತ್ತು ಸಿನಿಮಾಗಳಲ್ಲಷ್ಟೇ ನಟಿಸಿದ್ದು, ಜನರ ಮನದಲ್ಲಿ ಅವರ ಅಭಿನಯ ಅಚ್ಚೊತ್ತಿ ಬಿಟ್ಟಿದೆ.
ಇದೀಗ ನಂದಿನಿಯ ಜನನಿ ಆಗಿ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಛಾಯಾ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಇಂದಿಗೆ ಎಂಟು ವರ್ಷಗಳು ಸಂದಿವೆ. ಇನ್ನೂ ಅವರ ಪತಿ ಕೂಡಾ ನಟರು (ಧಾರಾವಾಹಿ). ಅನಾಥಪುರುಡು ವೀಡು ಸಿನಿಮಾದಲ್ಲಿ ಅಭಿನಯಿಸಿದ್ದ ಕೃಷ್ಣರನ್ನು ಪ್ರೀತಿಸಿದ ಛಾಯಾ, ಗುರು ಹಿರಿಯರ ಒಪ್ಪಿಗೆ ಪಡೆದು 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಒಂದಷ್ಟು ಧಾರಾವಾಹಿಗಳಲ್ಲಿ ಜೊತೆಯಾಗಿ ತೆರೆ ಹಂಚಿಕೊಂಡಿದೆ ಈ ಜೋಡಿ.